ಸೈಮಾದಲ್ಲಿ ಕಾಟೇರನ ಕಮಾಲ್; ಹೀರೋ ಜೈಲಿನಲ್ಲಿದ್ದರೆ ಇಡೀ ಸಿನಿಮಾ ತಂಡ ಸಂಭ್ರಮದಲ್ಲಿದ್ದಾರೆ!
4 ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ದರ್ಶನ್ ಚಿತ್ರ. ಇಡೀ ಚಿತ್ರತಂಡ ಸಂಭ್ರಮ ಜೋರಾಗಿದೆ.
ಸೈಮಾ ಪ್ರಶಸ್ತಿ 2024 ಪ್ರಧಾನ ಸಮಾರಂಭ ಈ ವರ್ಷ ದುಬೈನಲ್ಲಿ ಅದ್ಧೂರಿಯಾಗಿ ನೇರವೇರಿದೆ. ವಿಶೇಷ ಏನೆಂದರೆ ಈ ಬಾರಿ ಕನ್ನಡ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ. ತುರಣ್ ಸುಧೀರ್ ನಿರ್ದೇಶನ, ರಾಕ್‌ಲೈನ್ ವೆಂಕಟೇಶ್ ನಿರ್ದೇಶನ ಮಾಡಿರುವ ಕಾಟೇರ ಸಿನಿಮಾ ಈ ಪ್ರಶಸ್ತಿ ಗೆದ್ದಿರುವುದು. ಅಷ್ಟೇ ಅಲ್ಲ 4 ವಿಭಾಗಗಳಲ್ಲಿ ಕಾಟೇರ ಅವಾರ್ಡ್ ಪಡೆದುಕೊಂಡಿದೆ. ಬೇರೆಲ್ಲ ತಾರೆಯರು ದುಬೈನಲ್ಲಿ ಸಂಭ್ರಮದಿಂದ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಆದರೆ ರಿಯಲ್ ಕಾಟೇರ ದರ್ಶನ್ ಮಾತ್ರ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಾ ಇದ್ದಾರೆ.
ಹೌದು! ಸಾಮಾಜಿಕ ಜಾಲತಾಣದಲ್ಲಿ ಇದೀಗ ಹೊಸ ಟ್ರೋಲ್ ಎಬ್ಬಿದೆ. ಹೀರೋ ಜೈಲಿನಲ್ಲಿ.. ಸಿನಿತಂಡ ಸಂಭ್ರಮದಲ್ಲಿ ಎಂದು. ಕಾಟೇರ ಸಿನಿಮಾ ಈ ಬಾರಿಯ ಸೈಮಾ ಅವಾರ್ಡ್ ರೇಸ್‌ನಲ್ಲಿ 8 ವಿಭಾಗಗಳಲ್ಲಿ ಪ್ರಶಸ್ತಿಯ ರೇಸ್‌ನಲ್ಲಿ ಇತ್ತು. ದರ್ಶನ್ ನಟನೆಯ ಒಂದು ವೇಳೆ ನಿಜಕ್ಕೂ ಗೆದ್ದರೆ ಈ ಸಿನಿಮಾಗೆ ಪ್ರಶಸ್ತಿ ಕೊಡ್ತಾರಾ ಅನ್ನೋ ಅನುಮಾನವೂ ಜೊತೆ ಜೊತೆಗೆ ಇತ್ತು. ಯಾಕೆ ಅಂದ್ರೆ ಫಿಲ್ಮ್ ಫೇರ್‌ನಲ್ಲೂ ಕಾಟೇರ 8 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಆದರೆ ದರ್ಶನ್ ಜೈಲಿನಲ್ಲಿರೋ ಕಾರಣಕ್ಕೆ ಸುಮ್ಮನೇ ವಿವಾದಗಳೇ ಬೇಡ ಅಂತ ಫಿಲ್ಮ್ ಫೇರ್ ಆಯೋಜಕರು ಯಾವ ವಿಭಾಗದಲ್ಲೂ ಕಾಟೇರ ಚಿತ್ರವನ್ನು ಪ್ರಶಸ್ತಿ ಕೊಡದೇ ಹೊರಹಾಕಿದ್ದರು.
ಸೀರಿಯಲ್‌ನಲ್ಲಿ ಸೀರೆ ಹಾಕೋ ಅನುಷಾ ಕಿಣಿ; ಇನ್‌ಸ್ಟಾಗ್ರಾಂನಲ್ಲಿ ಬದಲಾದ ಅವತಾರ ನೋಡಿ ಎಲ್ಲರೂ ಶಾಕ್!
ಚಿತ್ರದ ನಾಯಕ ಮಾಡಿದ ತಪ್ಪಿಗೆ ಇಡೀ ಸಿನಿತಂಡಕ್ಕೆ ಶಿಕ್ಷೆ ಪಡುವಂತೆ ಆಗಿತ್ತು. ಆದ್ರೆ ಸೈಮಾನಲ್ಲಿ ಮಾತ್ರ ಕಾಟೇರನಿಗೆ ಅನ್ಯಾಯ ಆಗಿಲ್ಲ. 8 ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿ ರೇಸ್‌ನಲ್ಲಿತ್ತು. ಇದೀಗ 4 ವಿಭಾಗಗಳಲ್ಲಿ ಪ್ರಶಸ್ತಿಯನ್ನ ಗಳಿಸಿಕೊಂಡಿದೆ. ಈ ಬಾರಿ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು ಕಾಟೇರ ಟೀಮ್‌ಗೆ 4 ಅವಾರ್ಡ್‌ಗಳು ಒಲಿದು ಬಂದಿದೆ. ಮೊದಲನೇಯದಾಗಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಕಾಟೇರ ಪಾಲಾಗಿದೆ. ಇನ್ನೂ ಅತ್ಯುತ್ತಮ ಸಂಗೀತ ನಿರ್ದೇಶ ಪ್ರಶಸ್ತಿ ಹರಿಕೃಷ್ಣಗೆ ಸಿಕ್ಕಿದೆ , ಬೆಸ್ಟ್ ಡೆಬ್ಯೂ ನಟಿ ಅವಾರ್ಡ್ ಆರಾಧನಾ ಪಾಲಾಗಿದೆ. ಇನ್ನೂ ಪಸಂದಾಗವ್ನೇ ಹಾಡನ್ನ ಹಾಡಿದ ಮಂಗ್ಲಿಗೆ ಅತ್ಯುತ್ತಮ ಗಾಯಕಿ ಸೈಮಾ ಅವಾರ್ಡ್ ಪಡೆದಿದ್ದಾರೆ.
ಚಿರಂಜೀವಿಗೆ 2 ದಿನ ಟೈಂ ಇತ್ತು ನಾವು ಸರಿಯಾಗಿ ಬಳಸಿಕೊಳ್ಳಲಿಲ್ಲ; ಅಳಿಯನನ್ನು ನೆನೆದು ಸುಂದರ್ ರಾಜ್ ಬೇಸರ
ನಿಜ ಹೇಳಬೇಕು ಅಂದ್ರೆ ದರ್ಶನ್ ಕರೀಯರ್ ನಲ್ಲೇ ಕಾಟೇರ ದಿ ಬೆಸ್ಟ್ ಸಿನಿಮಾ. ಬರೀ ಕರುನಾಡಿನಲ್ಲೇ ಈ ಸಿನಿಮಾ 200ಕೋಟಿ ಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮೀರಿಸುವಂತೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು.