Asianet Suvarna News Asianet Suvarna News

Puneeth Rajkumar: ಅಪ್ಪು ಅಗಲುವ ಹಿಂದಿನ ರಾತ್ರಿ ಆದದ್ದೇ ಬೇರೆ, ಮಗಳನ್ನು ರೌಂಡ್ಸ್ ಕರೆದೊಯ್ಯಲೇ ಇಲ್ಲ

ಅವತ್ತು ಗುರುಕಿರಣ್ ಮನೆಯ ಸಂತೋಷಕೂಟದಿಂದ ಬೇಗ ಹೊರಬಂದ ಪುನೀತ್‌ ಮಗಳನ್ನು ರೌಂಡ್ಸ್ ಕರೆದುಕೊಂಡು ಹೋಗಬೇಕಿತ್ತು. ಆದರೆ ಅವತ್ತು ರಾತ್ರಿ ಆದದ್ದೇ ಬೇರೆ! ಇವತ್ತಿಗೂ ಚಿಕ್ಕ ಮಗಳು ವಂದಿತಾ ಅದನ್ನು ನೆನೆಸಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. 
 

What happened the night before of Puneeth Rajkumars demise
Author
Bengaluru, First Published Nov 9, 2021, 5:31 PM IST
  • Facebook
  • Twitter
  • Whatsapp

ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ನಮ್ಮನ್ನಗಲಿ 12 ದಿನ ಕಳೆದಿವೆ. ಆದರೆ ಎಷ್ಟೋ ಜನರಿಗೆ ಅವರ ಅಗಲಿಕೆ ಇನ್ನೂ ದುಃಸ್ವಪ್ನದಂತಿದೆ. ನಿನ್ನೆ ತಮಿಳು ನಟ ಸಿದ್ದಾರ್ಥ (Siddhartha) ಪುನೀತ್ ಸಮಾಧಿಯ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ ಮಾತು - ಅಪ್ಪು (Appu) ಇಲ್ಲ ಅನ್ನೋದನ್ನು ಮನಸ್ಸು ಒಪ್ಪಿಕೊಳ್ತಾನೇ ಇಲ್ಲ. ಅವರು ನಮ್ಮನ್ನೆಲ್ಲ ಬಿಟ್ಟು ಹೋಗಬಾರದಿತ್ತು. ಇದು ಪುನೀತ್‌ ಅವರನ್ನು ಇಷ್ಟಪಡುವ, ಇಷ್ಟ ಪಡದ ಎಲ್ಲರ ಮಾತೂ ಹೌದು.

ಏಕೆಂದರೆ ಪುನೀತ್ ಅವರು ಬದುಕಿದ್ದಾಗ ಅವರ ಬಗ್ಗೆ ಅಂಥಾ ಆಸಕ್ತಿ ತೋರದವರೂ ಅವರು ತೀರಿಕೊಂಡ ಮೇಲೆ ಕಣ್ಣೀರುಗರೆಯುತ್ತಿದ್ದಾರೆ. ಅಪ್ಪು ಸಡನ್ನಾಗಿ ಇಹಲೋಕ ಯಾತ್ರೆ ಮುಗಿಸಿದ್ದು, ಅವರು ತೀರಿದ ಬಳಿಕ ಹೊರಬಂದ ಅವರ ಸದ್ಗುಣಗಳು ಅವರ ಬಗ್ಗೆ ಕನ್ನಡಿಗರೆಲ್ಲರೂ ದುಃಖಿಸುವ ಹಾಗೆ ಮಾಡಿದೆ. ಇದೆಲ್ಲ ಒಂದು ಕಡೆಯಾದರೆ ಪುನೀತ್ ಅವರ ಕಿರಿಯ ಮಗಳ ದುಃಖ ಮತ್ತೊಂದು ಲೆವೆಲ್‌ನದು. 

