ವಾಸ್ತುಶಾಸ್ತ್ರವು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ತತ್ವಗಳನ್ನು ಆಧರಿಸಿದೆ. ವಾಸ್ತು ದೋಷಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯ ಒಡೆಯರು ನೈಋತ್ಯದಲ್ಲಿ, ಹೆಣ್ಣುಮಕ್ಕಳು ವಾಯವ್ಯದಲ್ಲಿ, ಚಿಕ್ಕಮಕ್ಕಳು ನೈಋತ್ಯದಲ್ಲಿ, ಗಂಡುಮಕ್ಕಳು ಪೂರ್ವ ಅಥವಾ ದಕ್ಷಿಣದಲ್ಲಿ ಮಲಗಬೇಕು. ದಕ್ಷಿಣ ಅಥವಾ ಪೂರ್ವಕ್ಕೆ ತಲೆ ಹಾಕಿ ಮಲಗುವುದು ಉತ್ತಮ. ಉತ್ತರಕ್ಕೆ ತಲೆ ಹಾಕಿ ಮಲಗಬಾರದು.
ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಬಾಹ್ಯಾಕಾಶ ತತ್ವಗಳನ್ನು ಆಧರಿಸಿರುವ ವಿಜ್ಞಾನ ವಾಸ್ತುಶಾಸ್ತ್ರ. ವಾಸ್ತುವನ್ನು ನಂಬದ ಹಲವರು ಇದ್ದರೂ, ನಂಬುವವರನ್ನೇ ಬಂಡವಾಳ ಮಾಡಿಕೊಂಡು ದಾರಿ ತಪ್ಪಿಸಿ ಹಣ ಕೀಳುವ ನಕಲಿಗಳೂ ಅಷ್ಟೇ ಪ್ರಮಾಣದಲ್ಲಿ ಇದ್ದಾರೆ ಎನ್ನುವುದೂ ನಿಜ. ಆದರೆ ನಮ್ಮ ಜೀವನದಲ್ಲಿ ನಮ್ಮ ಅರಿವಿಗೆ ಬಾರದೇ ಮಾಡಿಕೊಂಡಿರುವ ಚಿಕ್ಕಪುಟ್ಟ ವಾಸ್ತುವಿನ ತಪ್ಪುಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇದಕ್ಕೆ ನಿದರ್ಶನವಾಗಿ ಹಲವಾರು ಮಂದಿ ತಮ್ಮ ಅನಿಸಿಕೆಗಳನ್ನೂ ಹಂಚಿಕೊಂಡಿರುವುದು ಇದೆ.
ಇದಕ್ಕೆ ಒಂದು ಸಿಂಪಲ್ ಉದಾಹರಣೆ ಕೊಡುವುದಾದರೆ, ನೀವು ಯಾವುದಾದರೂ ಒಂದು ಬಡಾವಣೆಗೆ ಹೋಗಿ ನೋಡಿ. ಅಲ್ಲಿ ಎಷ್ಟೋ ಕೋಟಿ ಖರ್ಚುಮಾಡಿ ಕಟ್ಟಿರುವ ಕನಸಿನ ಮನೆ ಯಾರೂ ದಿಕ್ಕಿಲ್ಲದೇ ಹಾಗೆಯೇ ಬಿದ್ದಿರುತ್ತದೆ. ಕೆಲವು ಸಂದರ್ಭಗಳಲ್ಲಿ ಮನೆ ಕಟ್ಟಿದ ತಕ್ಷಣ ಸಾವಾಗುತ್ತದೆ. ಕೆಲವರು ಹೇಳಿದ್ದನ್ನೂ ನೀವು ಕೇಳಿರಬಹುದು. ಆ ಮನೆಗೆ ಹೋದ ಬಳಿಕ ನಮಗೆ ಸಿಕ್ಕಾಪಟ್ಟೆ ಧನಪ್ರಾಪ್ತಿ ಆಯ್ತು ಎಂದೋ, ಇಲ್ಲವೇ ಸಿಕ್ಕಾಪಟ್ಟೆ ಕಷ್ಟ ಆಯ್ತು ಎಂದು ಹೇಳಿರುತ್ತಾರೆ. ಅದಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು ಆ ಮನೆಯ ವಾಸ್ತು ಎನ್ನುವುದು ತಜ್ಞರ ಅಭಿಮತ. ಹಾಗಿದ್ದರೆ, ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಇರಬೇಕು ಎಂದರೆ ಬೆಡ್ರೂಮ್ನ ವಾಸ್ತು ಹೇಗಿರಬೇಕು, ಯಾರ ದಿಕ್ಕಿನಲ್ಲಿ ಯಾರನ್ನು ಮಲಗಿಸಬೇಕು ಎಂಬಿತ್ಯಾದಿಯ ಬಗ್ಗೆ ಖ್ಯಾತ ವಾಸ್ತು ತಜ್ಞರಾಗಿರುವ ಅರವಿಂದ ರತನ್ ಅವರು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಿಟ್ಟುಹೋದವರು ಮರಳಿ ಬರಬೇಕೆ? ಇದನ್ನು 108 ಬಾರಿ ಹೇಳಿ ಮ್ಯಾಜಿಕ್ ನೋಡಿ: ಡಾ.ಸೌಜನ್ಯ ಟಿಪ್ಸ್
ಮೊದಲಿಗೆ ಯಾವ ದಿಕ್ಕಿನ ಬೆಡ್ರೂಮ್ನಲ್ಲಿ ಯಾರನ್ನು ಮಲಗಿಸಬೇಕು ಎನ್ನುವುದನ್ನು ಅವರು ಹೇಳಿದ್ದಾರೆ. ಮನೆಯ ಒಡೆಯರು (ಆರೋಗ್ಯದಿಂದ ಇರುವ ವಯಸ್ಸಾಗಿರುವ ತಂದೆ-ತಾಯಿ) ಇದ್ದರೆ ಅವರನ್ನು south west ಅಂದರೆ ನೈಋತ್ಯ ಮೂಲೆಯಲ್ಲಿ ಮಲಗಿಸಬೇಕು. ಮನೆ ಮಗನ ಹೆಸರಿನಲ್ಲಿ ಇದ್ದು, ಆತನೇ ಮನೆ ಕಟ್ಟಿಸಿರುವುದು ಮಗ ಸಹಜವಾಗಿ ಮಗನೇ ಮಾಲೀಕ ಆಗಿರುತ್ತಾನೆ. ಒಂದು ವೇಳೆ ಅವರಿಗೆ ಅನಾರೋಗ್ಯವಿದ್ದರೆ ಅವರನ್ನು ತಾತ್ಕಾಲಿಕವಾಗಿ North East ಎಂದರೆ ಈಶಾನ್ಯ ಮೂಲೆಯಲ್ಲಿ ಮಲಗಿಸಬೇಕು. ಇದು ಸಾಧ್ಯವಿಲ್ಲದಿದ್ದರೆ ಅವರನ್ನು ಪಶ್ಚಿಮದ ದಿಕ್ಕಿನಲ್ಲಿ ಮಲಗಿಸಿ. ಹೆಣ್ಣುಮಕ್ಕಳು ವಾಯವ್ಯ ಮೂಲೆ (North west) ಮಲಗಿಸಬೇಕು. ಅದರಲ್ಲಿ ಮಲಗಿದವರು ಮನೆಯಿಂದ ಆಚೆಗೆ ಹೋಗುತ್ತಾರೆ. ಇದರ ಅರ್ಥ ಮನೆಯ ಮಗಳು ಮನೆಯಿಂದ ಹೋಗುವುದು ಎಂದರೆ, ಅವರಿಗೆ ಮದುವೆಯಾಗುವುದು ಎಂದು ಅರ್ಥ. ಅದೇ ರೀತಿ ಮನೆಗೆ ಬಂದಿರುವ ನೆಂಟರು ಅಲ್ಲಿಯೇ ಇರದೇ ಮನೆಯಿಂದ ಹೋಗಬೇಕು ಎಂದರೆ ಅವರನ್ನು ವಾಯವ್ಯ ಮೂಲೆಯಲ್ಲಿ ಮಲಗಿಸಬೇಕು. ಅವರನ್ನು ನೈಋತ್ಯದಲ್ಲಿ ಮಲಗಿಸಿದರೆ ಅವರು ಮನೆ ಬಿಟ್ಟು ಬೇಗ ಹೋಗಲ್ಲ ನೋಡಿ. ಚಿಕ್ಕಮಕ್ಕಳು ಇದ್ದರೆ ಅಥವಾ ಮದುವೆಯಾಗುವ ವಯಸ್ಸಿಗೆ ಬಾರದ ಹೆಣ್ಣುಮಕ್ಕಳ ಇದ್ದರೆ ನೈಋತ್ಯದಲ್ಲಿ ಇರುವ ಬೆಡ್ರೂಮ್ನಲ್ಲಿ ಮಲಗಿಸಬೇಕು. ಇದರಿಂದ ಅವರ ಬ್ಯೂಟಿ ಹೆಚ್ಚುತ್ತದೆ.
ಮದುವೆಯಾಗದೇ ಇರುವ ಗಂಡುಮಕ್ಕಳಿಗೆ ಪೂರ್ವ ದಿಕ್ಕಿನಲ್ಲಿ ಇರುವ ಬೆಡ್ರೂಮ್ನಲ್ಲಿ ಮಲಗಿಸಬೇಕು. ಇಲ್ಲದಿದ್ದರೆ ದಕ್ಷಿಣದ ಬೆಡ್ರೂಮ್ನಲ್ಲಿ ಮಲಗಿಸಬಹುದು. ಚಿಕ್ಕ ಗಂಡುಮಕ್ಕಳು ಇದ್ದರೆ ಈಶಾನ್ಯದಲ್ಲಿ ಮಲಗಿಸಬಹುದು. ಆದರೆ ದೊಡ್ಡವರು ಈಶಾನ್ಯದಲ್ಲಿ ಮಲಗಿದರೆ, ಬೆನ್ನು ನೋವು ಶುರುವಾಗುತ್ತದೆ.
ಯಾವ ದಿಕ್ಕಿನಲ್ಲಿ ತಲೆ ಹಾಕಬೇಕು?
ದಕ್ಷಿಣದಲ್ಲಿ ತಲೆ ಹಾಕಿ ಮಲಗಿದರೆ ತುಂಬಾ ಉತ್ತಮ. ಎರಡನೆಯ ಉತ್ತಮದ್ದು ಪೂರ್ವ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದು. ಇದನ್ನು ಬಿಟ್ಟು ಪಶ್ಚಿಮದ ದಿಕ್ಕಿಗೆ ತಲೆಹಾಕಿ ಮಲಗಿ, ಸೂರ್ಯನ ದಿಕ್ಕಿಗೆ ಕಾಲು ತೋರಿಸಿದರೆ ಅವರಿಗೆ ಹಲವು ಸಮಸ್ಯೆ ಆಗುತ್ತದೆ. ಐಟಿ, ಕೋರ್ಟ್ ಇಂಥ ನೋಟಿಸ್ ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ಉತ್ತರಕ್ಕೆ ಮಾತ್ರ ಯಾರೂ ತಲೆ ಹಾಕಿ ಮಲಗಬಾರದು. ಇದರಿಂದ ಬಾರಿ ಡೇಂಜರ್. ಅನಾರೋಗ್ಯ ಸಮಸ್ಯೆ ಬಾಧಿಸುತ್ತದೆ. ಮನೆಯಲ್ಲಿ ಸಡನ್ ಆಗಿ ಯಾರದ್ದಾದರೂ ಸಾವಾಗುತ್ತಿದೆ ಎಂದರೆ ಮೊದಲು ಅವರು ಉತ್ತರಕ್ಕೆ ತಲೆ ಹಾಕಿ ಮಲಗುತ್ತಿದ್ದಾರೆಯೇ ಎಂದು ನೋಡಿ ಬೇಕಿದ್ದರೆ, ಹೀಗೆಯೇ ಆಗಿರುತ್ತದೆ ಎಂದಿದ್ದಾರೆ ಅರವಿಂದ ರತನ್.
ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್ ಹೇಗೆ?

