ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ಗೆ ಶಿಕ್ಷೆಯಾಗಬೇಕೆಂದು ರಮ್ಯಾ ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ದರ್ಶನ್, ರಮ್ಯಾ ಅವರನ್ನು 'ರಮ್ಯಾ ಆಂಟಿ' ಎಂದು ಪ್ರೀತಿಯಿಂದ ಕರೆಯುತ್ತಿದ್ದ ವಿಡಿಯೋ ವೈರಲ್ ಆಗಿದೆ. ರಮ್ಯಾ ಅವರ ನಿಲುವು ನ್ಯಾಯಕ್ಕಾಗಿ ಎಂದು ಅಭಿಮಾನಿಗಳು ಹೇಳಿದ್ದಾರೆ.

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ (Renukaswamy Case) ಅವರಿಗೆ ಜೈಲು ಪಾಲಾದಾಗಿನಿಂದಲೂ ಮೋಹಕ ತಾರೆ ರಮ್ಯಾ (Actress Ramya) ಸುದ್ದಿಯಲ್ಲಿದ್ದಾರೆ. ನಟಿ ರಮ್ಯಾ ಅವರು ದರ್ಶನ್ ಅವರಿಗೆ ಶಿಕ್ಷೆ ಆಗಬೇಕು, ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಲೇ ಬಂದಿದ್ದಾರೆ. ದರ್ಶನ್ ತೂಗುದೀಪ (Darshan Thoogudeepa) ಕೇಸ್‌ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ಆಗಿ ಸುದ್ದಿ ಹೊರಬರುತ್ತಿದ್ದಂತೆ ನಟಿ ರಮ್ಯಾ ಅವರು ಅದನ್ನು ಸ್ವಾಗತಿಸಿದ್ದರು ಕೂಡ. ಅವರು ಮೃತ ರೇಣುಕಾಸ್ವಾಮಿ ಕುಟುಂಬದ ಪರವಾಗಿ ಇದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ನಡೆದಿದ್ದ ವಿಚಾರಣೆಯನ್ನ ನೋಡಿ, ನಟಿ ರಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು, 'ಸುಪ್ರೀಂ ಕೋರ್ಟ್ ಭಾರತದ ಸಾಮಾನ್ಯ ಜನರ ಪಾಲಿಗೆ ಆಶಾಕಿರಣ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಅಂತ ಬರೆದುಕೊಂಡಿದ್ದರು. ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ಆದೇಶದ ಕುರಿತು ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಸಾಕ್ಷ್ಯಾಧಾರಗಳಿಗಿಂತ ಹೆಚ್ಚು ವಿಮರ್ಶೆ ಇಲ್ಲದೆ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಇದನ್ನು ರಮ್ಯಾ ಸ್ವಾಗತಿಸಿದ್ದರು.

ಇದನ್ನೂ ಓದಿ: ದರ್ಶನ್​ಗೆ ನಾಯಕಿಯಾಗಿ ಭರ್ಜರಿ ಬ್ಯಾಚುಲರ್ಸ್​ ಗಗನಾ? 'ಮಹಾನಟಿ' ಹೇಳಿದ್ದೇನು ಕೇಳಿ...

ಶಿಕ್ಷೆಯ ಪರ ನಿಂತ ಮೋಹಕ ತಾರೆ

ಸದಾ ರೇಣುಕಾಸ್ವಾಮಿ ಪರವಾಗಿ ಇದ್ದುದರಿಂದ ದರ್ಶನ್​ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿದ್ದಾರೆ ರಮ್ಯಾ. ಸೋಷಿಯಲ್​​ ಮೀಡಿಯಾದಲ್ಲಿ ಇದೇ ಕಾರಣಕ್ಕೆ ಅಸಭ್ಯ ಕಮೆಂಟ್ಸ್​ ಮಾಡಿರುವವರ ಪೈಕಿ ಇದಾಗಲೇ ಕೆಲವರಿಗೆ ಪೊಲೀಸರು ಕ್ಲಾಸ್​ ಕೂಡ ತೆಗೆದುಕೊಂಡದ್ದಾಗಿದೆ. ಅದೇನೇ ಇದ್ದರೂ ಸದ್ಯ ರೇಣುಕಾಸ್ವಾಮಿ ಕುಟುಂಬದ ಪರವಾಗಿಯೇ ಮಾತನಾಡುತ್ತಿದ್ದಾರೆ ನಟಿ. ಯಾರು ಏನೇ ಹೇಳಿದರೂ, ಎಷ್ಟೇ ಮಂದಿ ಟೀಕಿಸಿದರೂ ದರ್ಶನ್​ ಸೇರಿದಂತೆ ಇತರರಿಗೆ ಶಿಕ್ಷೆ ಆಗಬೇಕು ಎನ್ನುವುದು ಅವರ ಮನದ ಮಾತು.

