Asianet Suvarna News Asianet Suvarna News

29 ಓವರಲ್ಲಿ 1 ಫೋರ್ ಹೊಡೆಯಲಾಗದ ಪಿಚ್ ಯಾಕೆ ಬೇಕಿತ್ತು? ಬಿಸಿಸಿಐ ವಿರುದ್ದ ನಟ ಕಿಶೋರ್ ಗರಂ!

ತವರಿನ ಅಡ್ವಾಂಟೇಜ್ ಇದ್ದರೂ, 29 ಓವರ್‌ನಲ್ಲಿ ಒಂದೂ ಬೌಂಡರಿ ಹೊಡೆಯಾಲಾಗದ ಪಿಚ್ ಯಾಕೆ ಬೇಕಿತ್ತು? ಬಿಸಿಸಿಐ ಕ್ರಿಕೆಟ್‌ನಲ್ಲಿ ರಾಜಕೀಯ ಬೆರೆಸಿ ಲಾಭ ಪಡೆಯಲು ಯತ್ನಿಸಿದ ಫಲವೇ ಈ ಸೋಲು ಎಂದು ನಟ ಕಿಶೋರ್ ಆಕ್ರೋಶ ಹೊರಹಾಕಿದ್ದಾರೆ. ನಟ ಕಿಶೋರ್ ಬಹಿರಂಗಪಡಿಸಿದ ಪಿಟ್, ರಾಜಕೀಯ ಹಾಗೂ ಕ್ರಿಕೆಟ್ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Poor pitch and Politics cost Team India in ICC World Cup Final Actor Kishor slams BCCI ckm
Author
First Published Nov 20, 2023, 5:38 PM IST

ಬೆಂಗಳೂರು(ನ.20) ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡಿದೆ. ಭಾರತದ ಸೋಲಿಗೆ ಕಾರಣಗಳನ್ನು ಹುಡುಕು ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಈ ಸೋಲಿನ ಹಿಂದೆ ಬಿಸಿಸಿಐ ರಾಜಕೀಯವೂ ಅಡಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರಮುಖವಾಗಿ ಪಿಚ್ ಆರೋಪಗಳು ಗಂಭೀರವಾಗುತ್ತಿದೆ. ಇದೀಗ ನಟ ಕಿಶೋರ್ ಭಾರತದ ಸೋಲಿನ ಹಿಂದೆ ರಾಜಕೀಯ ಫಲ ಕಾಣುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. 29 ಓವರ್‌ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಲಾಗದ ಪಿಚ್ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಸೋತಿಲ್ಲ, ಟೀಂ ಇಂಡಿಯಾವನ್ನು ಗೌರವಿಸುವಲ್ಲಿ ನಾವು ಸೋತಿದ್ದೇವೆ ಎಂದು ಕಿಡಿ ಕಾರಿದ್ದಾರೆ

ನಟ ಕಿಶೋರ್ ಪ್ರಮುಖವಾಗಿ ಕ್ರಿಕೆಟನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ.  ರಾಜಕೀಯ ಲಾಭ, ಕಳ್ಳರ ದುರಾಸೆ ಮತ್ತು ಎಲ್ಲವನ್ನೂ ತಿರುಚುವ ಹೊಲಸು ಅಭ್ಯಾಸ ಬಲದಿಂದ ಅದ್ಭುತ ತಂಡ ಸೋಲು ಕಂಡಿದೆ ಎಂದು ಕಿಶೋರ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಿಶೋರ್, ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಿಂದೂ ಎನ್ನುತ್ತಿದ್ದವರು ಎಲ್ಲಿ ಹೋದ್ರು? ಇದ್ಯಾವುದು ಹೊಸದು ಸನಾತನ: ಕಿಶೋರ್‌ ಪ್ರಶ್ನೆ
 
