Asianet Suvarna News Asianet Suvarna News

ಸಂಬಂಧದಲ್ಲಿ ಹೆಚ್ಚು ನಿರೀಕ್ಷೆ ಬೇಡ ಎಂದ ರಮ್ಯಾ: ಏನಾಯ್ತು ಮೇಡಂ? ನೆಟ್ಟಿಗರ ಪ್ರಶ್ನೆ

ಸ್ಯಾಂಡಲ್​ವುಡ್​ ನಟಿ ರಮ್ಯಾ ಜೀವನದ ಬಗ್ಗೆ ಮಾತನಾಡಿದ್ದಾರೆ. ಸ್ನೇಹವಾಗಲೀ, ಸಂಬಂಧವಾಗಲೀ ಯಾರ ಮೇಲೂ ಎಕ್ಸ್​ಪೆಕ್ಟೇಷನ್​ ಇಟ್ಟುಕೊಳ್ಳಬಾರದು ಎಂದಿದ್ದಾರೆ.
 

Atress Ramya told that  one should not keep expectations on anyone suc
Author
First Published Aug 29, 2023, 1:24 PM IST

ಸ್ಯಾಂಡಲ್‌ವುಡ್ ಕ್ವೀನ್ (Sandalwood Queen) ಅಂತನೆ ಖ್ಯಾತಿಗಳಿಸಿರುವ ನಟಿ ರಮ್ಯಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ರಮ್ಯಾ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರಮ್ಯಾ ಸದ್ಯ ಡಾಲಿ ಧನಂಜಯ್ ಜೊತೆ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸುತ್ತಿದ್ದಾರೆ. 2003 ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ಗೆ ಪದಾರ್ಪಣೆ ಮಾಡಿದ್ದ ರಮ್ಯಾ, ದಿವ್ಯ ಸಂಪದ ಎನ್ನುವ ಹೆಸರಿನಿಂದಲೂ ಪರಿಚಿತರು. ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದ ಅವರು,  ನಂತರ ಕನ್ನಡ ಚಿತ್ರರಂಗದ ದೊಡ್ಡ-ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಹೊರ ಹೊಮ್ಮಿದ್ದಾರೆ.  ಹೀಗೆ ಹಲವು ಕನ್ನಡ ಚಿತ್ರಗಳು ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮನಮೋಹಕ ತಾರೆ ಎಂದೇ ಖ್ಯಾತಿ ಪಡೆದಿರುವ ನಟಿ ರಮ್ಯಾ (Ramya) ಅಲಿಯಾಸ್‌ ದಿವ್ಯಾ ಸಂಪದ. ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ, ರಾಜಕೀಯದಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಆದರೆ ದಿಢೀರ್‌ ಕಣ್ಮರೆಯಾಗಿ ಅದೇ ವೇಗದಲ್ಲಿ ಪ್ರತ್ಯಕ್ಷರಾಗಿ ಸುದ್ದಿಯಾಗುತ್ತಾರೆ. ಯಾವುದಾದರೂ ಒಂದು ವಿಷಯದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಮತ್ತೆ ಮರೆಯಾಗುತ್ತಾರೆ.  ಸಿನಿಮಾ ಕೆಲಸಗಳ ಮಧ್ಯೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಕೆಲ ತಿಂಗಳುಗಳಿಂದ ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಾ ಟ್ರೋಲ್​ ಕೂಡ ಆಗ್ತಿದ್ದಾರೆ ರಮ್ಯಾ. 

ಇತ್ತೀಚೆಗೆ ಅವರು ಸಕತ್​ ಸುದ್ದಿಯಾಗಿದ್ದು, ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಚಿತ್ರದ ಮೂಲಕ. ಈ ಚಿತ್ರದಲ್ಲಿ ರಮ್ಯಾ  ಗೆಸ್ಟ್‌ ಅಪಿಯರೆನ್ಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಟ್ರೇಲರ್​ ಬಿಡುಗಡೆಯಾದಾಗಲೇ ರಮ್ಯಾ  ಗರಂ ಆಗಿದ್ದರು. ಇದಕ್ಕೆ ಕಾರಣ ತಮ್ಮ ಅನುಮತಿ ಇಲ್ಲದೇ ತಮ್ಮ ಫೋಟೋ ಬಳಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ.  

ಗುಲಾಬಿ ಹೂವನ್ನು ಮುತ್ತಿಕ್ಕುತಾ ದೇವರಲ್ಲಿ ನಟಿ ರಮ್ಯಾ ಇದನ್ನ ಕೇಳಿಕೊಂಡ್ರು!

