MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ವ್ಯಾಲೆಂಟೈನ್ ಡೇ ಸಿಕ್ಕಿಬಿದ್ದ ಯಶ್-ರಾಧಿಕಾ ಜೋಡಿ, ಗಂಡ-ಹೆಂಡತಿ ಅಷ್ಟೇ ಅಲ್ಲ, ಇನ್ನೇನೋ ಅಂತೆ..!

ವ್ಯಾಲೆಂಟೈನ್ ಡೇ ಸಿಕ್ಕಿಬಿದ್ದ ಯಶ್-ರಾಧಿಕಾ ಜೋಡಿ, ಗಂಡ-ಹೆಂಡತಿ ಅಷ್ಟೇ ಅಲ್ಲ, ಇನ್ನೇನೋ ಅಂತೆ..!

ಯಶ್-ರಾಧಿಕಾ ಪಂಡಿತ್ ಜೋಡಿ ಸಿನಿಮಾ ಜೊತೆಜೊತೆಗೇ ತಮ್ಮ ಫ್ಯಾಮಿಲಿಗೆ ಕೂಡ ಸಮಯ ಮೀಸಲಿಡುತ್ತಾರೆ. ಆಪ್ತರ ಮದುವೆಗಳಿಗೆ ಈ ಜೋಡಿ ಸದಾ ಹಾಜರಿ ಹಾಕುತ್ತಾರೆ. ಜೊತೆಗೆ, ಪ್ರೇಮಿಗಳ ದಿನದಿಂದು ಪೋಸ್ಟ್ ಹಾಕಿ ಅದೇನೋ ಬರೆದುಕೊಂಡಿದ್ದಾರೆ ನೋಡಿ..  

2 Min read
Shriram Bhat
Published : Feb 16 2025, 01:43 PM IST| Updated : Feb 16 2025, 07:31 PM IST
Share this Photo Gallery
  • FB
  • TW
  • Linkdin
  • Whatsapp
113
Yash Radhika Pandit

Yash Radhika Pandit

ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಹಾಗೂ ಸ್ಯಾಂಡಲ್‌ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ (Radhika Pandit) ಅವರನ್ನು ಕನ್ನಡದ ಆದರ್ಶ ಜೋಡಿಗಳಲ್ಲಿ ಒಂದು ಎಂದೇ ಬಿಂಬಿಸಲಾಗುತ್ತದೆ. 

213
Yash Radhika Pandit

Yash Radhika Pandit

ಮೊನ್ನೆ (16 ಫೆಬ್ರವರಿ) ಆಚರಿಸಲ್ಪಟ್ಟ 'ವ್ಯಾಲೈಂಟಿನ್ ಡೇ'ದಲ್ಲಿ ಕೂಡ ಈ ಜೋಡಿ ಸ್ಪೆಷಲ್‌ನಲ್ಲಿ ಸ್ಪೆಷಲ್ ಎನ್ನುವಂತ ಫೋಟೋ ಒಂದನ್ನು ತಮ್ಮ ಅಧೀಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡು ಸಂಭ್ರಮ ಅನುಭವಿಸಿತ್ತು. 

313
Yash Radhika Pandit

Yash Radhika Pandit

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರದು ಲವ್ ಮ್ಯಾರೇಜ್. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಅದಕ್ಕೂ ಮೊದಲು ಸೀರಿಯಲ್‌ನಲ್ಲಿ ಕೂಡ ನಟನೆ ಮಾಡಿದ್ದವರು. 

413
Yash Radhika Pandit

Yash Radhika Pandit

ಸಿನಿಮಾದಲ್ಲಿ ಜೋಡಿಯಾಗಿದ್ದು ಮಾತ್ರವಲ್ಲ, ರಿಯಲ್ ಲೈಫ್‌ನಲ್ಲಿ ಕೂಡ ಅವರಿಬ್ಬರೂ ಸಾಕಷ್ಟು ಲವ್ ಹಾಗೂ ಪ್ಲಾನ್ ಬಳಿಕ ಹಸೆಮಣೆ ಏರಿದ್ದಾರೆ. ಅವರಿಬ್ಬರೂ ಈಗ ಮುದ್ದಾದ ಎರಡು ಮಕ್ಕಳ ಪೋಷಕರು. 

513
Yash Radhika Pandit

Yash Radhika Pandit

ಸದ್ಯ ನಟಿ ರಾಧಿಕಾ ಪಂಡಿತ್‌ ಅವರು ಸಿನಿಮಾ ನಟನೆಯಿಂದ ದೂರ ಇದ್ದಾರೆ. ಆದರೆ, ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ನಟ ಯಶ್ ಅವರು ನಿರ್ಮಾಪಕರಾಗಿಯೂ ಹೆಜ್ಜೆ ಇಡುತ್ತಿದ್ದಾರೆ. 

613
Yash Radhika Pandit

Yash Radhika Pandit

ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್‌ನ ಬಿಗ್ ಬಜೆಟ್ ಮೂವಿ ರಾಮಾಯಣದಲ್ಲಿ ಈಗ ನಟ ಯಶ್ ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾದ ನಿರ್ಮಾಣದಲ್ಲಿ ಸಹ ನಟ ಯಶ್ ಕೈಜೋಡಿಸಿದ್ದಾರೆ. 

713
Yash Radhika Pandit

Yash Radhika Pandit

ಕೆಜಿಎಫ್ (KGF) ಸಿನಿಮಾ ಮೂಲಕ ಇಡೀ ಭಾರತವನ್ನೂ ಮೀರಿ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಹೊಂದಿರುವ ನಟ ಯಶ್ ಅವರು ಈಗ ಜಗತ್ತಿನಾದ್ಯಂತ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. 

813
Yash Radhika Pandit

Yash Radhika Pandit

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಜೋಡಿಯನ್ನು ಕನ್ನಡದ ಆದರ್ಶ ದಂಪತಿಗಳು ಎಂದು ಸಿನಿಪ್ರಿಯ ಜನರು ಹೇಳುತ್ತಾರೆ. ಈ ಇಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಆಕ್ವಿವ್ ಆಗಿರುತ್ತಾರೆ. 

913
Yash Radhika Pandit

Yash Radhika Pandit

ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಲಾಗಿರುವ ಬ್ರಹತ್ ಸೆಟ್‌ನಲ್ಲಿ ನಡೆಸಲಾಗುತ್ತಿದೆ. ವಿವಾದ ಬಳಿಕ ಕ್ಲೀನ್ ಚಿಟ್ ಪಡೆದು ಈ ಚಿತ್ರದ ಟೀಮ್ ಶುಟಿಂಗ್ ಕಂಟಿನ್ಯೂ ಮಾಡಿದೆ. 

1013
Yash Radhika Pandit

Yash Radhika Pandit

ನಟ ಯಶ್ ಅವರು ಸಿನಿಮಾ ಜೊತೆಜೊತೆಗೆ ತಮ್ಮ ಫ್ಯಾಮಿಲಿಗೆ ಕೂಡ ಸಮಯ ಮೀಸಲಿಡುತ್ತಾರೆ. ಸಿನಿಮಾಬಳಗದ ಹಾಗೂ ಆಪ್ತರ ಮದುವೆಗಳಿಗೆ ಈ ಜೋಡಿ ಸದಾ ಹಾಜರಿ ಹಾಕುತ್ತಾರೆ. 

1113
Yash Radhika Pandit

Yash Radhika Pandit

ಇತ್ತೀಚೆಗೆ ನಡೆದ ಜಯಮಾಲಾ ಮಗಳು ಸೌಂದರ್ಯ ಹಾಗೂ ನಟ ಧನಂಜಯ್ ಮದುವೆಗೆ ಕೂಡ ಯಶ್-ರಾಧಿಕಾ ಜೋಡಿ ಹೋಗಿ ಮದುಮಕ್ಕಳಿಗೆ ಹರಸಿ, ಹಾರೈಸಿ ಬಂದಿದ್ದಾರೆ. 

1213
Yash Radhika Pandit

Yash Radhika Pandit

ಅಂದಹಾಗೆ, ಯಶ್-ರಾಧಿಕಾ ಪಂಡಿತ್ ಜೋಡಿ ಪತಿ-ಪತ್ನಿ ಮಾತ್ರ ಅಲ್ಲ, ಅಮರ ಪ್ರೇಮಿಗಳೂ ಹೌದಂತೆ. 'ಇದು ನಮ್ಮ 15ನೇ ವ್ಯಾಲೆಂಟೈನ್ಸ್ ಡೇ.. ಯಾವತ್ತಿಗೂ ನನ್ನ ಪ್ರೇಮಿಯೇ ಆಗಿರುವವರ ಜೊತೆ' ಎಂದು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ ರಾಧಿಕಾ ಪಂಡಿತ್. 

1313
Yash Radhika Pandit

Yash Radhika Pandit

ಅಂದಹಾಗೆ 'ಇದು ನಮ್ಮ 15ನೇ ವ್ಯಾಲೆಂಟೈನ್ಸ್ ಡೇ.. ಯಾವತ್ತಿಗೂ ನನ್ನ ಪ್ರೇಮಿಯೇ ಆಗಿರುವವರ ಜೊತೆ' ಎಂದು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ ರಾಧಿಕಾ ಪಂಡಿತ್. 

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved