ಸೀರಿಯಲ್‌ನಲ್ಲಿ ಸೀರೆ ಹಾಕೋ ಅನುಷಾ ಕಿಣಿ; ಇನ್‌ಸ್ಟಾಗ್ರಾಂನಲ್ಲಿ ಬದಲಾದ ಅವತಾರ ನೋಡಿ ಎಲ್ಲರೂ ಶಾಕ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಅನುಷಾ ಬೋಲ್ಡ್ ಲುಕ್. ಸೀರೆಯಲ್ಲಿ ಇರುವ ನಾರಿ ನೀವೇನಾ ಎಂದ ನೆಟ್ಟಿಗರು....
ಮಾಡಲಿಂಗ್ ಲೋಕದಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟಿ ಅನುಷಾ ಕಿಣಿ ಬೋಲ್ಡ್ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
17 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿರುವ ಅನುಷಾ ಕಿಣಿ ಸೇವಂತಿ ಮತ್ತು ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅತಿ ಹೆಚ್ಚು ಜನಪ್ರಯತೆ ಪಡೆದರು.
ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಚಿಕ್ಕೆಜಮಾನ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಅನುಷಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
'Chubby and fabulous...ಇದು ನಾನು...curves on fleek. ವಾವ್ ನನಗೆ ಈ ಲುಕ್ ನೋಡಿದವರಿಗೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು' ಎಂದು ಅನುಷಾ ಬರೆದುಕೊಂಡಿದ್ದಾರೆ.
'ನಿಮ್ಮ ಶ್ರಮವನ್ನು ಈ ಫೋಟೋಶೂಟ್‌ನಲ್ಲಿ ನೋಡಬಹುದು. ನಿಮ್ಮ ದೃಷ್ಟಿಕೋನ ಅದ್ಭುತವಾಗಿದೆ, ಪ್ರತಿಯೊಂದನ್ನು ನೀಟಾಗಿ ನಿಭಾಯಿಸುತ್ತೀರಿ. ಲೈಟಿಂಗ್ ಅದ್ಭುತವಾಗಿದೆ' ಎಂದು ಅನುಷಾ ಬರೆದುಕೊಂಡಿದ್ದಾರೆ.
ಸೀರಿಯಲ್‌ನಲ್ಲಿ ಸೀರೆ ಹಾಕೋದು ಇನ್‌ಸ್ಟಾಗ್ರಾಂನಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವುದು ಎಷ್ಟು ಸರಿ? ದಯವಿಟ್ಟು ಸಿಂಪಲ್ ಆಗಿರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.