ಮುತ್ತು ಕೊಟ್ಟಿದ್ರು ಪ್ರಧಾನಿ ಇಂದಿರಾ ಗಾಂಧಿ, 'ಮಿಸ್ ಲೀಲಾವತಿ'ಗೆ ಸ್ವಿಮ್ ಸ್ಯೂಟ್ ಧರಿಸಿದ್ದ ಜಯಂತಿ!
ಆಗೆಲ್ಲಾ, ಅಂದ್ರೆ 60-70 ಹಾಗೂ 80 ದಶಕದಲ್ಲಿ ಚಿತ್ರರಂಗದಲ್ಲಿ ಕೂಡ ತುಂಬಾ ಮಡಿವಂತಿಕೆ ಇತ್ತು. ಸ್ವಿಮ್ ಸ್ಯೂಟ್ ಧರಿಸುವುದು ಹಾಗಿರಲಿ, ಆಗಿನ ಕಾಲದ ನಟಿಯರು ಕಾಲು ಕಾಣುವಂತಹ ಡ್ರೆಸ್ ಹಾಕುವುದು ಕೂಡ ಅಪರಾಧ ಎನ್ನವಂತಿತ್ತು

ತೆರೆಯ ಮೇಲೆ ಸ್ಲಿಮ್ ಸ್ಯೂಟ್ ಧರಿಸಿದ ಮೊದಲ ನಟಿ ಅಂದ್ರೆ ಅದು ಜಯಂತಿ. ಆಗೆಲ್ಲಾ, ಅಂದ್ರೆ 60-70 ಹಾಗೂ 80 ದಶಕದಲ್ಲಿ ಚಿತ್ರರಂಗದಲ್ಲಿ ಕೂಡ ತುಂಬಾ ಮಡಿವಂತಿಕೆ ಇತ್ತು. ಸ್ವಿಮ್ ಸ್ಯೂಟ್ ಧರಿಸುವುದು ಹಾಗಿರಲಿ, ಆಗಿನ ಕಾಲದ ನಟಿಯರು ಕಾಲು ಕಾಣುವಂತಹ ಡ್ರೆಸ್ ಹಾಕುವುದು ಕೂಡ ಅಪರಾಧ ಎನ್ನವಂತಿತ್ತು ಅಂದಿನ ಸಮಾಜ. ಆದರೆ, ನಟಿ ಜಯಂತಿ (Jayanthi) ಅವರು ಮೊಟ್ಟಮೊದಲ ಬಾರಿಗೆ ಸಿನಿಮಾದಲ್ಲಿ 'ಈಜುಡೆಗೆ' ಧರಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ್ದರು.
1965ರಲ್ಲಿ ತೆರೆ ಕಂಡಿದ್ದ 'ಮಿಸ್ ಲೀಲಾವತಿ' ಚಿತ್ರದಲ್ಲಿ ನಟಿ ಜಯಂತಿ ಅವರು ಅಂದಿನ ಕಾಲದಲ್ಲಿ ಯಾರೂ ಧರಿಸಿ ನಟನೆ ಮಾಡದಿದ್ದ ಸ್ವಿಮ್ ಸ್ಯೂಟ್ ಧರಿಸಿದ್ದರು. ಆ ಚಿತ್ರಕ್ಕೆ ಅದರ ಅಗತ್ಯವಿತ್ತು ಅನ್ನೋದು ಬೇರೆ ಮಾತು! ಯಾವುದೇ ಸಿನಿಮಾದಲ್ಲಿ ಸ್ವಿಮ್ ಸ್ಯೂಟ್ ಅಥವಾ ಕಿಸ್ ಅಗತ್ಯವಿದ್ದರೂ ಅದನ್ನು ಮಾಡಲು ಅಂದು ಎಲ್ಲಾ ನಟಿಯರೂ ಹಿಂದೇಟು ಹಾಕುತ್ತಿದ್ದರು. ಆದರೆ, ಸಿನಿಮಾಕ್ಕೆ ಅಗತ್ಯವಿದ್ದ ಸ್ವಿಮ್ ಸ್ಯೂಟ್ ಧರಿಸಿ ಜಯಂತಿ ನಟಿಸಿ ಸೈ ಎನ್ನಿಸಿಕೊಂಡು ಹೊಸ ದಾಖಲೆ ನಿರ್ಮಿಸಿದ್ದರು.
ಗಂಡ-ಹೆಂಡತಿ ಅಷ್ಟೇ ಅಲ್ಲ, ಇನ್ನೇನೋ ಅಂತೆ.. ವ್ಯಾಲೆಂಟೈನ್ ಡೇ ಸಿಕ್ಕಿಬಿದ್ದ ಯಶ್-ರಾಧಿಕಾ ಜೋಡಿ..!
ಉದಯ್ ಕುಮಾರ್ ನಾಯಕತ್ವದ ಮಿಸ್ ಲೀಲಾವತಿ ಚಿತ್ರದಲ್ಲಿ ನಟಿ ಜಯಂತಿಯವರ ಅಮೋಘ ನಟನೆಗೆ 'ಪ್ರಧಾನಿ ಪುರಸ್ಕಾರ' ಕೂಡ ಸಿಕ್ಕಿತ್ತು. ಅಂದು ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರು ನಟಿ ಜಯಂತಿಗೆ ಈ ಚಿತ್ರಕ್ಕೆ ಪ್ರಶಸ್ತಿ ಕೊಟ್ಟಿದ್ದು ಮಾತ್ರವಲ್ಲ, ವೇದಿಕೆಯ ಮೇಲೆ ಮುತ್ತು ಕೊಟ್ಟು ಶುಭ ಹಾರೈಸಿದ್ದರು. ಈ ಚಿತ್ರದಲ್ಲಿ ನಟಿ ಜಯಂತಿ ಸ್ವಿಮ್ ಸ್ಯೂಟ್ ಮಾತ್ರವಲ್ಲ, ನೈಟಿ, ಟೀಶರ್ಟ್ ಹಾಗೂ ಸ್ಕರ್ಟ್ ಕೂಡ ಹಾಕಿ ಮಿಂಚಿದ್ದರು. ಸಂಪ್ರದಾಯವನ್ನು ಬದಿಗೊತ್ತಿ ನಟಿಸಿದ್ದರು.
ನಟಿ ಜಯಂತಿಯವರು ಅಂದು ಬೋಲ್ಡ್ ಪಾತ್ರಗಳನ್ನು ಮಾಡುವುದರಲ್ಲಿ ತುಂಬಾ ಪ್ರಸಿಧ್ಧಿ ಪಡೆದಿದ್ದರು. ಜೊತೆಗೆ, ಡಾ ರಾಜ್‌ಕುಮಾರ್ ಸೇರಿದಂತೆ ಹಲವು ನಾಟಕನಟರಿಗೆ ಹಲವು ಸಮಾರಂಭಗಳಲ್ಲಿ ವೇದಿಕೆ ಮೇಲೆಯೇ ಅಪ್ಪಿಕೊಂಡು ಚುಂಬಿಸುತ್ತಿದ್ದರು ಕೂಡ. ಅವರಿಗೆ ಮುತ್ತು ಕೊಡುವ ಹವ್ಯಾಸ ಇತ್ತು ಎಂಬುದು ಸೀಕ್ರೆಟ್ ಏನೂ ಅಲ್ಲ. ಅದನ್ನು ಹಲವರು ಸ್ವತಃ ಅನುಭವಿಸಿದ್ದಾರೆ, ನೋಡಿದ್ದಾರೆ ಕೂಡ..!
ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅಣ್ಣಾವ್ರು ಹೀಗೆ ಹೇಳಿದ್ದು, ತಮಾಷೆಗೋ or ತಮಾಷೆಯಾಗಿಯೋ...!
ಒಟ್ಟಿನಲ್ಲಿ, 1965ರಲ್ಲೇ ನಟಿ ಜಯಂತಿಯವರು ಈಜುಡೆಗೆ ಧರಿಸಿದ್ದು ಮಾತ್ರವಲ್ಲ, ದೇಶದ ಪ್ರಧಾನಿ ಇಂದಿರಾ ಗಾಂಧಿ ಅವರಿಂದಲೇ ಮೆಚ್ಚುಗೆ ಪಡೆದಿದ್ದರು. ಬರೀ ಮೆಚ್ಚುಗೆ ಮಾತ್ರವಲ್ಲ, ಮುತ್ತು ಕೂಡ ಪಡೆದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದರು. ಇಂದು ನಟಿ ಜಯಂತಿ ನಮ್ಮೊಂದಿಗೆ ಇಲ್ಲ. ಆದರೆ, ಅವರು ನಟಿಸಿದ ಸಿನಿಮಾಗಳು, ಅವರ ಸಾಧನೆಗಳು, ವಿವಾದಗಳು ಹೀಗೆ ಎಲ್ಲವೂ ನಮ್ಮೊಂದಿಗೆ ನೆನಪಾಗಿ, ದಾಖಲೆಗಳಾಗಿ ಇವೆ.

