'ನೆನಪಿರಲಿ' ಚಿತ್ರದ ಮೂಲಕ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ನಟ ಪ್ರೇಮ್‌ಗೆ ಮದುವೆ ಆಗಿದೆ ಅಂದ್ರೆ ಯಾರು ನಂಬುತ್ತಾರೆ ಹೇಳಿ? ಈಗಲ್ಲೂ ಕಾಲೇಜ್‌ ಹುಡುಗನಂತೆ ಎಂಗ್, ಹ್ಯಾಂಡ್ಸಂ ಆ್ಯಂಡ್ ಎನರ್ಜಿಟಿಕ್ ಆಗಿರುವ ಪ್ರೇಮ್‌‌ಗೆ ಇಷ್ಟು ದೊಡ್ಡ ಪುತ್ರಿ ಇರುವ ವಿಚಾರ ತಿಳಿದು, ನೆಟ್ಟಿಗರು ಶಾಕ್ ಆಗಿದ್ದಾರೆ.

ಚಿತ್ರರಂಗಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಎಂಟ್ರಿ; ಹೇಗಿದ್ದಾರೆ ನೋಡಿ ಬಟ್ಟಲು ಕಣ್ಣಿನ ಸುಂದರಿ? 

ಹೌದು! ಜನವರಿ 23ರಂದು ನಟ ಪ್ರೇಮ್‌ ಪುತ್ರಿ ಅಮೃತಾ ಹುಟ್ಟುಹಬ್ಬವಿತ್ತು. ಮಗಳ ಜೊತೆ ಆಕಾಶ ನೋಡುತ್ತಾ ನಿಂತಿರುವ ಫೋಟೋ ಅಪ್ಲೋಡ್ ಮಾಡಿ, 'ನಕ್ಷತ್ರಗಳು ನಾಚುವ ಹಾಗೆ ಸದಾ ನಗುತಿರು. ಹ್ಯಾಪಿ ಬರ್ತ್‌ಡೇ ಮಗಳೇ, ಲವ್‌ ಯು,' ಎಂದು ಪ್ರೇಮ್ ಅಚ್ಚು ಮೆಚ್ಚಿನ ಮಗಳಿಗೆ ಶುಭಾ ಹಾರೈಸಿದ್ದಾರೆ. ಪ್ರೇಮ್‌ಗೆ ಪುತ್ರಿ ಕಂಡರೆ ಪಂಚಪ್ರಾಣ. ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿರುವುದು ಮತ್ತೊಂದು ವಿಶೇಷ.

ಹಲವು ತಿಂಗಳ ಹಿಂದೆ ಅಮೃತಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಚಾರದ ಬಗ್ಗೆ ದೊಡ್ಡ ಚರ್ಚೆ ಆಗಿತ್ತು. ಟ್ರೆಡಿಷನಲ್‌ ಫೋಟೋ ಶೂಟ್‌ ಮಾಡೋ ಮೂಲಕ ಚಿತ್ರರಂಗದ ಗಮನ ಸೆಳೆದಿರುವ ಅಮೃತಾ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡುವುದರಲ್ಲಿ ಅನುಮಾನವಿಲ್ಲ. 

ಕನ್ನಡ ಚಿತ್ರರಂಗ ಗೊಂಬೆ ನೆನಪಿರಲಿ ಪ್ರೇಮ್ ಮಗಳು ಅಮೃತಾ! 

ತಂದೆಯಂತೆ ಅಮೃತಾ ತುಂಬಾ ಪ್ರತಿಭಾನ್ವಿತ ಹುಡುಗಿ. ಎರಡನೇ ವರ್ಷ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅಮೃತಾ, ಕಾಲೇಜ್‌ ಟಾಪರ್. ಟಿಕ್‌ಟಾಕ್‌ ಹಾಗೂ ಡಬ್‌ಸ್ಮ್ಯಾಷ್‌ ವಿಡಿಯೋದಲ್ಲಿ ಅಮೃತಾ ಆ್ಯಕ್ಟಿಂಗ್‌ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. 'ಇಬ್ಬರಿಗೂ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯವಿದೆ. ನೋಡಿದರೆ ಗೊತ್ತಾಗುತ್ತದೆ, ರಕ್ತದಲ್ಲಿ ಆ್ಯಕ್ಟಿಂಗ್ ಹರಿಯುತ್ತಿದೆ. ಇಬ್ಬರಿಗೂ ಇದೇ ಸಿಮಿಲ್ಯಾರಿಟಿ ಸರ್,' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.