ರಕ್ಷಿತಾ ಪ್ರೇಮ್ ಸಹೋದರ ರಾಣಾ ವಿವಾಹ ಸಂಭ್ರಮದಲ್ಲಿದ್ದಾರೆ. ರಕ್ಷಿತಾ ಎಂಬವರನ್ನೇ ವರಿಸುತ್ತಿರುವುದು ವಿಶೇಷ. ಈ ನಡುವೆ ರಕ್ಷಿತಾ-ಪ್ರೇಮ್ ಮದುವೆಯ ಕುತೂಹಲಕಾರಿ ವಿಡಿಯೋ ವೈರಲ್ ಆಗಿದೆ. ಮದುವೆಯಲ್ಲಿ ಸೋದರಮಾವ ನಾಪತ್ತೆಯಾಗಿದ್ದ ಘಟನೆ ಹಾಗೂ ಒಂದು ತಿಂಗಳಲ್ಲೇ ಮದುವೆ ನಿಶ್ಚಯವಾದ ಕಥೆಯನ್ನು ರಕ್ಷಿತಾ ಹಂಚಿಕೊಂಡಿದ್ದಾರೆ.

ಸದ್ಯ ನಟಿ ರಕ್ಷಿತಾ ಪ್ರೇಮ್​ ಮನೆಯಲ್ಲಿ ಮದುವೆಯ ಸಡಗರ. ಅವರ ಸಹೋದರ, ನಟ ರಾಣಾ ಅವರ ಮದುವೆಯ ಖುಷಿ ಮನೆ ಮಾಡಿದೆ. ಇದೇ 7 ಮತ್ತು 8 ರಂದು ಮದುವೆ ಇದ್ದು, ಕುತೂಹಲ ಎಂದರೆ, ಮದುಮಗಳ ಹೆಸರು ಕೂಡ ರಕ್ಷಿತಾ. ಏಳು ವರ್ಷಗಳ ಫ್ರೆಂಡ್​ಷಿಪ್​ಗೆ ಈಗ ದಾಂಪತ್ಯದ ಮುದ್ರೆ ಒತ್ತುತ್ತಿದೆ ಈ ಜೋಡಿ. ಈ ನಡುವೆಯೇ, ಇದೀಗ ರಕ್ಷಿತಾ ಮತ್ತು ಪ್ರೇಮ್​ ಜೋಡಿಯ ಮದುವೆಯ ದಿನದ ಕುತೂಹಲ ವಿಷಯದ ವಿಡಿಯೋ ಮತ್ತೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ತಮ್ಮ ಮದುವೆಯ ದಿನ ನಡೆದಿರುವ ಮೋಜಿನ ಹಾಗೂ ಫಜೀತಿಯ ಬಗ್ಗೆ ರಕ್ಷಿತಾ ಮಾತನಾಡಿರುವ ವಿಡಿಯೋ ಇದಾಗಿದೆ.

ಇದರಲ್ಲಿ, ರಕ್ಷಿತಾ ಅವರು ಹೇಳಿದ್ದೇನೆಂದರೆ, 'ನಮ್ ಸಂಪ್ರದಾಯದಲ್ಲಿ ಸೋದರ ಮಾವ ನನ್ನನ್ನು ಅಂದ್ರೆ ಮದುಮಗಳನ್ನು ಮಂಟಪಕ್ಕೆ ಕರೆತರಬೇಕು. ಆದರೆ ನನ್ನ ಸೋದರ ಮಾವ ನಾಪತ್ತೆಯಾಗಿಬಿಟ್ಟಿದ್ರು. ಬಹಳ ಕೋಲಾಹಲವೇ ನಡೆದು ಹೋಯ್ತು. ಹೇಳಿಕೇಳಿ ಪ್ರೇಮ್​ ಇವರು ಕೇಳಬೇಕಾ ಎಲ್ಲವನ್ನೂ ದೊಡ್ಡದಾಗಿಯೇ ಮಾಡಬೇಕು ಅವರಿಗೆ. ಇದೇ ಕಾರಣಕ್ಕೆ ಮದುವೆಯೂ ಸಕತ್​ ಗ್ರ್ಯಾಂಡ್​ ಇತ್ತು. ಬಹಳ ಜನ ಬಂದಿದ್ರು. ನಮ್ಮ ಮಾವ ಏನೋ ತರಲು ಹೊರಗೆ ಹೋಗಿದ್ದರು. ಆದರೆ ಸೆಕ್ಯುರಿಟಿಯವರು ಅವರನ್ನು ಒಳಗೆ ಬಿಡಲೇ ಇಲ್ಲ. ನಮ್​ ಮಾವ, ನಾನು ಮಾವ ಕಣೋ, ಹೋಗಬೇಕು ಎಂದ್ರೂ ಸೆಕ್ಯುರಿಟಿಯವರು ಎಲ್ಲರೂ ಹೀಗೆಯೇ ಹೇಳ್ಕೊಂಡು ಬರೋದು, ಬಿಡಲ್ಲ ಅಂದುಬಿಟ್ರು. ಆಮೇಲೆ ಅವರು ಯಾರ ಮೂಲಕವೇ ಹೇಳಿಸಿ ಒಳಗೆ ಬರುವಷ್ಟರಲ್ಲಿ ಸುಸ್ತಾಗೋಯ್ತು ಎಂದು ಅಂದು ನಡೆದ ಘಟನೆಯನ್ನು ನಟಿ ಹೇಳಿಕೊಂಡಿದ್ದಾರೆ. 

