ಜೈಲಿನಲ್ಲಿರುವ ಅವ್ಯವಸ್ಥೆಗೆ ನೊಂದು ತಮಗೆ ವಿಷ ಕೊಟ್ಟುಬಿಡಿ ಎಂದು ದರ್ಶನ್​ ಅವರು ನ್ಯಾಯಾಧೀಶರ ಮುಂದೆ ಅಂಗಲಾಚಿದ ಕುರಿತು ನಿರ್ದೇಶಕ ತರುಣ್​ ಸುಧೀರ್ ಹೇಳಿದ್ದೇನು? 

ರೇಣುಕಾಸ್ವಾಮಿ ಕೇಸ್​​ನಲ್ಲಿ (Renukaswamy case) ನಟ ದರ್ಶನ್‌ ತೂಗುದೀಪ‌ ಅವರು ಸದ್ಯ ಜೈಲಿನಲ್ಲಿದ್ದಾರೆ. ಆದರೆ, ಜೈಲಿನಲ್ಲಿ ಸರಿಯಾದ ವ್ಯವಸ್ಥೆ ನೀಡುತ್ತಿಲ್ಲ ಎಂದು ಕೋರ್ಟ್​ನಲ್ಲಿ ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದ ನಟ, “ಜೈಲಿನಲ್ಲಿ ನಾನು ಬೆಳಕು ನೋಡಿಲ್ಲ. ದಯಮಾಡಿ ನನಗೆ ವಿಷ ಕೊಡಿ” ಎಂದು ಹೇಳಿದ್ದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ಅವರು, “ಜೈಲಿನಲ್ಲಿ ಏನೂ ಕೇಳಿದರೂ ಸಿಗುತ್ತಿಲ್ಲ. ಹೀಗಾಗಿ ನನಗೆ ಸ್ವಲ್ಪ ವಿಷ ಕೊಡಿ” ಎಂದು ಅವರು ಹೇಳಿದ್ದರು. ಈ ಮೂಲಕ ತಾವು ಜೈಲಿನಲ್ಲಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ತರುಣ್​ ಸುಧೀರ್​ ಹೇಳಿದ್ದೇನು?

ಇದಕ್ಕೆ ದರ್ಶನ್​ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆಯೇ, ಅವರ ಆಪ್ತರಲ್ಲಿ ಒಬ್ಬರಾಗಿರುವ, ನಟ- ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೋರ್ಟ್​ನಲ್ಲಿ ನಡೆದ ಪ್ರೊಸೀಡಿಂಗ್ಸ್​ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಒಂದು ವೇಳೆ ದರ್ಶನ್​ ಅವರಂಥ ವ್ಯಕ್ತಿನೇ ವಿಷ ಕೇಳ್ತಾರೆ ಅಂದ್ರೆ ಎಷ್ಟು ನೊಂದಿರಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ನೋಡಿದ ಹಾಗೆ ಅವರು ತುಂಬಾ ಸ್ಟ್ರಾಂಗ್​. ಆದರೂ ಅವರ ಬಾಯಲ್ಲಿಯೇ ಈ ಮಾತು ಬಂದಿದೆ ಎಂದು ಎಷ್ಟು ಕಷ್ಟ ಅನುಭವಿಸುತ್ತಿರಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Bhavana Ramannaಗೆ ಮೊದಲೇ ವಿಷ್ಯ ಗೊತ್ತಿತ್ತಾ? ಒಂದೇ ಹೆಣ್ಣು ಮಗುವಿನ ಹೆಸರು ರಿವೀಲ್​ ಮಾಡಿದ್ದ ನಟಿ

ದರ್ಶನ್​ ಅಪರಾಧಿಯಲ್ಲ

'ದರ್ಶನ್‌ ಸರ್‌ ಇನ್ನೂ ಈ ಕೇಸ್‌ನಲ್ಲಿ ಆಪಾದಿತ ಅಷ್ಟೇ, ಅಪರಾಧಿ ಅಲ್ಲ. ಹಾಗಾಗಿ ಅಲ್ಲಿ ಏನೆಲ್ಲ ಮೂಲ ಸೌಕರ್ಯಗಳಿರುತ್ತೋ ಅವು ಸಿಗಬೇಕು. ನಾನು ಕೂಡ ಚೌಕ ಸಿನಿಮಾದ ಸಂದರ್ಭದಲ್ಲಿ ಶೂಟಿಂಗ್​ನ ಅರ್ಧಭಾಗ ಜೈಲಿನಲ್ಲೇ ಕಳೆದಿದ್ದೇನೆ. ಜೈಲಿನಲ್ಲಿ ಹೇಗೆಲ್ಲ ಇರುತ್ತೆ ಅನ್ನೋದನ್ನ ನಾನು ಆ ಸಂದರ್ಭದಲ್ಲಿ ಚೆನ್ನಾಗಿ ನೋಡಿದ್ದೀನಿ ಎಂದಿರುವ ತರುಣ್​ ಅವರು, ಎಲ್ಲ ಕೈದಿಗಳಿಗೂ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ನಿಯಮವೇ ಇದೆ. ಅವುಗಳನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ. ಆ ಹಕ್ಕು ಎಲ್ಲರಿಗೂ ಸಿಗಬೇಕಾಗುತ್ತೆ. ಆದರೆ ಅದಕ್ಕೂ ಮೀರಿ ಜೈಲಿನಲ್ಲಿ ದರ್ಶನ್‌ ಅವರಿಗೆ ಬೇರೆ ಏನೋ ಆಗಿದೆ ಅಂದ್ರೆ, ನಿಜಕ್ಕೂ ನನಗೂ ನೋವಾಗುತ್ತೆ' ಎಂದಿದ್ದಾರೆ.

ತುಂಬಾ ಸ್ಟ್ರಾಂಗ್​ ಅವರು ಎಂದ ತರುಣ್​

ಅಷ್ಟಕ್ಕೂ ದರ್ಶನ್​ ಅವರು ತುಂಬಾ ಸ್ಟ್ರಾಂಗ್​. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಯಾವತ್ತೂ ಏನೇ ನೋವಿದ್ರೂ ಹೊರಗೆ ತೋರಿಸಿಕೊಳ್ಳಲ್ಲ. ಯಾವಾಗಲೂ ನೋವನ್ನ ಒಳಗಡೆಯೇ ಇಟ್ಟುಕೊಂಡಿರುತ್ತಾರೆ. ಯಾರ ಬಳಿಯೂ ಹಂಚಿಕೊಳ್ಳುವ ವ್ಯಕ್ತಿ ಅವರಲ್ಲ. ಹಾಗಿರುವಾಗ ಅವರೇ ವಿಷ ಕೇಳುತ್ತಿದ್ದಾರೆ ಅಂದ್ರೆ, ಪರಿಸ್ಥಿತಿ ಎಷ್ಟರ ಮಟ್​ಟಿಗೆ ಹೋಗಿರಬೇಕು ಎಂದು ನೋವಿನಿಂದ ನುಡಿದಿದ್ದಾರೆ ತರುಣ್​ ಸುಧೀರ್​.

ಇದನ್ನೂ ಓದಿ: ಮಗೆ- ಸೊಸೆಯನ್ನು ಮನೆಯಿಂದ ಹೊರಕ್ಕೆ ಹಾಕಿದ್ಮೇಲೆ ಶಕುಂತಲಾ ಲುಕ್ಕೇ ಚೇಂಜ್ ಆಗೋಯ್ತು ನೋಡ್ರಪ್ಪಾ!