ಇದೀಗ ನಟಿ ರಮ್ಯಾ ಸಂದರ್ಶನವೊಂದರಲ್ಲಿ ಬೇರೆಯವರ ಮೇಲೆ ಯಾವುದೇ ರೀತಿಯ ಆಸೆ ಇಟ್ಟುಕೊಳ್ಳಬಾರದು ಎಂದು ಹೇಳಿಕೊಂಡಿದ್ದಾರೆ. 40 ವರ್ಷದ ರಮ್ಯಾ ಅವರಿಗೆ ಹೋದಲ್ಲೆಲ್ಲಾ ಮದುವೆಯ ಬಗ್ಗೆ ಕೇಳುವುದು ಮಾಮೂಲಾಗಿದೆ. ಇದಾಗಲೇ ಇವರ ಹೆಸರು ಕೆಲವರ ಜೊತೆ ಥಳಕು ಹಾಕಿಕೊಂಡಿದ್ದರೂ, ರಮ್ಯಾ ಇಂಥ ಗಾಸಿಪ್​ಗಳಿಗೆ ತಲೆ ಕೆಡಿಸಿಕೊಂಡವರಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ರಮ್ಯಾ ಅವರು ಮದುವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ  ಗೌಡರ ಹುಡುಗನನ್ನು ಹುಡುಕಿ ಮದುವೆ ಆಗ್ತೀನಿ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಇದೀಗ ಸಂಬಂಧ, ಸ್ನೇಹ ಮತ್ತು ನಿರೀಕ್ಷೆಗಳ ಕುರಿತು ನಟಿ ಮಾತನಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಟಾಲಿವುಡ್​ಗೆ ಹಾರಿತು 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ': ರಮ್ಯಾ ಔಟ್​, ರಶ್ಮಿ ಗೌತಮ್​ ಇನ್​!

ರ ಮೇಲೂ ಯಾವುದೇ ಕಾರಣಕ್ಕೆ ಎಕ್ಸ್​ಪೆಕ್ಟೇಷನ್​ (Expectation) ಇಟ್ಟುಕೊಳ್ಳಬಾರದು. ನೀವು ನಿಮ್ಮ ಕಾಲ ಮೇಲೆ ನಿಂತು ಸ್ವತಂತ್ರರಾಗಬೇಕು ಎಂದು ನಟಿ ಹೇಳಿದ್ದಾರೆ. ಸ್ನೇಹವೇ ಆಗಲಿ, ಸಂಬಂಧವೇ ಆಗಲಿ ಯಾರ ಮುಂದೆಯೂ ತಲೆ ಬಾಗಬಾರದು. ಒಂದು ವೇಳೆ ನೀವು ಹೀಗೆ ತಲೆ ಬಾಗಿದ್ದೇ ಹೌದಾದರೆ ಅವರಿಗೆ ನೀವು ಸದಾ ತಲೆ ಬಾಗಿಯೇ ಇರಬೇಕಾಗುತ್ತದೆ. ಅದೇ ರೀತಿ ಯಾವ ವಿಷಯದಲ್ಲಿಯೂ ಯಾರ ಮೇಲೂ ಅತಿಯಾದ ನಂಬಿಕೆ ಇಟ್ಟುಕೊಳ್ಳಬಾರದು. ಹೀಗೆ ಆದರೆ ನಿಮ್ಮಲ್ಲಿರುವ ಕೊರತೆ ಅವರಿಗೆ ತಿಳಿದು ನೀವೇ ಸೋಲಬೇಕಾಗುತ್ತದೆ. ನೀವು ತಮ್ಮ ಮೇಲೆ ಅವಲಂಬಿತರಾಗಿರುವುದು ತಿಳಿದರೆ ಅವರು ಸದಾ ನಿಮ್ಮನ್ನು ಅದೇ ರೀತಿಯಲ್ಲಿ ನೋಡುತ್ತಾರೆ. ಏನೇ ಕೆಲಸ ಮಾಡಿದರೂ ಅದನ್ನು ಓಪನ್​ ಆಗಿಯೇ ಮಾಡಬೇಕು, ಅವರ ಮೇಲೆ ಎಕ್ಸ್​ಪೆಕ್ಟೇಷನ್​ ಇಟ್ಟುಕೊಂಡು ಮಾಡಬಾರದು ಎಂದು ರಮ್ಯಾ ಹೇಳಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇದು ತುಂಬಾ ನಿಜ ಎಂದು ಹಲವರು ಕಮೆಂಟ್​ ಮಾಡಿದ್ದು, ಯಾಕೆ ಮೇಡಂ, ಏನಾಯ್ತು ನಿಮಗೆ ಎಂದು ಕೆಲವರು ಕೇಳುತ್ತಿದ್ದಾರೆ. 

Follow Us:
Download App:
  • android
  • ios