ಸೈಕೋ ಜಯಂತ್​, 'ಮಿಸ್ಟರ್ ರಾಣಿ' ಚಿತ್ರದಲ್ಲಿ ಮಹಿಳಾ ಪಾತ್ರದಲ್ಲಿ ನಟಿಸಿದ್ದಾರೆ. ಜುಲೈ ೭ ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಾಯಕನಾಗಿ ಬಂದ ಹುಡುಗ, ನಾಯಕಿಯಾಗುವ ಕಥೆಯಿದೆ. ಜಯಂತ್​ ಅವರ ಮಹಿಳಾ ವೇಷ, ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ನಿರ್ದೇಶಕ ಮಧುಚಂದ್ರ ಈ ಹಾಸ್ಯಮಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಲಕ್ಷ್ಮೀ ನಿವಾಸದ ಸೈಕೋ ಜಯಂತ್​ ಹೆಣ್ಣಾಗಿ ಬದಲಾಗಿದ್ದಾರೆ. ಮಿಸ್ಟರ್​ ರಾಣಿ ಚಿತ್ರದಲ್ಲಿ ಇವರದ್ದೇ ಲೀಡ್​​ ರೋಲ್​. ಮಿಸ್ಟರ್ ರಾಣಿ (Mister Rani). ಈ ಚಿತ್ರ ಇದೇ 7ರಂದು ಬಿಡುಗಡೆಯಾಗಲಿದೆ. ಇದಾಗಲೇ ಈ ಸಿನಿಮಾದ ಪೋಸ್ಟರ್​ ಸೋಷಿಯಲ್​ ಮೀಡಿಯಾಗಳಲ್ಲಿ ಓಡಾಡುತ್ತಿದ್ದು ಈ ರಾಣಿಯನ್ನು ನೋಡಿದ್ರೆ, ನಿಜವಾಗಿಯೂ ಈ ರಾಣಿ, ಸೈಕೋ ಜಯಂತಾ ಎಂದು ಕೇಳುವುದು ಉಂಟು. ಹುಡುಗನೋ, ಹುಡುಗಿಯೋ ಗೊತ್ತಾಗದ ರೀತಿಯಲ್ಲಿ ಜಯಂತ್​ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಕಾಣಿಸುತ್ತಿದ್ದಾರೆ. ಪುರುಷ ಒಬ್ಬ ಮಹಿಳೆಯ ರೋಲ್​ ಎಂದರೆ, ಅದು ಹಾಸ್ಯಮಯವೇ ಆಗಿರಲು ಸಾಧ್ಯ. ವಿನೂತನ ಶೈಲಿಯ ಕಾಮಿಡಿ ಎಂಟರ್ ಟೈನರ್ ಚಿತ್ರ ಇದಾಗಿದೆ. ಈ ಚಿತ್ರವನ್ನು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ ನಿರ್ದೇಶಿಸಿದ್ದಾರೆ. ಇದರ ಕಥೆ ಏನೆಂದರೆ, ಹೀರೋ ಆಗಬೇಕೆಂದು ಸಿನಿಮಾಕ್ಕೆ ಬಂದ ಹುಡುಗ ಹೀರೋಯಿನ್ ಆಗುವ ಕಥೆ!

ಇದೀಗ ಇವರು ಹೆಣ್ಣಿನ ವೇಷದಲ್ಲಿ ಕೀರ್ತಿ ಎಂಟರ್​ಟೇನ್​ಮೆಂಟ್​ ಕ್ಲಿನಿಕ್​ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಅವರು, ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡಾಗ ತಮ್ಮನ್ನು ಯಾರೂ ಗುರುತು ಹಿಡಿಯಲಿಲ್ಲ. ಆಗ ನಾನು ಬಾಯಿಯನ್ನೂ ಬಿಡದ ಕಾರಣ ಎಲ್ಲರೂ ನನ್ನನ್ನು ಹೆಣ್ಣು ಎಂದೇ ಅಂದುಕೊಂಡಿದ್ದರು ಎಂದಿದ್ದಾರೆ. ಇದೀಗ ಅವರು ಹೆಣ್ಣಿನ ಅಂದರೆ ಮಿಸ್ಟರ್​ ರಾಣಿ ರೂಪದಲ್ಲಿಯೇ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ.ಅವರ ರೂಪವನ್ನು ನೋಡಿದರೆ ಎಂಥ ಹೀರೋಯಿನ್​ಗಳೂ ನಾಚಿಕೊಳ್ಳುವಂಥ ಸೌಂದರ್ಯ ಇದೆ. ತಮ್ಮನ್ನು ಶೂಟಿಂಗ್​ ಸೆಟ್​ನಲ್ಲಿ ನೋಡಿದಾಗ ಕೆಲವರು ನಾನು ಹೆಣ್ಣೇ ಎಂದುಕೊಂಡು ಎಲ್ಲೆಲ್ಲೋ ಚಿವುಟಿದರು. ಎಲ್ಲಿ ಅಂತ ನಾನು ಹೇಳಲ್ಲಪ್ಪ ಎಂದಿದ್ದಾರೆ.

ಮಿಸ್ಟರ್​ ರಾಣಿ ಸಿನಿಮಾದ ಪ್ರೊಡ್ಯೂಸರ್​ ಕೂಡ ಸಂದರ್ಶನಕ್ಕೆ ಬಂದಿದ್ದು, ಇವರು ದೀಪಕ್​ ಎಂದು ತಿಳಿಯದೇ ಇವರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಲು ಹಲವು ಪ್ರೊಡ್ಯೂಸರ್​ಗಳು ಮುಂದೆ ಬಂದಿದ್ದರು. ನಾನು ಕೆಲವರನ್ನು ಕರೆದುಕೊಂಡು ಬಂದಿದ್ದೆ. ಅವರು ಈ ರಾಣಿಯನ್ನು ದುರುಗುಟ್ಟಿ ನೋಡುತ್ತಿದ್ದರು. ಅಲ್ಲಿದ್ದವರಂತೂ ಈ ಸುಂದರಿ ಯಾರು? ಕನ್ನಡ ಬೇರೆ ಮಾತನಾಡ್ತಾಳೆ. ಬೇರೆ ಭಾಷೆಯವಳು ಅಲ್ಲ ಅಂತಾಯ್ತು, ಯಾರು ಅಂತೆಲ್ಲಾ ನೋಡುತ್ತಿದ್ದರು ಎಂದಿದ್ದಾರೆ.

ನವವಧು ಚಂದನಾಗೆ ಪ್ರಾಂಕ್​ ಕಾಲ್​ ಮಾಡಿ ಸುಸ್ತು ಮಾಡಿದ ಲಕ್ಷ್ಮೀ ನಿವಾಸ ಸೈಕೋ ಜಯಂತ್​! ಹೀಗಿತ್ತು ನೋಡಿ ಮಜಾ

ಇದೇ ವೇಳೆ ದೀಪಕ್​ ಅವರು ತಮ್ಮ ಈ ಸೌಂದರ್ಯಕ್ಕೆ ನಾಲ್ಕೈದು ತಾಸು ದಿನವೂ ಮೇಕಪ್​ ಮಾಡಿಕೊಳ್ಳಬೇಕಾಯಿತು. ವ್ಯಾಕ್ಸಿಂಗ್​ ಎಲ್ಲಾ ಮಾಡಿಕೊಳ್ಳುವ ಸ್ಥಿತಿ ಇತ್ತಲ್ಲ, ಅದಕ್ಕೇ ತುಂಬಾ ಸುಸ್ತಾಗಿ ಹೋಯಿತು. ನಿಜಕ್ಕೂ ಹೆಣ್ಣುಮಕ್ಕಳಿಗೆ ಮೇಕಪ್​ ಮಾಡಿಕೊಳ್ಳಲು ಯಾಕೆ ಟೈಮ್​ ಆಗುತ್ತೆ ಎನ್ನುವುದು ತಿಳಿಯಿತು ಎಂದಿದ್ದಾರೆ ದೀಪಕ್​. ಇನ್ನು ದೀಪಕ್ ಸುಬ್ರಮಣ್ಯ ಕುರಿತು ಹೇಳುವುದಾದರೆ, ಇವರು ರಂಗಭೂಮಿ ಕಲಾವಿದ. ಎರಡು ದಶಕಗಳ ಬಣ್ಣದ ಲೋಕದಲ್ಲಿ ಪಳಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್​. ಇದಾಗಲೇ, ಸಾಲಗಾರ , ಜಾರು ಬಂಡೆ , ಪಿಂಕಿ ಎಲ್ಲಿ..? , ಶುದ್ಧಿ , ಆಯಾನಾ , ಸಾರಾಂಶ ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ. ಸಿನಿಮಾ ರಂಗ, ರಂಗಭೂಮಿ ಹಾಗೂ ಕಿರುತೆರೆ ಮೂರರಲ್ಲೂ ಈಗ ದೀಪಕ್ ಸುಬ್ರಮಣ್ಯ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾಗಿದ್ದ ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ಈ ಸೀರಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಪಡೆದರು. ಇದೀಗ ಲಕ್ಷ್ಮಿ ನಿವಾಸದಲ್ಲಿ ಸಕತ್​ ಫೇಮಸ್​ ಆಗಿದ್ದಾರೆ. ಪ್ರಾಂಕ್​ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ.

ರಾಣಿಯಾಗಿ ಲಕ್ಷ್ಮೀ ನಿವಾಸ ಸೈಕೋ ಜಯಂತ್​! ಚಿತ್ರದ ಪ್ರಮೋಷನ್​ ವೇಳೆನೂ ಚಿನ್ನುಮರಿಯ ಹೀಗೆ ಹೆದ್ರಿಸೋದಾ?

YouTube video player