ದರ್ಶನ್ಗೆ ನಾಯಕಿಯಾಗಿ ಭರ್ಜರಿ ಬ್ಯಾಚುಲರ್ಸ್ ಗಗನಾ? 'ಮಹಾನಟಿ' ಹೇಳಿದ್ದೇನು ಕೇಳಿ...
ಮಹಾನಟಿ, ಭರ್ಜರಿ ಬ್ಯಾಚುಲರ್ಸ್ ಮೂಲಕ ಫೇಮಸ್ ಆಗಿ ಇದೀಗ ಸೀರಿಯಲ್ಗೂ ಎಂಟ್ರಿ ಕೊಟ್ಟಿರೋ ನಟಿ ಗಗನಾ, ದರ್ಶನ್ ಕುರಿತು ಹೇಳಿದ್ದೇನು? ನಾಯಕಿಯಾಗಿ ಆಫರ್ ಬಂದ್ರೆ...?

ರಿಯಾಲಿಟಿ ಷೋಗಳ ಮೂಲಕ ಫೇಮಸ್
ಮಹಾನಟಿಯ ಮೊದಲ ಸೀಸನ್ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼನಲ್ಲಿಯೂ ಕಾಣಿಸಿಕೊಂಡಿದ್ದರು. ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದ್ದು, 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2'ನಲ್ಲಿ ಡ್ರೋನ್ ಪ್ರತಾಪ್ ಮತ್ತು ಗಗನಾ ಸಕತ್ ಹವಾ ಸೃಷ್ಟಿಸಿದ್ದರು. ಆದರೆ ಮೂರನೇ ಸ್ಥಾನವನ್ನು ಅಂದರೆ ಎರಡನೆಯ ರನ್ನರ್ ಅಪ್ ಆಗಿ ಮಿಂಚಿದರು. ಅದೇನೇ ಇದ್ದರೂ ಗಗನಾಗೆ ಈಗ ಸಕತ್ ಡಿಮಾಂಡ್ ಇದೆ.
ಹೊಸ ಧಾರಾವಾಹಿಯಲ್ಲಿ ನಾಯಕಿ
ಇದೀಗ ಗಗನಾ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ʻರಾಜಕುಮಾರಿʼ ಎಂಬ ಹೆಸರಿನಲ್ಲಿ ಸೀರಿಯಲ್ ಇದಾಗಿದ್ದು, ಇದಾಗಲೇ ಪ್ರೋಮೋ ರಿಲೀಸ್ ಆಗಿದೆ. ʻಈ ನಗುಮೊಗದ ಅರಸಿಗೆ ಸಿಹಿ ಹಂಚೋದೆ ಕನಸು ಬರ್ತಿದ್ದಾಳೆ ರಾಜಕುಮಾರಿ, ಶೀಘ್ರದಲ್ಲಿʼ ಎನ್ನುವ ಮೂಲಕ ʻಜೀ ಪಿಚ್ಚರ್ʼ ಪ್ರೊಮೋ ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಗಗನಾ, ಪಕ್ಕಾ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಕಲ್ ಸವಾರಿ ಮಾಡಿದ್ದಾರೆ.
ದರ್ಶನ್ ಬಗ್ಗೆ ಮಾತನಾಡಿದ ಗಗನಾ
ಇದೀಗ ನಟಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಬಾಸ್ ಟಿವಿಗೆ ಕೊಟ್ಟಿರೋ ಸಂದರ್ಶನದಲ್ಲಿ ಗಗನಾ ಅವರು ದರ್ಶನ್ ಅವರನ್ನು ಹಾಡಿ ಹೊಗಳಿದ್ದಾರೆ. ಸದ್ಯ ಅವರಿಗೆ ಕೆಟ್ಟಕಾಲವಿದೆ ಅಷ್ಟೇ. ಆರುವ ಮೊದಲು ದೀಪಾ ಜೋರಾಗಿ ಉರಿಯುತ್ತದೆ, ಆರಿದ ಬಳಿಕ ಮತ್ತೆ ಚೆನ್ನಾಗಿ ಉರಿಯುತ್ತದೆ ಎಂದು ತಮ್ಮದೇ ಆದ ಗಾದೆಯನ್ನುಹೇಳುವ ಮೂಲಕ, ದರ್ಶನ್ ಅವರು ಮತ್ತೆ ಬಲಿಷ್ಠರಾಗಿ ಬರುತ್ತಾರೆ ಎಂದು ಹೇಳಿದ್ದಾರೆ.
ದರ್ಶನ್ ಚಿತ್ರದಲ್ಲಿ ನಟಿಸುವ ಅವಕಾಶ
ದರ್ಶನ್ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾಯಕಿ, ತಂಗಿ... ಹೀಗೆ ಯಾವ ರೋಲ್ ಮಾಡುತ್ತೀರಿ ಎನ್ನುವ ಪ್ರಶ್ನೆಗೆ, ಅದು ತುಂಬಾ ದೊಡ್ಡ ಮಾತು. ಅವರ ಸೆಲ್ಫೀ ಸಿಕ್ಕರೆ ಸಾಕು, ಅದೇ ನನ್ನ ಪುಣ್ಯ. ಅವರ ಜೊತೆ ನಟಿಸುವುದು ನಾನು ಕನಸಿನಲ್ಲಿಯೂ ಊಹಿಸಿಕೊಳ್ಳಲು ಆಗದ್ದು ಎಂದಿದ್ದಾರೆ. ಇದೇ ವೇಳೆ ತಂಗಿಯ ಪಾತ್ರ ಮಾಡುವುದಿಲ್ಲ ಎನ್ನುವ ಮೂಲಕ ದರ್ಶನ್ ಅವರಿಗೆ ನಾಯಕಿಯಾಗಿ ಮಾಡಲು ಸಿದ್ಧ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಮುಗ್ಧ ಮಾತುಗಳಿಂದಲೇ ಜನಪ್ರಿಯತೆ
ಅಷ್ಟಕ್ಕೂ ಗಗನಾ ಮಹಾನಟಿ ರಿಯಾಲಿಟಿ ಶೋನಲ್ಲಿ ( Mahanati reality show)ತಮ್ಮ ಮುಗ್ಧ ಮಾತುಗಳಿಂದಲೇ ಜನಪ್ರಿಯತೆ ಪಡೆದರು. ಆದಾದ ಬಳಿಕ ನಿರಂತರವಾಗಿ ಒಂದಲ್ಲ ಒಂದು ಶೋಗಳಲ್ಲಿ ಗಗನಾಗೆ ಅವಕಾಶಗಳು ದೊರೆಯುತ್ತಾ ಬಂದವು. ಝೀ ಕನ್ನಡದ ಅವಕಾಶಗಳಿಂದಾಗಿ ಗಗನಾ ತಾವು ಕೆಲಸ ಮಾಡುತ್ತಿದ್ದ ಐಟಿ ಕಂಪನಿಯ ಕೆಲಸವನ್ನೇ ಬಿಟ್ಟಿದ್ದರು.
ಅಭಿಮಾನಿಗಳ ಹಾರೈಕೆ
ಕಿರುತೆರೆಯಲ್ಲಿ ಎಂಟ್ರಿ ಕೊಟ್ಟಿರುವ ಹಲವರು ಬೆಳ್ಳಿ ಪರದೆಯ ಮೇಲೆ ಮಿಂಚಿರೋದು ಇದೆ. ಆದೇ ರೀತಿ ಗಗನಾ ಅವರಿಗೂ ಒಳ್ಳೆಯ ಅವಕಾಶ ಸಿಗಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಗಗನಾ ಅವರ ಸಂದರ್ಶನ ಇಲ್ಲಿದೆ…