Q Movie: ನಿರಂಜನ್ ಸುಧೀಂದ್ರ ನಟನೆಯ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್!
ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಹೊಸ ಸಿನಿಮಾದ ಹೆಸರು ‘ಕ್ಯೂ’. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿದ್ಧವಾಗಲಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು. ಖ್ಯಾತ ನಿರ್ದೇಶಕ ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ (Upendra) ಅಣ್ಣನ ಮಗ ನಿರಂಜನ್ ಸುಧೀಂದ್ರ (Niranjan Sudhindra) ಹೊಸ ಸಿನಿಮಾದ ಹೆಸರು ‘ಕ್ಯೂ’ (Q). ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿದ್ಧವಾಗಲಿರುವ ಪ್ಯಾನ್ ಇಂಡಿಯಾ (Pan India) ಸಿನಿಮಾ ಇದು. ಖ್ಯಾತ ನಿರ್ದೇಶಕ ನಾಗಶೇಖರ್ (Nagashekar) ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ (Firstlook) ಹಾಗೂ ಮೇಕಿಂಗ್ ವಿಡಿಯೋ (Making Video) ಬಿಡುಗಡೆ ಮಾಡಲಾಗಿದೆ. ‘ಇದೊಂದು ನೈಜ ಘಟನೆಗಳನ್ನು ಆಧರಿಸಿದ ಕಾಲೇಜಿನ ಕತೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅದರಿಂದ ಕಾಲೇಜಿನ ಆಡಳಿತದ ಮೇಲೆ ಬೀರುವ ಪರಿಣಾಮಗಳ ಸುತ್ತ ಕತೆ ಸಾಗುತ್ತದೆ’ ಎನ್ನುತ್ತಾರೆ ನಿರಂಜನ್ ಸುಧೀಂದ್ರ.
ನಟಿ ಭಾಗ್ಯಶ್ರೀ (Bhagyashree) ಪುತ್ರಿ ಅವಂತಿಕ ದಸ್ಸಾನಿ (Avantika Dasani) ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಆವಂತಿಕಾ ಮೊದಲಿಗೆ ಬಣ್ಣ ಹಚ್ಚಿದ್ದು, 'ಮಿಥ್ಯ' ಎಂಬ ವೆಬ್ಸರಣಿಗಾಗಿ. ಈ ಸರಣಿಯು ಜೀ5ನಲ್ಲಿ ಫೆ.18ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ, ಅವರಿಗೆ ಬೇರೆ ಬೇರೆ ಚಿತ್ರರಂಗಗಳಿಂದ ಆಫರ್ಗಳು ಬರುತ್ತಿವೆ. ಈಗಾಗಲೇ ಬೆಲ್ಲಂಕೊಂಡ ಗಣೇಶ್ ಅಭಿನಯದ ತೆಲುಗು ಚಿತ್ರವೊಂದರಲ್ಲಿ ಆವಂತಿಕಾ ನಟಿಸುತ್ತಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿತ್ತು. ಈಗ ‘ಕ್ಯೂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬ್ಯಾಕ್‌ಗ್ರೌಂಡ್ ಇದ್ದರೆ ಸಾಲದು: ನಿರಂಜನ್ ಸುಧೀಂದ್ರ
ಪ್ರೇಮಿಗಳ ದಿನದಂದು ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಸತ್ಯ ಹೆಗ್ಡೆ ಕ್ಯಾಮೆರಾ, ಅಜನೀಶ್ ಲೋಕನಾಥ್ ಸಂಗೀತ ಇದೆ. ಏಪ್ರಿಲ್ 1ರಿಂದ ಚಿತ್ರಕ್ಕೆ ಶೂಟಿಂಗ್ ನಡೆಯಲಿದೆ. ವಿಜಯ್ ಸವಣೂರು ನಿರ್ಮಾಣ ಸಂಸ್ಥೆಯ ಸಹಕಾರದೊಂದಿಗೆ ನಾಗಶೇಖರ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗು ನಟ ಸತ್ಯದೇವ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ನಿರಂಜನ್ ತಮ್ಮ ನಟನೆಯ ಚೊಚ್ಚಲ ಚಿತ್ರ 'ನಮ್ ಹುಡುಗ್ರು' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅವರ ಎರಡನೇ ಚಿತ್ರ 'ಸೂಪರ್ ಸ್ಟಾರ್' ಈಗಾಗಲೇ ಚಿತ್ರೀಕರಣ ಹಂತದಲ್ಲಿದೆ.
'ಸೂಪರ್ ಸ್ಟಾರ್' ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಡ್ಯಾನ್ಸರ್ ಪಾತ್ರ ಮಾಡುತ್ತಿದ್ದಾರೆ. ಅವರನ್ನು ಈ ಚಿತ್ರಕ್ಕೆ ಕರೆತರಲು ನಾಲ್ಕು ತಿಂಗಳು ಕಾಯಬೇಕಾಯಿತು. ಕೊನೆಗೂ ಕತೆ ಒಪ್ಪಿಕೊಂಡು ಈ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ ಎಂದು ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಹಿಂದೆ ತಿಳಿಸಿದ್ದರು. 'ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು, ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಿರಂಜನ್ ಕೂಡ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಈ ಚಿತ್ರದಲ್ಲಿ ನಟಿಸಲು 87ರ ಪ್ರಾಯದ ಮೂಗೂರು ಸುಂದರಂ ಬಂದಿರುವುದು ಖುಷಿ ಆಗುತ್ತಿದೆ' ಎಂದು ನಟ ಉಪೇಂದ್ರ ಚಿತ್ರತಂಡಕ್ಕೆ ಮುಹೂರ್ತದ ಸಂದರ್ಭದಲ್ಲಿ ಶುಭ ಕೋರಿದ್ದರು.
ಬ್ಲಾಕ್‌ನಲ್ಲಿ ಟಿಕೆಟ್ ತಗೊಂಡು 'ಲವ್ ಮಾಕ್ಟೇಲ್ 2' ನೋಡಿದೆ: Darling Krishna
'ನನಗೆ ಸಿನಿಮಾವೊಂದೇ ಗೊತ್ತಿರುವುದು. ಇದರಲ್ಲಿಯೇ ಏನಾದರು ಮಾಡಬೇಕೆಂಬ ತುಡಿತ ಇದೆ. ತುಂಬಾ ವರ್ಷಗಳಿಂದ ಒಳ್ಳೇ ಸ್ಕ್ರಿಪ್ಟ್ ಸಲುವಾಗಿ ಕಾಯುತ್ತಿದ್ದೆ. ಅದು ಈ ಚಿತ್ರದ ಮೂಲಕ ಸಿಕ್ಕಿದೆ. ಡಾನ್ಸಿಂಗ್ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್ ಇಷ್ಟ. ಒಂದೊಳ್ಳೆ ಸಂದೇಶ ಕೂಡ ಸಹ ಇದರಲ್ಲಿದೆ ಎಂದು ನಟ ನಿರಂಜನ್ ಹೇಳಿದರು. ಇನ್ನು 'ನಮ್ ಹುಡುಗ್ರು' ಸಿನಿಮಾದಲ್ಲೂ ನಿರಂಜನ್ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯಾಗಿ ರಾಧ್ಯಾ ರಂಗಾಯಣ ಅಭಿನಯಿಸುತ್ತಿದ್ದಾರೆ. 'ಈ ಸಿನಿಮಾದಲ್ಲಿ ನನ್ನದು ಬರ್ಮಾ ಎಂಬ ಹುಡುಗನ ಪಾತ್ರ. ಪಾತ್ರದ ಪೋಷಣೆ ಚೆನ್ನಾಗಿದೆ. ಇದೊಂದು ಇನೋಸೆಂಟ್ ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮ' ಎಂದು ನಿರಂಜನ್ ಹೇಳಿದ್ದಾರೆ.