ತಂದೆಗೆ ಪೂಜೆ ಸಲ್ಲಿಸಿ SSLC ಪರೀಕ್ಷೆ ಬರೆದ ಅಪ್ಪು ಮಗಳು

ಎಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ಅವರ ಕಿರಿಯ ಪುತ್ರಿ ಇನ್ನೂ ಚಿಕ್ಕ ವಯಸ್ಸಿನ ಹುಡುಗಿ ವಂದಿತಾ. ಈಕೆ ಬೆಂಗಳೂರಿನ ಪ್ಯಾಲೆಸ್ ರೋಡ್‌ನಲ್ಲಿರುವ ಪ್ರತಿಷ್ಠಿತ ಸೋಫಿಯಾ ಶಾಲೆಯಲ್ಲಿ 10ನೇ ಕ್ಲಾಸ್ ಓದುತ್ತಿದ್ದಾಳೆ. ದೊಡ್ಡ ಮಗಳು ಧೃತಿ ಅಮೆರಿಕಾದಲ್ಲಿ ಓದುತ್ತಿದ್ದಾಳೆ. ತನ್ನಿಬ್ಬರು ಮಕ್ಕಳನ್ನು ಅಪ್ಪು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು. ದೊಡ್ಡ ಮಗಳ ಜೊತೆಗೆ ಬಿಡುವಿದ್ದಾಗಲೆಲ್ಲ ವೀಡಿಯೋ ಕಾಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಪುನೀತ್ ಓದಿದ್ದು 10ನೇ ಕ್ಲಾಸ್ ವರೆಗೆ. ಆದರೆ ಅವರಿಗಿದ್ದ ಜ್ಞಾನ ಅಪಾರ. ಪುನೀತ್‌ ಅವರಿಗೆ ತನ್ನಿಬ್ಬರು ಮಕ್ಕಳು ಶಿಕ್ಷಣದಲ್ಲೂ ಸಾಧನೆ ಮಾಡಬೇಕು ಅನ್ನುವ ಆಸೆ ಇತ್ತು.

ಹಾಗೆ ನೋಡಿದರೆ ಅವರಿಗೆ ತನ್ನಿಬ್ಬರು ಮಕ್ಕಳು ಮಾತ್ರ ಅಲ್ಲ, ಎಲ್ಲ ಮಕ್ಕಳಿಗೂ ವಿದ್ಯೆ ಸಿಗಬೇಕು, ಎಲ್ಲ ಮಕ್ಕಳ ಬಾಲ್ಯ ಚೆನ್ನಾಗಿರಬೇಕು ಎಂಬ ಹಂಬಲ ಇತ್ತು ಹೀಗಾಗಿಯೇ ಅವರು ಸಾವಿರಾರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣ, ಕಾಳಜಿಯ ಹೊಣೆ ಹೊತ್ತಿದ್ದರು. ಮಕ್ಕಳನ್ನು ಅಷ್ಟು ಇಷ್ಟ ಪಡುವ ಪುನೀತ್‌ ಅವರನ್ನು ಕಂಡರೆ ಮಕ್ಕಳಿಗೂ ಅಷ್ಟೇ ಇಷ್ಟ. ಕಲ್ಮಶಗಳಿಲ್ಲದ ವ್ಯಕ್ತಿಗಳನ್ನು ಮಾತ್ರ ಕಲ್ಮಶಗಳಿಲ್ಲದ ಶುದ್ಧ ಮನಸ್ಸಿನ ಮಕ್ಕಳು ಇಷ್ಟಪಡುತ್ತಾರೆ. ಪುನೀತ್‌ ಇಡೀ ವ್ಯಕ್ತಿತ್ವವೇ ಕಲ್ಮಶ ರಹಿತ. ಹೀಗಾಗಿ ಅವರ ಮ್ಯಾನರಿಸಂ, ನಟನೆಯ ಜೊತೆಗೆ ವ್ಯಕ್ತಿಯಾಗಿಯೂ ಪುನೀತ್‌ ಮಕ್ಕಳ ಅಚ್ಚುಮೆಚ್ಚು. 

ಅಪ್ಪುವಿಗೆ ಪಿಂಡ ಪ್ರದಾನ ಮಾಡಿದ ನಟ ವಿನೋದ್‌ ರಾಜ್‌

ಹೀಗೆ ಎಲ್ಲರು ಮೆಚ್ಚುವ ನಟನಾಗಿದ್ದರೂ, ಬಹಳ ಬ್ಯುಸಿ ಇರೋ ಸ್ಟಾರ್ ಆಗಿದ್ದರೂ ಪುನೀತ್‌ ತನ್ನ ಮಗಳ ಮುದ್ದಿನ ಅಪ್ಪ. ತನ್ನ ಬಿಡುವಿಲ್ಲದ ಶೆಡ್ಯೂಲ್‌ಗಳ ನಡುವೆಯೂ ಮಗಳಿಗೆ ಕೊಡಬೇಕಾದ ಟೈಮನ್ನು ಕೊಟ್ಟೇ ತೀರುತ್ತಿದ್ದರು. ಅವರು ಮಗಳ ಧೃತಿ ಇಲ್ಲಿರುವಾಗ ಇಬ್ಬರೂ ಮಕ್ಕಳ ಜೊತೆಗೆ ದಿನದ ಒಂದಿಷ್ಟು ಸಮಯ ಕಳೆಯುತ್ತಿದ್ದರು. ಆಕೆ ಹೋದ ಮೇಲೆ ಕಿರಿಯ ಮಗಳ ಜೊತೆ ಸಮಯ ಕಳೆಯುತ್ತಿದ್ದರು. 

ಆದರೆ ಪುನೀತ್ ಕೊನೆಯ ದಿನ ಮಾತ್ರ ಕಿರಿಯ ಮಗಳ ಪಾಲಿಗೆ ಅತ್ಯಂತ ನೋವಿನ ದಿನ. ಪುನೀತ್‌ ಅವತ್ತು ರಾತ್ರಿ ಗುರುಕಿರಣ್‌ (Gurukiran) ಅವರ ಮನೆಯ ಸಂತೋಷಕೂಟಕ್ಕೆ ಪತ್ನಿ ಅಶ್ವಿನಿ ಅವರ ಜೊತೆಗೆ ಹೋಗಿದ್ದರು. ಅಲ್ಲಿಂದ ವಾಪಾಸ್‌ ಬಂದು ಮಗಳನ್ನು ರೌಂಡ್ಸ್ ಕರೆದುಕೊಂಡು ಹೋಗುವ ಪ್ಲಾನ್ ಇತ್ತು. ಆದಕ್ಕಾಗಿ ಉಳಿದವರಿಗಿಂತ ಮೊದಲೇ ಅವರು ಪಾರ್ಟಿಯಿಂದ ಮನೆಗೆ ಹೊರಟಿದ್ದರು.

ಪುನೀತ್ ರೀತಿ ಇನ್ನೊಬ್ಬ ವ್ಯಕ್ತಿ​ ಇರಲು ಸಾಧ್ಯವಿಲ್ಲ: ನಟ ಸಿದ್ದಾರ್ಥ್

ಅಪ್ಪನಿಗಾಗಿ ಕಾಯುತ್ತಿದ್ದ ಮಗಳು ಕಾದು ಕಾದು ಹಾಗೇ ನಿದ್ದೆ ಹೋಗಿದ್ದಳು. ನಿದ್ದೆ ಮಾಡುತ್ತಿದ್ದ ಮಗಳನ್ನು ಎಬ್ಬಿಸೋಕೆ ಮನಸ್ಸಾಗದೇ ನಾಳೆ ರೌಂಡ್ಸ್‌ ಕರೆದುಕೊಂಡು ಹೋದರಾಯ್ತು ಅಂತ ಪುನೀತ್‌ ನಿದ್ದೆ ಹೋದರು. ಕೊನೆಗೂ ಮಗಳಿಗೆ ಮತ್ತೆ ಅಪ್ಪನ ಜೊತೆಗೆ ರೌಂಡ್ಸ್ ಹೋಗುವ ಭಾಗ್ಯ ಸಿಗಲೇ ಇಲ್ಲ. ಅದನ್ನು ನೆನೆಸಿ ಮಗಳು ಬಿಕ್ಕಿಬಿಕ್ಕಿ ಅಳುತ್ತಾಳೆ. ತಾಯಿ ಅಶ್ವಿನಿ ಅವರಿಗೂ ಮಗಳನ್ನ ಹೇಗೆ ಸಮಾಧಾನ ಮಾಡಬೇಕು ಅಂತ ತೋಚುವುದಿಲ್ಲ.

Follow Us:
Download App:
  • android
  • ios