ಬದಲಾದುವು ರೆಮೋ ಹಾಡುಗಳು;ಪವನ್ ಒಡೆಯರ್ ಕೊಟ್ಟ 5 ಕಾರಣಗಳು!
ಅವರಿಗೆ ಹಾಗೆ ಹಳೆಯದು, ಔಟ್‌ಡೇಟೆಡ್ ಅನಿಸಿದ್ದೇ ತಡ ಈಗಾಗಲೇ ಕಂಪೋಸ್ ಆದ ‘ರೆಮೋ’ ಚಿತ್ರದ ಅಷ್ಟೂಹಾಡುಗಳನ್ನು ರಿಜೆಕ್ಟ್ ಮಾಡಿ ಹೊಸದಾಗಿ ಹಾಡುಗಳನ್ನು ರೂಪಿಸಿದ್ದಾರೆ. ತಾವು ಅಂದುಕೊಂಡಂತೆ ಚಿತ್ರದ 6 ಹಾಡುಗಳಿಗೆ ಹೊಸ ಜೀವ ಕೊಡುವ ಕೆಲಸವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಬಂದಿದ್ದಾರೆ.
ಇಶಾನ್ ಹಾಗೂ ಆಶಿಕಾ ರಂಗನಾಥ್ ಜೋಡಿ ನಟನೆಯ ‘ರೆಮೋ’ ಚಿತ್ರದ ಹಾಡುಗಳನ್ನು ಕೊನೆಯ ಹಂತದಲ್ಲಿ ಕೈ ಬಿಡುವುದಕ್ಕೆ ನಿರ್ದೇಶಕ ಪವನ್ ಒಡೆಯರ್ ಅವರೇ ಒಂದಿಷ್ಟುಕಾರಣಗಳನ್ನು ಕೊಟ್ಟಿದ್ದಾರೆ.
ಕೊರೋನಾ ವಿರುದ್ಧ ತಾರೆಗಳ ದೃಶ್ಯ ರೂಪಕ; ಇದು ಪವನ್ ಒಡೆಯರ್ ನಿರ್ದೇಶನದ!
1. ಅಂದುಕೊಂಡ ಸಮಯಕ್ಕೆ ನಾವು ಚಿತ್ರೀಕರಣ ಮುಗಿಸಿದ್ವಿ. ಎಲ್ಲವೂ ಸರಿ ಇದಿದ್ದರೆ ಇಷ್ಟೊತ್ತಿಗೆ ಸಿನಿಮಾ ತೆರೆಗೆ ಬರುತ್ತಿತ್ತು. ಈಗ ನೋಡಿದರೆ ನಮ್ಮ ಚಿತ್ರದ ಹಾಡುಗಳು, ಸಂಗೀತ ನಮಗೇ ಹಳೆಯದು, ಔಟ್‌ಡೇಟೆಡ್ ಆಗಿದೆಯಲ್ಲ ಅನಿಸಕ್ಕೆ ಶುರುವಾಯಿತು.
ಹೊಸದಾಗಿ ಹಾಡುಗಳನ್ನು ಮಾಡಿರುವ ಕಾರಣ ಎರಡು ಹಾಡುಗಳ ಮರು ಚಿತ್ರೀಕರಣ ಮಾಡುವ ಕೆಲಸ ಬಾಕಿ ಉಳಿದುಕೊಂಡಿದೆ. ಉಳಿದಂತೆ ಎಲ್ಲ ಕೆಲಸಗಳು ಮುಗಿದ್ದು, ಒಳ್ಳೆಯ ಸಮಯ ನೋಡಿಕೊಂಡು ಚಿತ್ರಮಂದಿರಗಳಿಗೆ ಬರುತ್ತೇವೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. - ಪವನ್ ಒಡೆಯರ್, ನಿರ್ದೇಶಕ
3. ನಾವೇ ಮಾಡಿದ ಕೆಲಸ ಹಳೆಯದು ಎನ್ನುವ ಭಾವನೆ ಮೂಡಲು ಮತ್ತೊಂದು ಕಾರಣ, ಬದಲಾಗಿರುವ ಸಂಗೀತ ಅಭಿರುಚಿ. ಈ ಲಾಕ್‌ಡೌನ್ ಸಮಯದಲ್ಲಿ ನೂರಾರು ರೀತಿಯ ಸಂಗೀತದ ಆ್ಯಪ್‌ಗಳು ಡೌನ್‌ಲೋಡ್ ಆಗಿದೆ. ಹೊಸದಾಗಿ ಸಂಗೀತ ಕೇಳುತ್ತಿರುವವರನ್ನು ಸಮೀಕ್ಷೆ ಮಾಡಿದಾಗ ಅವರ ಸಂಗೀತ ಅಭಿರುಚಿ ಬದಲಾಗಿರುವುದು ಕಂಡಿತು. ಕೇಳುಗರು ಬದಲಾಗಿದ್ದಾಗ ನಾವು ಮಾತ್ರ ಹಳೆಯದೆ ಕೊಟ್ಟರೆ ಹೇಗೆ?
3. ಚಿತ್ರೀಕರಣ ಕೂಡ ಮುಗಿಸಿದ ಆರು ಹಾಡುಗಳನ್ನು ಕೈ ಬಿಟ್ಟು ಹೊಸದಾಗಿ ಸಂಗೀತದ ಜತೆಗೆ ಸಾಹಿತ್ಯ ಕೂಡ ಬರೆಸಿದ್ದೇನೆ. ಅದರ ಕೆಲಸಗಳು ಅಂತಿಮ ಹಂತಕ್ಕೆ ಬಂದಿವೆ.
4. ಪುಣ್ಯಕ್ಕೆ ನಮ್ಮ ಚಿತ್ರದಲ್ಲಿ ಎರಡು ಹಾಡು ಮಾತ್ರ ಲಿಪ್ ಸಿಂಕ್‌ನಲ್ಲಿ ಬರುತ್ತವೆ. ಉಳಿದಂತೆ ಎಲ್ಲಾ ಹಾಡುಗಳು ಮಾಂಟೇಜ್‌ನಲ್ಲಿವೆ. ಹೀಗಾಗಿ ಹೊಸದಾಗಿ ಹಾಡುಗಳನ್ನು ಮಾಡಿಸಿರುವುದರಿಂದ ಮತ್ತೆ ಎರಡು ಹಾಡುಗಳ ಚಿತ್ರೀಕರಣ ಮಾಡಬೇಕಿದೆ.
5. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಯಾವುದೇ ರೀತಿ ಬೇಸರ ಮಾಡಿಕೊಳ್ಳದೆ ಉತ್ಸಾಹದಿಂದ ಹೊಸದಾಗಿ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ.