ಕೇರಳದಲ್ಲಿ ಕನ್ನಡ ಸಿನಿಮಾಗಳ ಅನಧಿಕೃತ ರಾಯಭಾರಿ ನಾನು: ಪೃಥ್ವಿರಾಜ್‌ ಜೂ.30ರಂದು ಕಡುವ ಚಿತ್ರ ಕನ್ನಡದಲ್ಲೂ ಬಿಡುಗಡೆ

ಮಲಯಾಳಂ ನಟ ಪೃಥ್ವಿರಾಜ್‌, ವಿವೇಕ್‌ ಒಬೆರಾಯ್‌ ನಟನೆಯ ‘ಕಡುವ’ ಸಿನಿಮಾ ಜೂ.30ರಂದು ಕನ್ನಡ ಸೇರಿ ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ನಾಯಕ ನಟ ಪೃಥ್ವಿರಾಜ್‌ ಮತ್ತು ನಟಿ ಸಂಯುಕ್ತಾ ಆಗಮಿಸಿದ್ದರು. ಈ ಸಂದರ್ಭ ಪೃಥ್ವಿರಾಜ್‌ ಆಡಿದ ಮಾತುಗಳು ಇಲ್ಲಿವೆ-

1. ಕೇರಳದಲ್ಲಿ ನಾನು ಕನ್ನಡ ಸಿನಿಮಾಗಳ ಅನಧಿಕೃತ ರಾಯಭಾರಿ ಆಗಿದ್ದೇನೆ. ಕೆಜಿಎಫ್‌ ಮತ್ತು 777 ಚಾರ್ಲಿ ಸಿನಿಮಾಗಳನ್ನು ಕೇರಳದಲ್ಲಿ ಪ್ರದರ್ಶಿಸಿದ್ದೇನೆ. ಆ ಎರಡು ಸಿನಿಮಾಗಳು ನನಗೆ ಒಳ್ಳೆಯ ಗಳಿಕೆ ನೀಡಿವೆ.

2. ಜನ ಗಣ ಮನ ಸಿನಿಮಾ ಕೇರಳದಲ್ಲಿ ಬಿಟ್ಟರೆ ಅತಿ ಹೆಚ್ಚು ಗಳಿಕೆ ದಾಖಲಿಸಿದ್ದು ಬೆಂಗಳೂರಿನಲ್ಲಿ. ನನ್ನ ಸಿನಿಮಾಗಳಿಗೆ ಮೊದಲಿನಿಂದಲೂ ಕನ್ನಡಿಗರು ಪ್ರೀತಿ ತೋರಿಸಿದ್ದಾರೆ. ಆ ಸಲ ಕನ್ನಡಕ್ಕೆ ಡಬ್ಬಿಂಗ್‌ ಮಾಡಿ ರಿಲೀಸ್‌ ಮಾಡುತ್ತಿದ್ದೇವೆ. ಇದು ಆರಂಭ ಅಷ್ಟೇ. ಮುಂದೆ ಬೇರೆ ಮಲಯಾಳಂ ಚಿತ್ರತಂಡಗಳಿಗೂ ಇದು ದಾರಿಯಾಗಲಿದೆ.

3. ಮಲಯಾಳಂ ಸಿನಿಮಾ ಉಚ್ಛ್ರಾಯ ಸ್ಥಿತಿಯಲ್ಲಿರುವ ಸಮಯ ಇದು. ಆದರೆ ಆ್ಯಕ್ಷನ್‌ ಸಿನಿಮಾಗಳನ್ನು ನಾನು ಮಿಸ್‌ ಮಾಡಿಕೊಳ್ಳುತ್ತಿದ್ದೆ. ಎಲ್ಲಾ ಜಾನರ್‌ ಸಿನಿಮಾಗಳು ಬೇಕು ಎಂಬ ಕಾರಣಕ್ಕೆ ಕಡುವ ಸಿನಿಮಾ ಮಾಡಿದೆ. ಇದು ಇಬ್ಬರು ಮನುಷ್ಯರ ಇಗೋ ಕತೆ. ಮಾಸ್‌ ಆ್ಯಕ್ಷನ್‌ ಥ್ರಿಲ್ಲರ್‌. ಲಾರ್ಜರ್‌ ದ್ಯಾನ್‌ ಲೈಫ್‌ ಕತೆ.

ಕೇರಳದಲ್ಲಿ ಕನ್ನಡ ಸಿನಿಮಾಗಳಿಗೆ ನಾನು ಬ್ರ್ಯಾಂಡ್ ಅಂಬಾಸಿಡರ್: ಮಲಯಾಳಂ ನಟ ಪೃಥ್ವಿ

4. ಕನ್ನಡದಲ್ಲಿ ಈಗ ತುಂಬಾ ಜನ ಫ್ರೆಂಡ್‌್ಸ ಇದ್ದಾರೆ. ಎಲ್ಲರಿಗಿಂತ ಮೊದಲು ನಾನು ಭೇಟಿ ಮಾಡಿದ್ದು ಶಿವರಾಜ್‌ ಕುಮಾರ್‌ ಅವರನ್ನು. ಸೂಪರ್‌ಸ್ಟಾರ್‌ ಆಗಿದ್ದೂ ವಿನಯವಂತರಾಗಿರುವುದು ಹೇಗೆ ಅಂತ ಅವರಿಂದ ಕಲಿಯಬೇಕು.

5. ರಕ್ಷಿತ್‌ ಶೆಟ್ಟಿಸಿನಿಮಾಗಳು ನನಗೆ ಇಷ್ಟ. ಅವರು ಮಲಯಾಳಂ ಹೀರೋ ಹಾಕಿಕೊಂಡು ಸಿನಿಮಾ ನಿರ್ದೇಶನ ಮಾಡುವುದಾದರೆ ನಾನು ಆ ಸಿನಿಮಾದ ಆಡಿಷನ್‌ಗೆ ಹೋಗುತ್ತೇನೆ

ನಾನು ಸುದೀಪ್ ಅಭಿಮಾನಿ, ಅವರನ್ನ ದುಬೈನಲ್ಲಿ ಮೀಟ್ ಆಗಿದ್ದೆ : ಪೃಥ್ವಿರಾಜ್ ಸುಕುಮಾರನ್

6. ಸಲಾರ್‌ ಸಿನಿಮಾದಲ್ಲಿ ನಾನು ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಡೇಟ್‌ ಸಮಸ್ಯೆ ಆಗದೇ ಇದ್ದರೆ ನಾನು ಖಂಡಿತಾ ಸಲಾರ್‌ನಲ್ಲಿ ನಟಿಸುತ್ತೇನೆ.

7. ನಾನು ಕನ್ನಡ ಸಿನಿಮಾದಲ್ಲಿ ನಟಿಸಲು ಸಿದ್ಧನಿದ್ದೇನೆ. ಯಾರಾದರೂ ನನಗೆ ಒಳ್ಳೆಯ ಕಥೆಯನ್ನು ಹೇಳಿ.