ಮಾರ್ನಮಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ ರಮ್ಯಾ: ಚೈತ್ರಾ ಆಚಾರ್ ರೋಲ್ ರಿವೀಲ್!
‘ಮಾರ್ನಮಿ’ ಚಿತ್ರದಲ್ಲಿ ನಾಯಕಿ ಪರಿಚಯ ಮಾಡಿಕೊಳ್ಳುವ ವಿಶೇಷವಾದ ಟೀಸರ್ ಅನ್ನು ನಟಿ ರಮ್ಯಾ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚೈತ್ರಾ ಆಚಾರ್ ನಾಯಕಿಯಾಗಿ ನಟಿಸಿರುವ ‘ಮಾರ್ನಮಿ’ ಚಿತ್ರದಲ್ಲಿ ನಾಯಕಿ ಪರಿಚಯ ಮಾಡಿಕೊಳ್ಳುವ ವಿಶೇಷವಾದ ಟೀಸರ್ ಅನ್ನು ನಟಿ ರಮ್ಯಾ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ನಿರ್ದೇಶನದ ಮಾಡುತ್ತಿರುವ ಈ ಚಿತ್ರವು ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಜೊತೆಗೆ ಪ್ರೇಮಕಥೆ , ಆಕ್ಷನ್, ಎಮೋಷನ್, ಹಾಸ್ಯವನ್ನು ಒಳಗೊಂಡಿದೆ. ಶಿಲ್ಪಾ ನಿಶಾಂತ್ ಚಿತ್ರದ ನಿರ್ಮಾಪಕರು.
ಚೈತ್ರಾ ದೀಕ್ಷಾ ಎಂಬುದು ಚಿತ್ರದ ನಾಯಕಿ ಪಾತ್ರದ ಹೆಸರು. ತನ್ನ ಪ್ರೀತಿ, ಮದುವೆ ಬಗ್ಗೆ ಕರಾವಳಿ ಭಾಷೆಯಲ್ಲಿ ಪರಿಚಯ ಮಾಡಿಕೊಳ್ಳುತ್ತಾ, ಡಿ ಗ್ಲಾಮರ್ ಲುಕ್‌ನಲ್ಲಿ ಚೈತ್ರಾ ಆಚಾರ್ ಕಾಣಿಸಿಕೊಂಡಿರುವುದು ಟೀಸರ್‌ನ ಹೈಲೈಟ್. ರಿತ್ವಿಕ್ ಮಠದ್ ಚಿತ್ರದ ನಾಯಕ.
ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಕ್ಯಾಮೆರಾ ಹಿಡಿದಿದ್ದಾರೆ.
ಕಥೆ ಬಹಳ ಇಷ್ಟವಾಯ್ತು. ಡೇಟ್ ಸಮಸ್ಯೆ ಇದೆ ಆಗಲ್ಲ ಎಂದೆ. ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳೋಣ ಎಂದರು. ಅದ್ಭುತ ಕಥೆ. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೇಸರ ಆಗಲಿಲ್ಲ ಎಂದರು ರಿತ್ವಿಕ್.