ರಮ್ಯಾ ಆಂಟಿ ಎನ್ನುವ ದರ್ಶನ್​

ಇದು ಸದ್ಯ ರಮ್ಯಾ ಅವರು ದರ್ಶನ್​ ವಿರುದ್ಧ ಇರುವುದು ತಿಳಿಯುತ್ತದೆ. ಅಷ್ಟಕ್ಕೂ ಇದು ಒಂದು ಸಾವಿನ ಬಗ್ಗೆ ನಟಿ ರಮ್ಯಾ ಅವರ ನಿಲುವು. ಹಾಗೆಂದು ಅವರೇನೂ ದರ್ಶನ್​ ವಿರುದ್ಧ ಇದ್ದವರಲ್ಲ. ಮೊದಲಿನಿಂದಲೂ ಅವರಿಗೆ ದರ್ಶನ್​ ಅವರ ಮೇಲೆ ಅಪಾರವಾದ ಅಭಿಮಾನವೂ ಇದೆ ಎನ್ನುವುದಕ್ಕೆ ಇದೀಗ ವೈರಲ್​ ಆಗಿರೋ ವಿಡಿಯೋ ಸಾಕ್ಷಿಯಾಗಿದೆ. ಇದನ್ನು ನೋಡಿದರೆ ದರ್ಶನ್​ ಅವರು ಪ್ರೀತಿಯಿಂದ ಯಾವಾಗಲೂ ರಮ್ಯಾ ಅವರನ್ನು 'ರಮ್ಯಾ ಆಂಟಿ' ಎಂದೇ ಕರೆಯುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ.

ಇದನ್ನೂ ಓದಿ: ಮುಂದಿನ ಸಿಎಂ ಯಾರು? ದರ್ಶನ್​, ಶಿವಣ್ಣ ಭವಿಷ್ಯವೇನು? ಖ್ಯಾತ ಜ್ಯೋತಿಷಿ ರಿವೀಲ್​...

ದರ್ಶನ್​- ರಮ್ಯಾ ಬಾಂಡಿಂಗ್​

ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ದರ್ಶನ್​ ಮತ್ತು ರಮ್ಯಾ ಇಬ್ಬರೂ ಇದ್ದರು. ಆಗ ಅವರು ರಮ್ಯಾ ಎಂದಷ್ಟೇ ನಟಿಯ ಬಗ್ಗೆ ಹೇಳಲು ಮುಂದಾದರು. ಆ ಸಮಯದಲ್ಲಿ ರಮ್ಯಾ ಅವರು, ಪ್ಲೀಸ್​ ಬರೀ ರಮ್ಯಾ ಎಂದು ಹೇಳಬೇಡಿ, ನನ್ನನ್ನೇ ನೀವು ಕರೆಯುತ್ತಿದ್ದರೋ ಇಲ್ಲವೋ ತಿಳಿಯುವುದಿಲ್ಲ. ಪ್ರತಿಸಲವೂ ಹೇಗೆ ಕರೆಯುತ್ತೀರೋ ಹಾಗೆಯೇ ಕರೆಯಿರಿ ಎಂದಿದ್ದಾರೆ. ಆಗ ಆ್ಯಂಕರ್​ ಅಕುಲ್​ ಅವರು ರಮ್ಯಾ ಆಂಟಿ ಎಂದು ಹೇಳಿದ್ದಾರೆ. ಅದಕ್ಕೆ ದರ್ಶನ್​, ಹೌದು ಪ್ರೀತಿಯಿಂದ ನಾನು ಅವರನ್ನು ಹಾಗೆ ಕರೆಯುತ್ತೇನೆ. ಆದರೆ ಈ ವೇದಿಕೆಯಲ್ಲಿ ಸಾರ್ವಜನಿಕವಾಗಿ ಹಾಗೆ ಕರೆಯುವುದು ಸರಿಯಲ್ಲ ಎಂದು ಹೇಳಿಲ್ಲ ಎಂದಿದ್ದಾರೆ. ಇದು ನಟಿ ರಮ್ಯಾ ಮತ್ತು ದರ್ಶನ್​ (Ramya and Darshan) ಬಾಂಡಿಂಗ್​ ಬಗ್ಗೆ ಸೂಚಿಸುತ್ತದೆ.

ಇದರ ವಿಡಿಯೋ ವೈರಲ್​ ಆಗುತ್ತಲೇ, ದರ್ಶನ್​ ಫ್ಯಾನ್ಸ್​ ನಟಿ ಈಗ ಏಕೆ ಹೀಗೆ ಆದರು ಎಂದು ಪ್ರಶ್ನಿಸುತ್ತಿದ್ದಾರೆ. ಕೆಟ್ಟ ಕಾಲ ಬಂದಾಗ ಎಲ್ಲರೂ ದೂರವಾಗುತ್ತಾರೆ ಎಂದು ಒಬ್ಬರು ಬರೆದಿದ್ದರೆ, ಮತ್ತೊಬ್ಬರು ಅದೇ ಬೇರೆ, ಇದೇ ಬೇರೆ. ಅವರೇನೂ ನಟನ ದ್ವೇಷಿಯಲ್ಲ... ಬದಲಿಗೆ ಇಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ಆಗಿರುವ ಅನ್ಯಾಯದ ವಿರುದ್ಧ ಅವರು ದನಿ ಎತ್ತಿದ್ದಾರೆ ಅಷ್ಟೇ ಎಂದಿದ್ದಾರೆ.

thoogudeepadarshan ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಆದವಿಡಿಯೋ ಈ ಲಿಂಕ್​ನಲ್ಲಿದೆ:

https://www.instagram.com/reel/DOTeA61k5Ky/?utm_source=ig_web_copy_link