ನವೆಂಬರ್‌ ತಿಂಗಳು ಕನ್ನಡ ನಾಡಿಗೆ ರಾಜ್ಯೋತ್ಸವ ಸಂಭ್ರಮ. ಅತ್ತ ಚಿತ್ರರಂಗವೂ ಕೂಡ ಹಬ್ಬವನ್ನು ಜೋರಾಗಿಯೇ ಆಚರಿಸುತ್ತಿದೆ. ಕನ್ನಡ ಸೇರಿದಂತೆ ಎಲ್ಲ ಭಾಷೆಯ 50ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರುತ್ತಿವೆ. ತಿಂಗಳು ಪೂರ್ತಿ ಕನ್ನಡದ ಯಾವುದೇ ದೊಡ್ಡ ಸ್ಟಾರ್‌ ನಟನ ಸಿನಿಮಾ ತೆರೆಗೆ ಬರುತ್ತಿಲ್ಲ. ಕನ್ನಡದಲ್ಲಿ ಬಹುತೇಕ ಹೊಸಬರ ಸಿನಿಮಾಗಳು ತೆರೆಗೆ ಬರುತ್ತಿವೆ.

ಆರ್‌. ಕೇಶವಮೂರ್ತಿ

ಕನ್ನಡದಲ್ಲಿ 15 ಚಿತ್ರಗಳು

ನವೆಂಬರ್‌ ತಿಂಗಳ ಮೊದಲ ವಾರದಲ್ಲೇ ‘ಬನಾರಸ್‌’ ಮೂಲಕ ಜಮೀರ್‌ ಖಾನ್‌ ಪುತ್ರ ಝೈದ್‌ ಖಾನ್‌ ಅದೃಷ್ಟಪರೀಕ್ಷೆ ಮಾಡಿಕೊಳ್ಳುತ್ತಿದ್ದರೆ, ಹೊಸಬರ ‘ಕಂಬ್ಳಿಹುಳ’ ಭರವಸೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರಗಳ ನಂತರ ಸರದಿಯಂತೆ ದಿಲ್‌ ಪಸಂದ್‌, ಥ್ರಿಬಲ್‌ ರೈಡಿಂಗ್‌, ತಿಮ್ಮಯ್ಯ ವರ್ಸಸ್‌ ತಿಮ್ಮಯ್ಯ, ರಾಣ, ನಟ ಭಯಂಕರ, ಓ, ಸೆಪ್ಟೆಂಬರ್‌ 13, ಯೆಲ್ಲೋ ಗ್ಯಾಂಗ್‌, ಖಾಸಗಿ ಪುಟಗಳು, ಅಬ್ಬರ, ಸದ್ದು... ವಿಚಾರಣೆ ನಡೆಯುತ್ತಿದೆ, ರೇಮೋ, ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ, ಗೌಳಿ, ತಿರ್ಬೋಕಿಗಳು ಚಿತ್ರಗಳು ತೆರೆಗೆ ಬರುತ್ತಿವೆ.

ತೆಲುಗಿನಲ್ಲಿ 9 ಚಿತ್ರಗಳು

ಪಕ್ಕದ ಭಾಷೆ ಟಾಲಿವುಡ್‌ನಲ್ಲೂ ಕೂಡ 20ಕ್ಕೂ ಚಿತ್ರಗಳು ತೆರೆಗೆ ಸಜ್ಜಾಗಿದ್ದು, ಈ ಪೈಕಿ 8 ಚಿತ್ರಗಳು ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಿಕೊಂಡಿವೆ. ಊರ್ವಶಿವೋ ರಾಕ್ಷಸಿವೋ, ಲೈಕ್‌ ರ್ಶೇರ್‌ ಸಬ್‌ಸ್ಕೆ್ರೖಬ್‌, ಮಿಸ್ಟರ್‌ ತಾರಕ್‌, ಬೊಮ್ಮ ಬ್ಲಾಕ್‌ಬÓ್ಟರ್‌, ಆಕಾಸಂ, ಯಶೋಧ, ಇಟ್ಲು ಮಾರೇದುಮಿಲಿ ಪ್ರಜಾನಿಕಂ, ತಗ್ಗೆದೆಲೇ, ತೆಲುಗಬ್ಬಾಯಿ ಗುಜರಾತ್‌ ಅಮ್ಮಾಯಿ ಚಿತ್ರಗಳು ತೆರೆಗೆ ಬರುತ್ತಿವೆ. ಸಮಂತಾ, ಅಲ್ಲರಿ ನರೇಶ್‌, ನವೀನ್‌ ಚಂದ್ರ ಹೊರತಾಗಿ ಉಳಿದವರು ಹೊಸಬರು.

BANARAS ಸಿನಿಮಾ ಪ್ರೀತಿ ಮೂಡಿಸಿದ್ದು ಅಣ್ಣಾವ್ರು: ಝೈದ್‌ ಖಾನ್‌

ತಮಿಳಿನಲ್ಲಿ 9 ಚಿತ್ರಗಳು

ನಟರಾದ ವಿಶಾಲ್‌, ವಿಜಯ್‌ ಸೇತುಪತಿ, ಜಯಂ ರವಿ ಹೀಗೆ ತಮಿಳಿನಲ್ಲಿ ನಾಲ್ಕೈದು ಸ್ಟಾರ್‌ ನಟರ ಚಿತ್ರಗಳು ನವೆಂಬರ್‌ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಬರುತ್ತಿವೆ. ಈ ಪೈಕಿ ಲವ್‌ ಟುಡೇ, ಕಾಫಿ ವಿಥ್‌ ಕಾದಲ…, ನಿದಮ… ಒರು ವಾನಮ…, ಯಶೋಧಾ, ಅಗಿಲನ್‌, ಇದಂ ಪೆರೋಲ… ಇವಳ್‌, ಏಜೆಂಟ್‌ ಕಣ್ಣಾಯಿರಾಮ…, ಮಿರಲ್‌, ಲತಾತಿನ್‌ ಚಿತ್ರಗಳ ಮೇಲೆ ಪ್ರೇಕ್ಷಕರು ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಇಟ್ಟುಕೊಂಡಿದ್ದಾರೆ. ಈ ಒಂಭತ್ತು ಚಿತ್ರಗಳ ಜತೆಗೆ ಮತ್ತಷ್ಟುಚಿತ್ರಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ.

ಮಲಯಾಳಂನಲ್ಲಿ 8 ಚಿತ್ರಗಳು

ಮಲಯಾಳಂ ಚಿತ್ರರಂಗದಲ್ಲೂ ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗುತ್ತಿವೆ. ಈ ಪೈಕಿ ಮೊದಲ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ‘ಸ್ಯಾಟರ್ಡೆ ನೈಟ್‌’ ಬಿಡುಗಡೆ ಆಗುತ್ತಿದೆ. ಆ ನಂತರ ಕೂಮನ್‌, 1744 ವೈಟ್‌ ಆಲ್ಟೋ, ಎಲ್ಲಂ ಸೆಟ್ಟುನ್‌, ಶೋಲೈ ಮುಂತಾದ ಚಿತ್ರಗಳು ತೆರೆಗೆ ಬರುತ್ತಿವೆ.

ಹಿಂದಿಯಲ್ಲಿ 10 ಚಿತ್ರಗಳು

ಬಾಲಿವುಡ್‌ನಲ್ಲಿ 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಸಜ್ಜಾಗಿವೆ. ದೃಶ್ಯಂ 2, ಫೋನ್‌ ಬೂತ್‌, ಮಿಲಿ, ಡಬಲ್‌ ಎಕ್ಸ್‌ಎಲ್‌, ಮಿಸ್ಟರ್‌ ಮಮ್ಮಿ, ಯೋಧ, ಉಂಚಾಯ್‌, ತಾಯ್‌ ಮಸಾಜ್‌, ಭೇಡಿಯಾ ಮುಂತಾದ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ತುಂಬಾ ದಿನಗಳ ನಂತರ ‘ಮಿಲಿ’ ಚಿತ್ರದ ಮೂಲಕ ಜಾನ್ವಿ ಕಪೂರ್‌ ಪ್ರೇಕ್ಷಕರ ಮುಂದೆ ಬರುತ್ತಿರುವುದು, ದಕ್ಷಿಣ ಭಾರತದ ಸಕ್ಸಸ್‌ ಫ್ರಾಂಚೈಸ್‌ ಎನಿಸಿಕೊಂಡಿರುವ ದೃಶ್ಯಂ 2 ಚಿತ್ರ ಬಿಡುಗಡೆ ಆಗುತ್ತಿರುವುದು ಬಾಲಿವುಡ್‌ನ ವಿಶೇಷತೆಗಳಲ್ಲಿ ಒಂದು. ಇದರ ಜತೆಗೆ ಸಲ್ಮಾನ್‌ ಖಾನ್‌ ನಟನೆಯ ಇನ್ಷಾ ಅಲ್ಲಾ ಚಿತ್ರವೂ ತೆರೆ ಮೇಲೆ ಮೂಡುವ ಸಾಧ್ಯತೆಗಳ ಬಗ್ಗೆ ಹಿಂದಿ ಅಂಗಳದಲ್ಲಿ ಚರ್ಚೆಗಳಿವೆ.

GANDHADA GUDI REVIEW: ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ..

ನವೆಂಬರ್‌ ತಿಂಗಳ ಪ್ಯಾನ್‌ ಇಂಡಿಯಾ ಸ್ಟಾರ್‌ ಸಮಂತಾ

ನವೆಂಬರ್‌ ತಿಂಗಳ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ನಟಿ ಸಮಂತಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇವರ ನಟನೆಯ ತೆಲುಗಿನ ‘ಯಶೋಧಾ’ ಸಿನಿಮಾ ಮೂಲ ಭಾಷೆಯ ಜತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಅಲ್ಲದೆ 2022ರ ಕೊನೆಯಲ್ಲಿ ಯಾವ ಪ್ಯಾನ್‌ ಇಂಡಿಯಾ ಸಿನಿಮಾ ಕೂಡ ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಂಡಿಲ್ಲ. ಹೀಗಾಗಿ ಈ ವರ್ಷದ ಕೊನೆಯ ಟಾಲಿವುಡ್‌ ಬೆಡಗಿ ಸಮಂತಾ ಪ್ಯಾನ್‌ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ.