ಕೃಷ್ಣ ಜನ್ಮ ಸ್ಥಾನ ಸೇರಿದ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ; 'ಕುರುಕ್ಷೇತ್ರ'ದಲ್ಲಿ ಆಗಿದ್ದ ಎಡವಟ್ಟು ಏನು?
ಹಿಟ್ ಸಿನಿಮಾ ಕುರುಕ್ಷೇತ್ರ ತಂದುಕೊಟ್ಟ ಎಡವಟ್ಟು. ನಟ ಆದ್ಮೇಲೆ ಈಗ ನಿರ್ಮಾಪಕರ ಜೈಲು ವಾಸ ಶುರು...ಅಷ್ಟಕ್ಕೂ ಆಗುತ್ತಿರುವುದು ಏನು?
2019ರಲ್ಲಿ ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಸಿನಿಮಾ ಅಂದ್ರೆ ಕುರುಕ್ಷೇತ್ರ. 3ಡಿ ಮೋಡಿಯಲ್ಲಿ ಪೌರಾಣಿಕ ಯುದ್ಧದ ಸಿನಿಮಾವನ್ನು ನಿರ್ಮಾಪಕರಾದ ಮುನಿರತ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದರು. ದರ್ಶನ್ ಕುರುವಂಶದ ದೊರೆ ದುರ್ಯೋಧನನಾಗಿ ಅಬ್ಬರಿಸಿದ್ದರು. ಅಚ್ಚರಿ ಅಂದ್ರೆ ಈಗ ಇಬ್ಬರು ಕೂಡ ಜೈಲಿನಲ್ಲಿದ್ದಾರೆ. ಹಾಗಾದ್ರೆ ಕುರುಕ್ಷೇತ್ರದ ಶಾಪವೇ ನಟ, ನಿರ್ಮಾಪಕರ ಜೈಲುವಾಸಕ್ಕೆ ಕಾರಣನಾ..?
ಯೆಸ್!! ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಜೈಲು ಪಾಲಾಗಿದ್ದಾರೆ. ಜಾತಿನಿಂದನೆ ಹಾಗೂ ಜೀವ ಬೆದರಿಕೆ ಕೇಸ್‌ನಲ್ಲಿ ಮುನಿರತ್ನರನ್ನು ಬಂಧಿಸಲಾಗಿದೆ. ಈ ಬಗ್ಗೆ ರಾಜಕೀಯ ಕೆಸರೆರಚಾಟಗಳು ನಡೆಯುತ್ತಿದೆ. ಈ ರಾಜಕೀಯವನ್ನು ಪಕ್ಕಕ್ಕಿಟ್ಟು ನೋಡೋದಾದರೆ ಕನ್ನಡ ಚಿತ್ರರಂಗದಲ್ಲಿ ಮುನಿರತ್ನ ಪ್ರತಿಷ್ಠಿತ ನಿರ್ಮಾಪಕ ಆಗಿದ್ದವರು. ಅಷ್ಟೇ ಅಲ್ಲದೆ ನಿರ್ಮಾಪಕರ ಸಂಘದ ಅಧ್ಯಕ್ಷ ಕೂಡ ಆಗಿದ್ರು. 2002ರಲ್ಲಿ ಕಂಬಾಲಪಲ್ಲಿ ಅನ್ನೋ ಸಿನಿಮಾ ನಿರ್ಮಿಸೋ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಮುನಿರತ್ನ ಸ್ಯಾಂಡಲ್‌ವುಡ್‌ನ ಅನೇಕ ಬಿಗ್ ಹೀರೋಗಳ ಜೊತೆಗೆ ಸಿನಿಮಾ ಮಾಡಿದ್ದಾರೆ. ಉಪೇಂದ್ರ ನಟನೆಯ ರಕ್ತಕಣ್ಣೀರು ಮತ್ತು ಕಠಾರಿವೀರ ಸುರಸುಂದರಾಂಗಿ ಸಿನಿಮಾಗಳ ನಿರ್ಮಾಪಕ ಇವರೇ.
ಸೈಮಾದಲ್ಲಿ ಕಾಟೇರನ ಕಮಾಲ್; ಹೀರೋ ಜೈಲಿನಲ್ಲಿದ್ದರೆ ಇಡೀ ಸಿನಿಮಾ ತಂಡ ಸಂಭ್ರಮದಲ್ಲಿದ್ದಾರೆ!
2019ರಲ್ಲಿ ಮುನಿರತ್ನ ಕುರುಕ್ಷೇತ್ರ ಪೌರಾಣಿಕ ಯುದ್ಧ ಕಥೆಯನ್ನ ಬಿಗ್ ಸ್ಕ್ರೀನ್ ಮೇಲೆ ತರೋದಕ್ಕೆ ಪ್ಲಾನ್ ಮಾಡಿದ್ದರು. ದುರ್ಯೋಧನ ಪಾತ್ರಕ್ಕೆ ದರ್ಶನ್ ಕಾಸ್ಟ್ ಮಾಡಿದ್ರು. ಬಹುಭಾಷಾ ನಟರುಗಳು, ತ್ರಿಡಿ ತಂತ್ರಜ್ಞಾನ.. ಆವತ್ತಿಗೆ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಆಗಿ ಮೂಡಿಬಂದಿತ್ತು ಕುರುಕ್ಷೇತ್ರ. ಕುರುಕ್ಷೇತ್ರ ಬಂದಿದ್ದೂ ಆಯ್ತು ಯಶಸ್ಸು ಕಂಡಿದ್ದು ಆಯ್ತು. ಆದ್ರೆ ಈಗ ಅಚ್ಚರಿ ಅಂದ್ರೆ ಈ ಕುರುಕ್ಷೇತ್ರದ ನಿರ್ಮಾಪಕ ಮತ್ತು ನಟ ಇಬ್ಬರೂ ಕೂಡ ಜೈಲು ಸೇರಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೂರು ತಿಂಗಳಿಂದ ಜೈಲಿನಲ್ಲಿದ್ದರೆ, ಮುನಿರತ್ನ ಜೀವ ಬೆದರಿಕೆ ಕೇಸ್‌ನಲ್ಲಿ ಅಂದರ್ ಆಗಿದ್ದಾರೆ.
ಸೀರಿಯಲ್‌ನಲ್ಲಿ ಸೀರೆ ಹಾಕೋ ಅನುಷಾ ಕಿಣಿ; ಇನ್‌ಸ್ಟಾಗ್ರಾಂನಲ್ಲಿ ಬದಲಾದ ಅವತಾರ ನೋಡಿ ಎಲ್ಲರೂ ಶಾಕ್!
ಸಾಮಾನ್ಯವಾಗಿ ಕುರುಕ್ಷೇತ್ರ ನಾಟಕ ಮಾಡಿದ್ರೆ ಅದನ್ನ ಮಾಡಿದ ಕಲಾವಿದರಿಗೆ , ಆಯೋಜಕರಿಗೆ ತೊಂದರೆ ಆಗುತ್ತೆ ಅನ್ನೋ ಮಾತು ರಂಗಭೂಮಿಯಲ್ಲಿ ಇತ್ತು. ಇದೀಗ ಸಿನಿ ರಂಗದಲ್ಲೂ ಇದೇ ಮಾತು ಕೇಳಿ ಬರುತ್ತಿದೆ. ಮುನಿರತ್ನ ಮತ್ತು ದರ್ಶನ್‌ಗೆ ಕುರುಕ್ಷೇತ್ರದ ಶಾಪವೇ ಅಂಟಿಕೊಂಡಿದೆ ಅನ್ನೋ ಮಾತುಗಳು ಕೇಳಿಬರ್ತಾ ಇದೆ. ಇದು ನಿಜವೋ ಇಲ್ಲವೋ ಗೊತ್ತಿಲ್ಲ.. ಒಟ್ನಲ್ಲಿ ಕಾಕತಾಳೀಯ ಅನ್ನುವಂತೆ ಈ ಕುರುಕ್ಷೇತ್ರ ಸಿನಿಮಾದ ನಟ, ನಿರ್ಮಾಪಕ ಇಬ್ಬರೂ ಕೃಷ್ಣ ಜನ್ಮ ಸ್ಥಾನ ಸೇರಿರೋದಂತೂ ಸತ್ಯ.