ಹಿಂದೂ ಎನ್ನುತ್ತಿದ್ದವರು ಎಲ್ಲಿ ಹೋದ್ರು? ಇದ್ಯಾವುದು ಹೊಸದು ಸನಾತನ: ಕಿಶೋರ್‌ ಪ್ರಶ್ನೆ

ಉದಯನಿಧಿ ಸ್ಟ್ಯಾಲಿನ್‌ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ನೀಡಿರುವ ಹೇಳಿಕೆ ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ನಟ ಕಿಶೋರ್‌, ಸನಾತನ ಧರ್ಮ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.

actor Kishore reaction on udhayanidhi stalin sanatana dharma remark Questions PM Modi san


ಬೆಂಗಳೂರು (ಸೆ.6): ಬಹುಶಃ ಬಹುಸಂಖ್ಯಾತರ ವಿರುದ್ಧವಾಗಿ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುವುದು ಭಾರತದಲ್ಲಿ ಮಾತ್ರ. ಹಿಂದುಗಳು, ಹಿಂದೂ ಆಚರಣೆಗಳ ಬಗ್ಗೆ ಏನು ಮಾತನಾಡಿದರೂ ಇಲ್ಲಿ ಕೇಳುವವರಿಲ್ಲ. ಉದಯನಿಧಿ ಸ್ಟ್ಯಾಲಿನ್‌, ಇಡೀ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಬಹುಸಂಖ್ಯಾತ ಹಿಂದುಗಳ ನರಮೇಧವಾಗಲಿ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದರೂ, ಇಲ್ಲಿಯವರೆಗೂ ಆತ ತನ್ನ ಹೇಳಿಕೆಗೆ ಕ್ಷಮೆ ಕೇಳಿಲ್ಲ. ಇನ್ನು ಪೊಲೀಸ್‌, ಕೋರ್ಟ್‌ಗಳಾಗಲಿ ಆತನಿಗೆ ಕನಿಷ್ಠ ಸಮನ್ಸ್‌ ನೀಡುವ ಕೆಲಸ ಕೂಡ ಮಾಡಿಲ್ಲ. ಎಲ್ಲೋ ಒಂದೆರಡು ಎಫ್‌ಐಆರ್‌ ದಾಖಲಾಗಿದ್ದು ಬಿಟ್ಟರೆ, ಕೆಲವೇ ದಿನಗಳಲ್ಲಿ ಈ ವಿಚಾರ ತಣ್ಣಗಾಗುತ್ತದೆ. ಇನ್ನು ಉದಯನಿಧಿ ಸ್ಟ್ಯಾಲಿನ್‌ ಹೇಳಿದ ಮಾತುಗಳು ಸರಿ ಎಂದು ಹೇಳುವ ಒಂದು ಪಂಗಡ ಕೂಡ ಇದೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ನಟ ಕಿಶೋರ್‌, ಸನಾತನ ಧರ್ಮ ಅಂದ್ರೆ ಯಾವುದು ಎಂದೇ ಪ್ರಶ್ನೆ ಮಾಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಪೋಸ್ಟ್‌ ಹಂಚಿಕೊಂಡಿರುವ ಕಿಶೋರ್‌, ಇಷ್ಟು ದಿನ ಹಿಂದು ಎಂದು ಅರಚುತ್ತಿದ್ದವರು, ಈಗ ಆ ಪದವನ್ನು ಬಿಟ್ಟು ಸನಾತನ ಧರ್ಮ ಎನ್ನುತ್ತಿದ್ದಾರೆ. ಇದ್ಯಾವುದು ಹೊಸ ಧರ್ಮ ಎಂದು ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಸರ್ಕಾರದ ಗೃಹ ಸಚಿವ ಜಿ. ಪರಮೇಶ್ವರ್‌, ಹಿಂದು ಧರ್ಮ ಹುಟ್ಟಿದ್ದು ಎಲ್ಲಿ ಎಂದೇ ಪ್ರಶ್ನೆ ಮಾಡಿದ್ದಾರೆ.

