- Home
- Entertainment
- Sandalwood
- ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ಅರ್ಯನ್ ಖಾನ್ ಕನ್ನಡಿಗರ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿಲ್ಲ. ಆ ಘಟನೆ ನಡೆದಾಗ ನಾನು ಅಲ್ಲಿಯೇ ಇದ್ದೇ ಅವರು ತಮ್ಮ ಮ್ಯಾನೇಜರ್ ಕಮ್ ಸ್ನೇಹಿತನಿಗೆ ಸನ್ನೆ ಮಾಡಿದ್ದು ಜನರಿಗಲ್ಲ ಎಂದು ನಟ ಝೈದ್ ಖಾನ್ ಹೇಳಿದ್ದಾರೆ.

ಸ್ನೇಹಿತನಿಗೆ ಸನ್ನೆ ಮಾಡಿದ್ದು
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿಲ್ಲ. ಆ ಘಟನೆ ನಡೆದಾಗ ನಾನು ಅಲ್ಲಿಯೇ ಇದ್ದೇ ಅವರು ತಮ್ಮ ಮ್ಯಾನೇಜರ್ ಕಮ್ ಸ್ನೇಹಿತನಿಗೆ ಸನ್ನೆ ಮಾಡಿದ್ದು ಜನರಿಗಲ್ಲ ಎಂದು ನಟ ಝೈದ್ ಖಾನ್ ಹೇಳಿದ್ದಾರೆ.
ತಪ್ಪಾಗಿ ಅರ್ಥೈಸಲಾಗಿದೆ
ಬಳ್ಳಾರಿಯಲ್ಲಿಂದು ಮಾತನಾಡಿದ ಅವರು ಜನರನ್ನು ನಿಯಂತ್ರಣ ಮಾಡುವುದು ಸ್ವಲ್ಪ ಕಷ್ಟವಾಗಿತ್ತು. ಅಗ ಬಾಲ್ಕನಿಯಲ್ಲಿ ಬಂದ ಅರ್ಯನ್ ಖಾನ್ ತಮ್ಮ ಸ್ನೇಹಿತನ ಜೊತೆ ಮಾತನಾಡಿದ್ದು ಅದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದರು.
ರಾ ಲವ್ ಸ್ಟೋರಿ ಇರೋ ಸಿನಿಮಾ
ಇನ್ನೂ ಕಲ್ಟ್ ಸಿನಿಮಾದ ಪ್ರಚಾರಕ್ಕೆ ಬಂದಿರೋ ಝೈದ್ ಖಾನ್ ಇದೊಂದು ಕೌಟುಂಬಿಕ ಮತ್ತು ರಾ ಲವ್ ಸ್ಟೋರಿ ಇರೋ ಸಿನಿಮಾ ಜನರು ಇದನ್ನು ಇಷ್ಟ ಪಡ್ತಾರೆ. ಆನಿಮಲ್ , ಅರ್ಜುನ್ ರೆಡ್ಡಿ ಮಾದರಿಯಲ್ಲಿ ಕನ್ನಡದ ನೆಲಕ್ಕೆ ತಕ್ಕಂತೆ ಸಿನಿಮಾ ಮಾಡಲಾಗಿದೆ ಎಂದರು.
ಜೈಲಿಗೆ ಹೋಗಿ ಆಶೀರ್ವಾದ ಪಡೆಯುವೆ
ನಟ ದರ್ಶನ್ ನನಗೆ ಅಪ್ತರಾಗಿದ್ದು ಕಲ್ಟ್ ಸಿನಿಮಾ ಬಿಡುಗಡೆ ವೇಳೆ ಅವರು ರಿಲೀಸ್ ಆಗುವ ವಿಶ್ವಾಸವಿದೆ. ರಿಲೀಸ್ ಅಗದೇ ಇದ್ರೇ ಜೈಲಿಗೆ ಹೋಗಿ ಆಶೀರ್ವಾದ ಪಡೆಯುವೆ ಎಂದರು.
ಯಾರನ್ನು ಯಾರು ಬೆಳೆಸಲ್ಲ
ಇನ್ನೂ ಸಿನಿಮಾ, ರಾಜಕೀಯ ಯಾವುದೇ ರಂಗವಿರಲಿ ಯಾರನ್ನು ಯಾರು ಬೆಳೆಸಲ್ಲ ನಾವೇ ಬೆಳಿಯಬೇಕು. ಸೀನಿಯರ್ ನಟರು ಸಪೋರ್ಟ್ ಮಾಡ್ತಾರೆ ಆದ್ರೇ ನಾವೆ ಬೆಳೆಯಬೇಕಲ್ವಾ ಎಂದು ಝೈದ್ ಖಾನ್ ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

