Asianet Suvarna News Asianet Suvarna News

ಕಂದಾಯ ಅಧಿಕಾರಿ ಜೊತೆ ಸಿಕ್ಕಿಬಿದ್ದ ‘ನಮ್ಮ ಯಜಮಾನ್ರು’ ನಟಿ: ಇಡಿ ತೆಕ್ಕೆಯಲ್ಲಿ ನವ್ಯಾ!

ಬಹುಭಾಷಾ ನಟಿ ನವ್ಯಾ ನಾಯರ್​ ಕಂದಾಯ ಇಲಾಖೆ ಅಧಿಕಾರಿಯ ಜೊತೆ ಒಡನಾಟ ಬೆಳೆಸಿ ಫಜೀತಿಗೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯದ ಕೈಗೆ ಸಿಕ್ಕಿಬಿದ್ದಿದ್ದಾರೆ. 
 

Navya Nair received gifts jewellery from IRS officer booked suc
Author
First Published Aug 31, 2023, 6:24 PM IST

ಶ್ರೀಮಂತ ಕುಳಗಳ ಜೊತೆ ನಟಿಯರು ಸಂಬಂಧ ಹೊಂದುವುದು, ಅವರಿಂದ ದುಬಾರಿ ಹಣ ಪಡೆಯುವುದು, ಅಕ್ರಮ ಸಂಬಂಧ ಕಲ್ಪಿಸುವುದು ಇಂಥ ಹಲವು ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ಸಿನಿ ಕ್ಷೇತ್ರ, ರಾಜಕೀಯದಲ್ಲಿ  ಇಂಥ ಘಟನೆ ಸಾಮಾನ್ಯವಾಗಿ ಬಿಟ್ಟಿದ್ದರೂ, ಗ್ರಹಚಾರ ಕೆಟ್ಟಾಗ ಎಲ್ಲವೂ ಬಹಿರಂಗಗೊಳ್ಳುತ್ತದೆ. ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಸೇರಿದಂತೆ ಕೆಲ ನಟಿಯರು ಇದಾಗಲೇ ಕಾನೂನಿನ ಕುಣಿಕೆಯೊಳಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಬಹುಭಾಷಾ ನಟಿ ನವ್ಯಾ ನಾಯರ್​ ಸರದಿ.  ಕನ್ನಡದ ‘ಗಜ’, ‘ದೃಶ್ಯ’, ‘ದೃಶ್ಯ 2’, ‘ನಮ್ಮ ಯಜಮಾನ್ರು’ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ನವ್ಯಾ, ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಸಹ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಕಂದಾಯ ಇಲಾಖೆಯ ಅಧಿಕಾರಿ (IRS Officer) ಜೊತೆ ಸಿಕ್ಕಿಬಿದ್ದಿದ್ದು ಪಡಬಾರದ ಕಷ್ಟ ಪಡುವಂತಾಗಿದೆ.  ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿರುವ   ಅಧಿಕಾರಿ ಸಚಿನ್​ ಸಾವಂತ್​ ಜತೆ ರಮ್ಯಾ ಹೆಸರು ಥಳಕು ಹಾಕಿಕೊಂಡಿದೆ.

ಹೌದು. ಸಚಿನ್‌ ಸಾವಂತ್‌ ಎಂಬ ಅಧಿಕಾರಿ ಇತ್ತೀಚೆಗಷ್ಟೇ ಆಸ್ತಿ ಕಬಳಿಕೆ ಮಾಡಿದ ಆರೋಪದಲ್ಲಿ ಇಡಿ ಅವರನ್ನು ಬಂಧಿಸಿತ್ತು.  2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಖನೌದಲ್ಲಿ ಅವರನ್ನು  ಬಂಧಿಸಲಾಗಿದೆ.  ಇದೇ ಪ್ರಕರಣದ ವಿಚಾರಣೆಗೆ ನಟಿ ನವ್ಯಾಗೆ ಇಡಿ ನೋಟಿಸ್​ ನೀಡಿದ್ದು ಹಾಜರಾಗುವಂತೆ ಹೇಳಿದೆ.  ಸಚಿನ್‌ ಸಾವಂತ್‌ ಅವರ ಹಣದ ಅಕ್ರಮ ವರ್ಗಾವಣೆ (Money Laundering) ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರಿಗೆ  ನಟಿ ನವ್ಯಾ ನಾಯರ್‌ ವಿಷಯ ತಿಳಿದು ಬಂದಿತ್ತು. ಈಕೆ, ದುಬಾರಿ ಬೆಲೆಯ ಚಿನ್ನದ ಒಡೆವೆಗಳನ್ನು ಉಡುಗೊರೆಯಾಗಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ದೂರು ದಾಖಲಾಗಿದ್ದು,  ಜಾರಿ ನಿರ್ದೇಶನಾಲಯ (ED) ನೋಟಿಸ್‌ ರವಾನೆಯಾಗಿದೆ. ಸಚಿನ್​ ಸಾವಂತ್​ ಮತ್ತು ನವ್ಯಾ ನಾಯರ್​ ನಡುವೆ ನಿಕಟ ಸಂಪರ್ಕವಿದ್ದು, ದುಬಾರಿ ಚಿನ್ನಾಭರಣವನ್ನು ನವ್ಯಾ ಅವರು ಸಚಿನ್​ರಿಂದ ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪ ದಾಖಲಾಗಿದೆ. ಅಷ್ಟೇ ಅಲ್ಲದೇ ಇಬ್ಬರು ಡೇಟಿಂಗ್​ ಮಾಡುತ್ತಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ.

ಸಂಬಂಧದಲ್ಲಿ ಹೆಚ್ಚು ನಿರೀಕ್ಷೆ ಬೇಡ ಎಂದ ರಮ್ಯಾ: ಏನಾಯ್ತು ಮೇಡಂ? ನೆಟ್ಟಿಗರ ಪ್ರಶ್ನೆ

ನವ್ಯಾ ಮಾತ್ರವಲ್ಲದೆ ಅವರ ಮಗನ ಬರ್ತ್‌ಡೇ (Birthday) ನೆಪದಲ್ಲಿ ಚಿನ್ನದ ಒಡೆವೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಸಚಿನ್ ಎಂಬ ಆರೋಪವೂ ಇದೆ. ‌ ನವ್ಯಾ ಜತೆಗೆ ನಿಕಟ ಸಂಬಂಧವನ್ನೂ ಹೊಂದಿದ್ದರ ಬಗ್ಗೆ ಇಬ್ಬರ ನಡುವಿನ ಫೋನ್‌ ಕರೆ ಸಂಭಾಷಣೆಗಳೂ ಇಡಿ ಬಳಿ ಸಿಕ್ಕಿವೆ. ನಟಿಯನ್ನು ಭೇಟಿಯಾಗಲು ಸಚಿನ್​ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ವಾಟ್ಸ್​ಆ್ಯಪ್​ ಮೆಸೆಜ್‌ಗಳನ್ನೂ ತನಿಖಾಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೊಚ್ಚಿಯಲ್ಲಿ ನವ್ಯಾ ಹಾಗೂ ಸಚಿನ್ ಒಂದೇ ಅಪಾರ್ಟ್​ಮೆಂಟ್​ನ ನಿವಾಸಿಗಳಾಗಿದ್ದು ನೆರೆ ಹೊರೆಯವರಾಗಿದ್ದರು. ನವ್ಯಾ, ಕೆಲವು ಬಾರಿ ಸಚಿನ್​ರನ್ನು ಗುರುವಾಯೂರು ದೇವಾಲಯಕ್ಕೂ ಕರೆದೊಯ್ದಿದ್ದರು. ಇಡಿ ಆರೋಪದಂತೆ, ಸಚಿನ್, ಚಿನ್ನಾಭರಣೆ ಸೇರಿದಂತೆ ಕೆಲವು ದುಬಾರಿ ವಸ್ತುಗಳನ್ನು ನವ್ಯಾಗೆ ಉಡುಗೊರೆಯಾಗಿ ನೀಡಿದ್ದಾರೆ.  

ಆದರೆ, ನವ್ಯಾ  ಕುಟುಂಬ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ಬಹಳ ಹಿಂದಿನಿಂದಲೂ ನಮಗೆ ಪರಿಚಿತರು. ಅವರು ಅನೇಕ ಬಾರಿ ಗುರುವಾಯೂರು ದೇವಸ್ಥಾನಕ್ಕೆ (Temple) ಬಂದಾಗ ಅವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆವು. ನವ್ಯಾ ಅವರ ಪುತ್ರನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿರುವುದನ್ನು ಬಿಟ್ಟರೆ, ಅವರಿಂದ ಬೇರೆ ಯಾವುದೇ ಉಡುಗೊರೆ ಪಡೆದಿಲ್ಲ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ನವ್ಯಾ ನಾಯರ್​ ಬಗ್ಗೆ ಮಾಹಿತಿ ನಮೂದಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

48ನೇ ವಯಸ್ಸಲ್ಲಿ ನಟಿ ನಗ್ಮಾ ವಿವಾಹವಾಗ್ತಿದ್ದಾರಾ? ಅವರು ಹೇಳಿದ್ದೇನು?
 

Follow Us:
Download App:
  • android
  • ios