ಪ್ರೀತಿ, ಪ್ರೇಮದ ಜತೆಗೆ ಕರಾವಳಿ ನೆತ್ತರಿನ ಕತೆಯನ್ನು ಹೇಳುವ ‘ಮಾರ್ನಮಿ’ ಚಿತ್ರದ ಟೀಸರ್‌ ಅನ್ನು ನಟ ರಿಷಿ, ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ, ಕೆಪಿ ಅರವಿಂದ್‌ ಬಿಡುಗಡೆ ಮಾಡಿದರು.

ಪ್ರೀತಿ, ಪ್ರೇಮದ ಜತೆಗೆ ಕರಾವಳಿ ನೆತ್ತರಿನ ಕತೆಯನ್ನು ಹೇಳುವ ‘ಮಾರ್ನಮಿ’ ಚಿತ್ರದ ಟೀಸರ್‌ ಅನ್ನು ನಟ ರಿಷಿ, ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ, ಕೆಪಿ ಅರವಿಂದ್‌ ಬಿಡುಗಡೆ ಮಾಡಿದರು. ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದ ರಿತ್ವಿಕ್‌ ಮಠದ್‌ ಅವರು ಈ ಚಿತ್ರದಲ್ಲಿ ಮಾಸ್‌ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಗುಣಾದ್ಯಾ ಪ್ರೊಡಕ್ಷನ್ಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿರುವ ಟೀಸರ್‌ ಕುತೂಹಲ ಹೆಚ್ಚಿಸಿದ್ದು, ಚರಣ್‌ ರಾಜ್‌ ಹಿನ್ನೆಲೆ ಸಂಗೀತ ಹೈಲೆಟ್‌.‌

ನಿಶಾಂತ್‌ ಚಿತ್ರದ ನಿರ್ಮಾಪಕ. ಚೈತ್ರಾ ಆಚಾರ್‌ ನಾಯಕಿ. ನಿರ್ದೇಶಕ ರಿಶಿತ್‌ ಶೆಟ್ಟಿ, ‘ಈ ಹಿಂದೆ ಬಂದ ನಾಯಕಿ ಪಾತ್ರವನ್ನು ಪರಿಚಯಿಸುವ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಚಿತ್ರದ ಟೀಸರ್‌ ಬಂದಿದೆ. ಇದು ನನ್ನ ಸ್ನೇಹಿತ ಸುಧೀ ಬರೆದ ಕತೆ. ಕರಾವಳಿ ಭಾಗದ ಕತೆಯನ್ನು ಇಲ್ಲಿ ಹೇಳಲಾಗಿದೆ. ನೆತ್ತರು, ಪ್ರೀತಿ ಮತ್ತು ಅಲ್ಲಿನ ಸಂಸ್ಕೃತಿ ಚಿತ್ರದಲ್ಲಿದೆ’ ಎಂದರು. ಸುಮನ್‌ ತಲ್ವಾರ್‌, ಪ್ರಕಾಶ್‌ ತುಮಿನಾಡು, ಸೋನು ಗೌಡ, ಜ್ಯೋತೀಶ್‌ ಶೆಟ್ಟಿ, ಸ್ವರಾಜ್‌ ಶೆಟ್ಟಿ, ಮೈಮ್‌ ರಾಮದಾಸ್‌, ಚೈತ್ರಾ ಶೆಟ್ಟಿ ಅವರು ಚಿತ್ರದ ಮುಖ್ಯ ಪಾತ್ರಧಾರಿಗಳು.

YouTube video player


ನಟಿ ಚೈತ್ರಾ ಆಚಾರ್‌, ‘ಕಥೆ ಬಹಳ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಶಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ಸಿನಿಮಾ ಬಗ್ಗೆ ಎಕ್ಸೈಟ್ ಆಗಿದ್ದೇನೆ’ ಎಂದರು. ನಾಯಕ ರಿತ್ವಿಕ್‌, ‘ದಸರಾ ಸಂದರ್ಭವನ್ನು ತುಳುವಿನಲ್ಲಿ ಮಾರ್ನಮಿ ಎಂದು ಕರೆಯುತ್ತಾರೆ’ ಎಂದು ಹೇಳಿದರು. ರಿಶಿತ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ರಿಶಿತ್‌, ‘ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷದ ಸಂಸ್ಕೃತಿಯ ಎಳೆ ಚಿತ್ರದಲ್ಲಿದೆ. ಇದೊಂದು ಲವ್‌ಸ್ಟೋರಿ. ಆ್ಯಕ್ಷನ್, ಎಮೋಷನ್, ಕಾಮಿಡಿಯ ಕಥಾಹಂದರವಿದೆ’ ಎಂದಿದ್ದಾರೆ.

ನಾನು ಹಿಂದಿರುಗಿ ನೋಡಿದಾಗ, ನನಗೆ ಹೆಮ್ಮೆಯಾಗುತ್ತದೆ. ಈ ಸಿನಿ ಪ್ರಯಾಣವು ಇಷ್ಟು ಚೆನ್ನಾಗಿರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಹೊಸ ಪ್ರತಿಭೆಗಳು ಮತ್ತು ಉತ್ತಮ ಕಂಟೆಂಟ್ ಅನ್ನು ಬೆಂಬಲಿಸುವ ನಿಶಾಂತ್ ಸರ್ ಮತ್ತು ಶಿಲ್ಪಾ ಮೇಡಂ ಅವರಂತಹ ನಿರ್ಮಾಪಕರು ಸಿನಿ ಇಂಡಸ್ಟ್ರಿಗೆ ಅಗತ್ಯವಿದೆ ಎಂದು ರಿತ್ವಿಕ್ ಹೇಳಿದರು. ಇನ್ನು ಚಿತ್ರೀಕರಣ ಪೂರ್ಣಗೊಂಡಿದ್ದು, ನಿರ್ಮಾಣ ನಂತರದ ಕೆಲಸಗಳು ಮತ್ತು ಸಂಗೀತ ಕಾರ್ಯಗಳು ನಡೆಯುತ್ತಿವೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಗುಣದ್ಯಾ ಪ್ರೊಡಕ್ಷನ್ಸ್‌ನ ನಿರ್ಮಾಪಕ ನಿಶಾಂತ್ ಹೇಳಿದ್ದಾರೆ.