ಸ್ಯಾಂಡಲ್​ವುಡ್​ನಲ್ಲಿ ಕೊರೋನಾ ಹಾವಳಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್​ಗೆ ಸಿದ್ಧವಾಗಿದ್ದು, ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ವೀರಂ' ಚಿತ್ರವೂ ಕೂಡಾ ಬಿಡುಗಡೆಗೆ ಸಜ್ಜಾಗಿದೆ. 

ಸ್ಯಾಂಡಲ್​ವುಡ್​ನಲ್ಲಿ (Sandalwood) ಕೊರೋನಾ (Coronavirus) ಹಾವಳಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್​ಗೆ ಸಿದ್ಧವಾಗಿವೆ. ಶುಕ್ರವಾರವಷ್ಟೇ ಲೂಸ್ ಮಾದ ಯೋಗಿ ಅಭಿನಯದ 'ಒಂಬತ್ತನೇ ದಿಕ್ಕು' (Ombattane Dikku) ಹಾಗೂ ಪ್ರಕಾಶ್‌ರಾಜ್‌ ಮೇಹು ನಿರ್ದೇಶನದ 'ಡಿಎನ್‌ಎ' (DNA) ಚಿತ್ರ ಬಿಡುಗಡೆಯಾಗಿದೆ. ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯದ 'ವೀರಂ' (Veeram) ಚಿತ್ರವೂ ಕೂಡಾ ಬಿಡುಗಡೆಗೆ ಸಜ್ಜಾಗಿದೆ. ಹೌದು! ಮೇ 6ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ 'ವೀರಂ' ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ. ಈ ಚಿತ್ರಕ್ಕೆ ಶಶಿಧರ್​ ಕೆ.ಎಂ. (Shashidhar KM) ಬಂಡವಾಳ ಹೂಡಿದ್ದಾರೆ. 

ಅನೇಕ ರಾಜ್ಯಗಳ ಥಿಯೇಟರ್‌ಗಳಲ್ಲಿ ಇನ್ನೂ 50-50 ಆಕ್ಯುಪೆನ್ಸಿ ರೂಲ್ಸ್ ಜಾರಿಯಲ್ಲಿದೆ. ಹಾಗಾಗಿ ಕೊರೋನಾ ಪಾಟಿಸಿವ್​ ಪ್ರಕರಣಗಳ (Corona Positive Cases) ಸಂಖ್ಯೆ ಇಳಿಮುಖವಾದ ನಂತರವೇ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗಲಿದ್ದು, ಆ ರೀತಿ ಸಹಜ ವಾತಾವರಣ ನಿರ್ಮಾಣ ಆಗಲು ಇನ್ನೂ ಒಂದಷ್ಟು ದಿನ ಕಾಯಬೇಕಿರುವುದು ಅನಿವಾರ್ಯ. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು 'ವೀರಂ' ಚಿತ್ರದ ರಿಲೀಸ್​ ಡೇಟ್ ಅನ್ನು ಚಿತ್ರತಂಡ​ ಘೋಷಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 6ರಂದು ಅದ್ದೂರಿಯಾಗಿ ಈ ಸಿನಿಮಾ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.

Prajwal Devaraj Mafia: ಮೂರು ಭಾಷೆಗಳಲ್ಲಿ ಡೈನಾಮಿಕ್ ಪ್ರಿನ್ಸ್ ಚಿತ್ರದ ಟೀಸರ್ ಬಿಡುಗಡೆ!

'ವೀರಂ' ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಯಾಗಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಕೈಯಲ್ಲಿ ವಿಷ್ಣು ಅವರ ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾರೆ. ಇದು ಚಿತ್ರದ ಹೈಪ್ ಕ್ರಿಯೇಟ್ ಮಾಡಿದೆ. ಖದರ್‌ ಕುಮಾರ್‌ (Khadar Kumar) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈಗಾಗಲೇ ಚಿತ್ರದ ಟೀಸರ್​ ಮತ್ತು ಪೋಸ್ಟರ್​ಗಳ ಮೂಲಕ 'ವೀರಂ' ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರವು ಮಾಸ್ ಅಂಶಗಳೊಂದಿಗೆ ಔಟ್ ಮತ್ತು ಔಟ್ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಪ್ರಜ್ವಲ್ ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದಾರೆ. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನ ಹೊರವಲಯದಲ್ಲಿ ಹಾಗೂ ವಿಶೇಷವಾಗಿ ನಿರ್ಮಿಸಲಾದ ದೊಡ್ಡ ಸೆಟ್‌ಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣ ನಡೆಸಲಾಗಿತ್ತು.



'ವೀರಂ' ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ನಾಯಕಿಯಾಗಿ ಡಿಂಪಲ್ ಕ್ಚೀನ್ ರಚಿತಾ ರಾಮ್‌ (Rachita Ram) ನಟಿಸುತ್ತಿದ್ದು, 'ಶಿಷ್ಯ' ಚಿತ್ರದ ದೀಪಕ್‌ (Deepak) ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಈ ಪಾತ್ರಕ್ಕಾಗಿ ವಿಶೇಷವಾದ ಗೆಟಪ್‌ ಹಾಗೂ ಹೇರ್‌ ಸ್ಟೈಲ್‌ ಮಾಡಿಸಿಕೊಂಡಿದ್ದಾರೆ. ಹಿರಿಯ ಕಲಾವಿದೆ ಶ್ರುತಿ (Shruti) ಹಾಗೂ ಶ್ರೀನಗರ ಕಿಟ್ಟಿ (SriNagar Kitty) ಅವರು ವಿಶೇಷವಾದ ಪಾತ್ರವೊಂದಕ್ಕೆ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದೆ.

Prajwal Devaraj: ಡೈನಾಮಿಕ್ ಪ್ರಿನ್ಸ್ ಹೊಸ ಚಿತ್ರಕ್ಕೆ ಪನ್ನಗ ಭರಣ ಆಕ್ಷನ್ ಕಟ್

ಲವಿತ್​ ಕ್ಯಾಮೆರಾ ಕೈಚಳಕ, ಅನೂಪ್​ ಸಿಳೀನ್​ ಸಂಗೀತ ಸಂಯೋಜನೆ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ 'ವೀರಂ' ಚಿತ್ರಕ್ಕಿದೆ. ಈ ಹಿಂದೆ 'ಡಾಟರ್​ ಆಫ್​ ಪಾರ್ವತಮ್ಮ' ಚಿತ್ರವನ್ನು ನಿರ್ಮಾಣ ಮಾಡಿದ್ದ ಶಶಿಧರ್​ ಕೆ.ಎಂ. ಅವರು 'ವೀರಂ' ಚಿತ್ರವನ್ನು ಪಕ್ಕಾ ಮಾಸ್​ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ಚಿತ್ರವನ್ನು ನೋಡಲು ಪ್ರಜ್ವಲ್​ ದೇವರಾಜ್​ ಅಭಿಮಾನಿಗಳು​ ಕಾಯುತ್ತಿದ್ದಾರೆ. ಮಾತ್ರವಲ್ಲದೇ ಈ ಚಿತ್ರವು 2022ರಲ್ಲಿ ಬಿಡುಗಡೆಯಾಗುತ್ತಿರುವ ಪ್ರಜ್ವಲ್ ಅಭಿನಯದ ಮೊದಲ ಚಿತ್ರವಾಗಿದೆ. ಇನ್ನು ಪ್ರಜ್ವಲ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, 'ಮಾಫಿಯಾ' (Mafia), 'ಗಣ' (Gana), ಸೇರಿದಂತೆ ಪನ್ನಗಭರಣ (Pannaga Bharana) ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.