ಈ ಬ್ಯೂಟಿ ನೋಡಿ ಎಲ್ಲೆಲ್ಲೋ ಚಿವುಟಿದ್ರು, ಬೇರೆ ಬೇರೆ ಪ್ರೊಡ್ಯೂಸರ್ಸ್​ ಬಂದು... ನಟ ದೀಪಕ್​ ಹೇಳಿದ್ದೇನು ಕೇಳಿ...

ಇನ್ನು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಅವರು, ನಾವು ಮದ್ವೆಯಾಗುತ್ತೇವೆ ಎಂದಾಗ ಅಚ್ಚರಿ ಪಟ್ಟುಕೊಂಡವರೇ ಹೆಚ್ಚು. ಪ್ರೇಮ್​ ಮಂಡ್ಯದವರು. ನಾನು ಕುಂದಾಪುರದವಳು. ಇಬ್ಬರ ಲೈಫ್ ಸ್ಟೈಲ್ ಬೇರೆನೇ ಇತ್ತು. ಆದರೂ ಅದ್ಹೇಗೋ ಇಬ್ಬರ ನಡುವೆ ಪ್ರೇಮ ಮೊಳೆತು ಮದ್ವೆಯಾಗಿರುವುದಾಗಿ ನಟಿ ಹೇಳಿದ್ದಾರೆ. ಇದೀಗ ನಟಿ ರಕ್ಷಿತಾ, ತಮ್ಮ ಮದುವೆಯ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ಮಾಡಿಕೊಂಡಿದ್ದಾರೆ. ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ರಕ್ಷಿತಾ ಅವರು ತಮ್ಮ ದಾಂಪತ್ಯದ ಕೆಲವೊಂದು ಕುತೂಹಲದ ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಮದುವೆಯ ದಿನ ಉಂಟಾದ ಭಾರಿ ಗಲಾಟೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ತಾವಿಬ್ಬರೂ ಭೇಟಿಯಾಗಿ ಒಂದೇ ತಿಂಗಳಾಗಿತ್ತು. ಅದಾಗಲೇ ಪ್ರೇಮ್​ ಅವರು ಮದುವೆ ಪ್ರಸ್ತಾಪವನ್ನು ನಮ್ಮ ಮನೆಗೆ ತಂದುಬಿಟ್ಟರು. ನನಗೆ ತುಂಬಾ ವಿಚಿತ್ರ ಎನಿಸಿತು. ಆದರೆ ನಮ್ಮಮ್ಮ ಹುಡುಗ ತುಂಬಾ ಒಳ್ಳೆಯವನು ಎಂದು ಹೇಳಿದ್ರು. ಇಷ್ಟೇ ಲವ್​ಸ್ಟೋರಿ. ಕೊನೆಗೆ ಮದ್ವೆನೇ ಆಯ್ತು ಎಂದು ಹೇಳಿದ್ದಾರೆ.

2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ `ಅಪ್ಪು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದವರು ನಟಿ ರಕ್ಷಿತಾ. ನಂತರ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್‍ನಲ್ಲಿ ಕೂಡ ನಾಯಕಿಯಾಗಿ ನಟಿಸಿದರು. ಕಲಾಸಿಪಾಳ್ಯ ಚಿತ್ರ ರಕ್ಷಿತಾ ಸಿನಿ ಕರಿಯರ್​ಗೆ ಬಿಗ್‍ಬ್ರೇಕ್ ನೀಡಿತು. ಕನ್ನಡದಲ್ಲಿ ಪುನೀತ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಮುಂತಾದ ನಟರೊಂದಿಗೆ ನಟಿಸಿದ ರಕ್ಷಿತಾ ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 2007 ರಲ್ಲಿ ನಿರ್ದೇಶಕ ಪ್ರೇಮ್‍ರನ್ನು ವಿವಾಹವಾಗಿರೋ ರಕ್ಷಿತಾರಿಗೆ ಒಬ್ಬ ಪುತ್ರನಿದ್ದು ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಮೋಸ್ಟ್​ ಬ್ಯೂಟಿಫುಲ್​ ಕಪಲ್​ ಎಂದು ಕರೆಸಿಕೊಳ್ಳುವವರು ರಕ್ಷಿತಾ ಮತ್ತು ಪ್ರೇಮ್​. ಪ್ರೇಮ್ ಜೊತೆ ವಿವಾಹವಾದ ನಂತರ ನಟನೆಗೆ ವಿರಾಮ ಹೇಳಿದ ರಕ್ಷಿತಾ ತಮ್ಮ ಹೋಮ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ಶಿವರಾಜಕುಮಾರ್​ ಅವರ ನೂರನೇ ಚಿತ್ರ ಜೋಗಯ್ಯವನ್ನು ನಿರ್ಮಾಣವನ್ನು `ಪ್ರೇಮ್ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. 

ಬೆಡ್​ರೂಮ್​, ಮಲಗೋ ದಿಕ್ಕನ್ನು ಹೀಗೆ ಬದಲಿಸಿ- ಕುಟುಂಬದಲ್ಲಿ ಮ್ಯಾಜಿಕ್ ಗಮನಿಸಿ! ಖ್ಯಾತ ವಾಸ್ತು ತಜ್ಞ ಸಲಹೆ ಕೇಳಿ