ನಟ ಕಿಶೋರ್‌ ತನ್ನ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಅಂಶಗಳು:
ಇಷ್ಟೂ ದಿನ ಹಿಂದೂ ಹಿಂದೂ ಎಂದು ಅರಚುತಿದ್ದವರೆಲ್ಲ ಯಾಕೋ ಆ ಪದ ಬಿಟ್ಟೇ ಬಿಟ್ಟರೆನಿಸುತ್ತಿಲ್ಲವೇ? ಹಾಗಾದರೆ ನಾವು ಹಿಂದೂಗಳಲ್ಲವೇ? ಇದಾವುದು ಹೊಸ ಧರ್ಮ ? ಸನಾತನ?? ಕೆಲಸ ಮಾಡಲು ಯೋಗ್ಯತೆಯಿಲ್ಲದೆ ಈ ಪದಗಳ ರಾಜಕೀಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುವವರನ್ನು ಇದರ ಸಂಪೂರ್ಣ ನಿಖರ ಅರ್ಥ ಹೇಳಲು ಕೇಳಿಬಿಡಿ ಸಾಕು..

ವಾಟ್ಸಾಪ್ ವಿಶ್ವವಿದ್ಯಾಲಯದಿಂದ ಹೊರಬಂದು , ಹಿಂದೂ ಪದದ ನಿಜ ಅರ್ಥ, ಮೂಲ, ಅದರ ಹಿಂದಿನ ದ್ವೇಷದ ರಾಜಕೀಯ ಪ್ರಚಲಿತವಾಗುತ್ತಿದ್ದಂತೆ ಅದನ್ನು ಬಿಟ್ಟು ಸನಾತನ ಪದ ಹಿಡಿದ ದ್ವೇಷದ ವರ್ತಕರು ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿದ್ದೇ ಈ ಅನವಶ್ಯಕ ಚರ್ಚೆಗೆ ಕಾರಣ. ರಾಜಕೀಯದ ದೃಷ್ಟಿಯಿಂದ ಉದಯನಿಧಿಯವರ ಭಾಷಾಪ್ರಯೋಗದ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಬಹುದಿತ್ತೆನಿಸಿದರೂ ಅವರು ಖಂಡಿಸಿದ್ದು ಇವರ ದ್ವೇಷದ ಜಾತಿವಾದದ, ಅಸ್ಪೃಷ್ಯತೆಯ , ಅಸಮಾನತೆಯ ವೈದಿಕ ರಾಜಕೀಯವು ಕಿಡ್ನಾಪ್ ಮಾಡಿದ ಸನಾತನವನ್ನು , ಆದಿ ಅಂತ್ಯವಿಲ್ಲದ ಸನಾತನ ಪದವನ್ನಲ್ಲವೆಂಬುದು ಸ್ಪಷ್ಟ ..

ಅದನ್ನು ಸನಾತನಿಗಳ ಮಾರಣಹೋಮಕ್ಕೆ ಹೋಲಿಸಿದ ಇವರ ದ್ವೇಷದ ವಕ್ತಾರನಿಗೆ ಇವರ ಪಕ್ಷದ ಪ್ರಧಾನಿ ಊರಲ್ಲೆಲ್ಲ ಕಾಂಗ್ರೆಸ್ ಮುಕ್ತವೆಂದು ಕೂಗಾಡುತ್ತ ತಿರುಗಿದಾಗ ಕಾಂಗ್ರೆಸಿಗರ ಮಾರಣಹೋಮಕ್ಕೆ ಕರೆ ನೀಡಿದ್ದರೇ ಕೇಳಬೇಕಲ್ಲ.. ಧರ್ಮವೆನ್ನುವುದು ಅಧರ್ಮದ ವಿರುದ್ಧ ಪದವಾದರೆ, ಅಧರ್ಮವೆನ್ನುವುದು ಕೆಟ್ಟ ಕೆಲಸವೆಂದಾದರೆ, ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ.

ಈ ದಾರಿತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ , ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ. ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ. ವಿಶ್ವಮಾನವರಾಗುವ.

ಸನಾತನ ಧರ್ಮಕ್ಕೆ ಅವಮಾನ, ಕ್ಯಾಬಿನೆಟ್‌ ಮಂತ್ರಿಗಳಿಗೆ ಬಿಗ್‌ ಟಾಸ್ಕ್‌ ನೀಡಿದ ಪ್ರಧಾನಿ ಮೋದಿ!

ಈ ಪೋಸ್ಟ್‌ಅನ್ನು ಕಿಶೋರ್‌ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಪರ-ವಿರೋಧದ ಪ್ರತಿಕ್ರಿಯೆಗಳೂ ಬಂದಿವೆ. 'ಯಾವ ಪಕ್ಷಗಳು ಇದರಿಂದ ಹೊರತಾಗಿಲ್ಲ, ಎಲ್ಲಾ ಪಕ್ಷಗಳು ತಮ್ಮ ತಮ್ಮ ಬೆಳೆಯನ್ನು ಈ ಧರ್ಮವೆಂಬ ಬೆಂಕಿಯಲ್ಲಿ ಬೇಯಿಸಲು ಕುಳಿತಂತಿದೆ...' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, ಇನ್ನೊಬ್ಬರು ಕಿಶೋರ್‌ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದಾರೆ.

ಸನಾತನ ಧರ್ಮ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ, ವೈರಲ್‌ ಆದ ರಾಮ್‌ ಚರಣ್‌ ಟ್ವೀಟ್‌

'ನಿಮ್ಮದು ಯಾವ ವಾಟ್ಸ್‌ಆಪ್‌ ಯುನಿವರ್ಸಿಟಿ? ಸನಾತನ ಪದ ಅರ್ಥ ಗೊತ್ತಿದ್ಯಾ? ಸ್ಟ್ಯಾಲಿನ್‌ನ ಮಗ ಸಮಾಜದಲ್ಲಿರುವ ಅಸಮಾನತೆ, ಅನ್ಯಾಯದ ಬಗ್ಗೆ ಮಾತನಾಡುತ್ತಾರೆ ಎಂದಾದಲ್ಲಿ, ಅಪ್ಪನ ಸರ್ಕಾರದಲ್ಲಿ ಅವರು ಯಾಕಾಗಿ ಮಂತ್ರಿಯಾಗಿದ್ದಾರೆ? ಅವರು ಬೇರೆಯವರಿಗೆ ಚಾನ್ಸ್‌ ನೀಡಬಹುದಿತ್ತಲ್ಲ? ಇದು ಯಾಕೆ ನಿಮಗೆ ಅಸಮಾನತೆ ಅನಿಸೋದಿಲ್ಲ? ಅದಲ್ಲದೆ, ಆತ ಕ್ರೀಡಾ ಸಚಿವ. ಅವರೇನಾದರೂ 100 ಮೀಟರ್‌ ಓಡ್ತಾರಾ, ಕ್ರೀಡಾ ಸಚಿವನಾಗಿರುವ ಯಾವುದಾದರೂ ಕ್ರೀಡೆ ಆಡಿದ ಅರ್ಹತೆ ಅವರಿಗೆ ಇದೆಯೇ? ಇದು ಸಾಮಾಜಿಕ ಅನ್ಯಾಯ ಅಲ್ಲವೇ? ನೀವು ಯಾವ ಅಸಮಾನತೆ, ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದೀರ? ಸನಾತನ ಧರ್ಮದ ಬಗ್ಗೆ ಮಾತನಾಡೋಕೆ ನಿಮಗೆಷ್ಟು ಜ್ಞಾನವಿದೆ? ನಿಮಗೆ ಧರ್ಮದ ಬಗ್ಗೆ ಶೇ. 10ರಷ್ಟೂ ಜ್ಞಾನವಿಲ್ಲ, ಚರ್ಚೆ ಮಾಡೋಣಾ ಬರ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios