ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಚಿತ್ರತಂಡ ಯಶಸ್ವಿಯಾಗಿ ಕಾಶ್ಮೀರ ಶೂಟಿಂಗ್‌ ಮುಗಿಸಿಕೊಂಡು ಬಂದಿದೆ. ಯಾವುದೇ ತೊಂದರೆ ಇಲ್ಲದೆ ಮೂರು ದಿನಗಳ ಕಾಲ ರೊಮ್ಯಾಂಟಿಕ್‌ ಹಾಡಿನ ಚಿತ್ರೀಕರಣ ಮುಗಿಸಿ ಈಗಷ್ಟೆಬೆಂಗಳೂರಿಗೆ ಮರಳಿರುವ ನಿರ್ದೇಶಕ ಪವನ್‌ ಒಡೆಯರ್‌ ಮಾತುಗಳು ಇಲ್ಲಿವೆ-

1. ನನ್ನ ತಂಡದ ಜತೆಗೆ ನಾನು ಐದು ದಿನಗಳ ಮೊದಲೇ ಕಾಶ್ಮೀರಕ್ಕೆ ಬಂದಿದ್ದೆ. ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ, ಅಂಥಾ ಲೊಕೇಷನ್‌ಗಳು ಸಿಕ್ಕವು. ಇದುವರೆಗೂ ಯಾರೂ ಚಿತ್ರೀಕರಣ ಮಾಡದ ಸ್ಥಳಗಳಲ್ಲಿ ಶೂಟಿಂಗ್‌ ಮಾಡಿದ್ದೇವೆ.

2. ಒಟ್ಟು ಮೂರು ದಿನಗಳ ಕಾಲ ಸೋನ್‌ ಮಾರ್ಗ್‌ ಎನ್ನುವ ಸುಂದರ ಜಾಗದ ಸುತ್ತ ಹಾಡಿನ ಶೂಟಿಂಗ್‌ ಮಾಡಿದ್ದೇವೆ. ಚಿತ್ರೀಕರಣಕ್ಕಾಗಿ ಐದು ದಿನಗಳ ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು.

ಬದಲಾದುವು ರೆಮೋ ಹಾಡುಗಳು;ಪವನ್‌ ಒಡೆಯರ್‌ ಕೊಟ್ಟ 5 ಕಾರಣಗಳು!

3. ಕೊರೋನಾ ಸಮಯದಲ್ಲಿ ಹೊರಗೆ ಶೂಟಿಂಗ್‌ ಬೇಡ ಅಂದುಕೊಂಡೇ ಇಡೀ ಹಾಡನ್ನು ಗ್ರಾಫಿಕ್ಸ್‌ನಲ್ಲಿ ಶೂಟ್‌ ಮಾಡಲು ತಯಾರಿ ಮಾಡಿಕೊಂಡು ಒಂದೆರಡು ದೃಶ್ಯಗಳನ್ನು ಚಿತ್ರೀಕರಿಸಿ ನೋಡಿದೆ. ಆದರೆ, ಹಾಡು ಚೆನ್ನಾಗಿ ಬರಲಿಲ್ಲ. ಹೀಗಾಗಿ ಕೊಂಚ ರಿಸ್ಕ್‌ ಆದರೂ ಪರ್ವಾಗಿಲ್ಲ ಎಂದುಕೊಂಡು ಕಾಶ್ಮೀರಕ್ಕೇ ಬಂದು ಶೂಟಿಂಗ್‌ ಮಾಡಿದ್ದೇವೆ.

4. ಕಾಶ್ಮೀರಕ್ಕೆ ಬಂದ ಮೇಲೆ ಗೊತ್ತಾಗಿದ್ದು, ಕೊರೋನಾ ಹಾಗೂ ಲಾಕ್‌ಡೌನ್‌ನಂತಹ ಯಾವ ಬಿಸಿ ಕೂಡ ಇಲ್ಲಿ ಇಲ್ಲ. ಎಲ್ಲವೂ ಕೂಲ್‌ ಕೂಲ್‌.

ಮುಗುಳುನಗೆ ಸುಂದರಿ ಆಶಿಕಾ ಕೆನ್ನೆಗೆ ಕಿಸ್ ಕೊಟ್ಟು ಓಡಿಹೋದವ ಸಿಗಲೇ ಇಲ್ಲ! 

5. ವೈದಿ ಕ್ಯಾಮೆರಾ, ಭೂಷಣ್‌ ನೃತ್ಯ ಸಂಯೋಜನೆಯಲ್ಲಿ ಚಿತ್ರದ ನಾಯಕ ಇಶಾನ್‌ ಹಾಗೂ ನಾಯಕಿ ಆಶಿಕಾ ರಂಗನಾಥ್‌ ಅವರು ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ಹಾಡಿನೊಂದಿಗೆ ಇಡೀ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಲಿದೆ.

Scroll to load tweet…