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ. ಇಂದಿನ ಭಾರತದಲ್ಲಿ ಧರ್ಮ ರಾಜಕೀಯದ ದಾಳವಾಗಿದೆ. ಕ್ಷಮೆಯಿರಲಿ ಟೀಮ್ ಇಂಡಿಯಾ.. ನೀವು ಸೋತಿಲ್ಲ, ನಿಮ್ಮನ್ನು ಗೌರವಿಸುವಲ್ಲಿ ನಾವು ಸೋತಿದ್ದೇವೆ. ಬಿಸಿಸಿಐ ಐಪಿಎಲ್ ಎಲ್ಲವನ್ನೂ ಕಪಿಮುಷ್ಟಿಯಲ್ಲಿ ಹಿಡಿದ ಕೂತ ರಾಜಕಾರಿಣಿಗಳನ್ನು ಆಯ್ಕೆ ಮಾಡಿದವರು ನಾವೇ ಅಲ್ಲವೇ? ನಮಗೆಲ್ಲರಿಗೂ ಗೊತ್ತು ಕೊನೆಗೆ ಇದು ಬರೀ ಟಾಸಿನಾಟವಾಗಿಹೋಯ್ತು ಎಂದು. ಟಾಸ್ ಸೋಲು ಅದೂ ಕೆಟ್ಟ ವಿಕೆಟ್ಟಿನ ಮೇಲೆ, ಪಂದ್ಯಕ್ಕೇ ಎರವಾಯ್ತು. ಬಾಲ್ ಹಳೆಯದಾಗುತ್ತಿದ್ದಂತೆ ತಡೆತಡೆದು ಬರುತ್ತಿದ್ದುದು, ಬೌನ್ಸ್ ಏರುಪೇರಾದದ್ದು ಕ್ರಿಕೆಟ್ ಗೊತ್ತಿಲ್ಲದವರಿಗೂ ಎದ್ದು ಕಾಣುತ್ತಿತ್ತು. ಅದೇ ಪಿಚ್‌ನಲ್ಲಿ, ಆಸ್ಟ್ರೇಲಿಯಾದ 3 ವಿಕೆಟ್ಟಿನ ನಂತರ ಸಂಜೆ ಇಬ್ಬನಿ ಬಂದೊಡನೆ ಬಾಲ್ ಬ್ಯಾಟಿಗೆ ಸಲೀಸಾಗಿ ಬರಲಾರಂಭಿಸಿದ್ದೂ ಸಹ..

 

 

ಅಷ್ಟು ಒಳ್ಳೆಯ ಫಾರ್ಮಿನಲ್ಲಿರುವ ಇದುವರೆಗೂ ಅಜೇಯವಾಗಿದ್ದ , ಎಂಥಾ ಪಿಚ್ಚಿನ ಮೇಲೆ ಆಡಿದ್ದರೂ ಗೆಲ್ಲಬಹುದಿದ್ದ ಟೀಮಿಗೆ ಹೋಮ್ ಅಡ್ವಾಂಟೇಜಿನ ನೆಪದಲ್ಲಿ ಇಂತಹ ಪಿಚ್ ಯಾಕೆ ಬೇಕಿತ್ತು? ಇಲ್ಲಿನ ರಾಜಕಾರಿಣಿಗಳ ಚಿಲ್ಲರೆ ಕೆಲಸಕ್ಕೆ ಶ್ರೀಲಂಕಾ ಕ್ರಿಕೆಟ್ ಬೋರ್ಡನ್ನು ಬಲಿ ಕೊಡಿಸುವಷ್ಟು ಐಸಿಸಿಯ ಮೇಲೆ ಪ್ರಭಾವವಿರುವ ಕೋಟ್ಯಾಧಿಪತಿ ಬಿಸಿಸಿಐ, 29 ಓವರಿನಲ್ಲಿ ಒಂದು ಫೋರ್ ಹೊಡೆಯಲಾಗದಂಥ ಪಿಚ್ಚು ಯಾಕೆ ಮಾಡಿಸಬೇಕಿತ್ತು. ಕೆಲಸ ಮಾಡಿ ಓಟು ಕೇಳಲು ತಾಕತ್ತಿಲ್ಲದ ಅಯೋಗ್ಯ ಕ್ರೆಡಿಟ್ಟು ಕಳ್ಳರಿಗೆ ಈ ಗೆಲುವು ಹೆಚ್ಚು ಅನಿವಾರ್ಯವಾಗಿತ್ತೇನೊ..ಒಟ್ಟಿನಲ್ಲಿ ಈ ರಾಜಕೀಯ ಕ್ರೆಡಿಟ್ಟು ಕಳ್ಳರ ದುರಾಸೆ ಮತ್ತು ಎಲ್ಲವನ್ನೂ ತಿರುಚುವ ಹೊಲಸು ಅಭ್ಯಾಸ ಬಲದಿಂದ ಎಂತಹ ಅದ್ಭುತ ತಂಡ … ಸೋಲು ಅನುಭವಿಸಬೇಕಾಯಿತು ..ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ತೆಗೆದು ಮೈದಾನಕ್ಕೆ ಬದುಕಿದ್ದಾಗಲೇ ತನ್ನ ಹೆಸರಿಟ್ಟುಕೊಂಡ ಆತ್ಮರತಿಲೋಲನ ಉಪಸ್ಥಿತಿಯಲ್ಲಿ ಎಂದು ಕಿಶೋರ್ ಬರಹದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Kishore: 2002ರಲ್ಲಿ ಗುಜರಾತ್‌ 2023ರಲ್ಲಿ ಮಣಿಪುರ; ಅಧಿಕಾರದಾಹಿ ಪ್ರಧಾನಿಗೆ ಜೀವಗಳು ಮುಖ್ಯವಲ್ಲ!

Follow Us:
Download App:
  • android
  • ios