Asianet Suvarna News Asianet Suvarna News

ಕಾಂತಾರಕ್ಕೆ ರಾಷ್ಟ್ರ ಪ್ರಶಸ್ತಿ: 23 ವರ್ಷಗಳ ಬರ ನೀಗಿಸಿದ ರಿಷಭ್ ಶೆಟ್ಟಿ

ಕಾಂತಾರ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಹಾಗೂ ನಾಯಕ ನಟ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. 2001ರಲ್ಲಿ ದ್ವೀಪ ಸಿನಿಮಾಕ್ಕೆ ಅತ್ಯುತ್ತಮ ಪ್ರಶಸ್ತಿ ಲಭಿಸಿದ ನಂತರ 23 ವರ್ಷದ ಬಳಿಕ ಕಾಂತಾರ ಈ ಪ್ರಶಸ್ತಿ ಪಡೆದಿದೆ.

National film Award for Kantara Rishabh Shetty broke two decade best movie drought sat
Author
First Published Aug 16, 2024, 3:36 PM IST | Last Updated Aug 16, 2024, 3:36 PM IST

ಬೆಂಗಳೂರು (ಆ.16): ಕಾಂತಾರ ಸಿನಿಮಾದ ನಟನೆಗಾಗಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಉತ್ತಮ ಬಾಲನಟ ಸೇರಿ ಒಟ್ಟು 5 ನಟರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭ್ಯವಾಗಿದೆ.

ಕನ್ನಡ ಚಿತ್ರರಂಗಕ್ಕೆ ಈ ಬಾರಿ 7 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುವುದು ಸಂತಸದ ವಿಚಾರವಾಗಿದೆ. ಆದರೆ, ಕನ್ನಡ ಸಿನಿಮಾ ಒಂದಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿ ಈಗಾಗಲೇ 23 ವರ್ಷಗಳೇ ಕಳೆದಿತ್ತು. 2001ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ ಸಿನಿಮಾಕ್ಕೆ ಅತ್ಯುತ್ತಮ ಪ್ರಶಸ್ತಿ ಲಭಿಸಿತ್ತು. ಇದಾದ ನಂತರ ಶ್ರೇಷ್ಠ ಸಿನಿಮಾಗಳು ಬಂದಿರಲೇ ಇಲ್ಲ. ಈಗ 2024ನೇ ಸಾಲಿನಲ್ಲಿ ಕಾಂತಾರ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದ್ದು, ಈವರೆಗೆ ಎದುರಿಸುತ್ತಿದ್ದ ರಾಷ್ಟ್ರ ಪ್ರಶಸ್ತಿ ಬರವನ್ನು ನೀಗಿಸಿಕೊಂಡಂತಾಗಿದೆ.

ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಈ ಬಾರಿ ಜಾಕ್‌ಪಾಟ್, ಒಟ್ಟು 7 ಪ್ರಶಸ್ತಿ ಇನ್ಯಾರಿಗೆ ಬಂತು ಪ್ರಶಸ್ತಿ?

ಶ್ರೇಷ್ಠ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳು:
ಸಂಸ್ಕಾರ - 1970
ಚೋಮನದುಡಿ - 1975
ಘಟಶ್ರಾದ್ಧ - 1977
ತಬರನ ಕಥೆ - 1986
ತಾಯಿ ಸಾಹೇಬ - 1997
ದ್ವೀಪ - 2001
ಕಾಂತಾರ - 2024

ಕನ್ನಡಕ್ಕೆ 4 ಅತ್ಯುತ್ತಮ ನಟ ಪ್ರಶಸ್ತಿ:
ನಟರ ಹೆಸರು     - ಸಿನಿಮಾ

ವಾಸುದೇವರಾವ್ - ಚೋಮನದುಡಿ
ಸಂಚಾರಿ ವಿಜಯ್ - ನಾನು ಅವನಲ್ಲ ಅವಳು
ಚಾರು ಹಾಸನ್ - ತಬರನ ಕಥೆ
ರಿಷಭ್ ಶೆಟ್ಟಿ - ಕಾಂತಾರ

15 ಕೋಟಿ ರೂ. ಸಿನಿಮಾ 150 ದಿನ ಪ್ರದರ್ಶನ: ಕಾಂತಾರ ಸಿನಿಮಾವನ್ನು ಕೇವಲ 15 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಸಿನಿಮಾಗಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದರ ಮೇಲೆ ಡಿಪೆಂಡ್ ಆಗದೇ ಕಥೆಯ ಮೇಲೆ ಅವಲಂಬಿತವಾದ ಸಿನಿಮಾವಾಗಿದೆ. ಕಾಂತಾರ ಸಿನಿಮಾ ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ ದೇಶದ ವಿವಿಧ ಭಾಷೆಗಳಲ್ಲಿಯೂ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವಂತೆ ಬೇಡಿಕೆ ಬಂದಿತ್ತು. ನಂತರ ಹಂತ ಹಂತವಾಗಿ ದಕ್ಷಿಣ ಭಾರತದ ತೆಲುಗು, ತಮಿಳು, ತುಳು ಹಾಗೂ ಉತ್ತರ ಭಾರತದ ಹಿಂದಿ ಭಾಷೆಗೂ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಇದಾದ ನಂತರ ದೇಶದಾದ್ಯಂತ ಉತ್ತಮ ಹಣ ಗಳಿಕೆಯನ್ನೂ ಮಾಡಿತ್ತು. ರಾಜ್ಯದ ಕೆಲವು ಸಿನಿಮಾ ಥಿಯೇಟರ್‌ಗಳಲ್ಲಿ 150 ದಿನಗಳ ಕಾಲ ಕಾಂತಾರ ಸಿನಿಮಾ ಪ್ರದರ್ಶನ ಕಂಡಿತ್ತು. ಇಲ್ಲಿ ಸಿನಿಮಾದಲ್ಲಿ ಹಣ ಹೂಡಿಕೆಗಿಂತ ಕಥೆ ಮುಖ್ಯವಾಗುತ್ತದೆ ಎಂಬ ಸಂದೇಶವನ್ನು ಕಾಂತಾರ ಸಿನಿಮಾ ರವಾನಿಸಿತ್ತು.

ಕನ್ನಡ ಚಿತ್ರರಂಗಕ್ಕೆ ಫಲಿಸಿತೇ ಪೂಜಾಫಲ, ಕಾಂತಾರ, ಕೆಜಿಎಫ್‌ಗೆ ಎರಡೆರಡು ರಾಷ್ಟ್ರೀಯ ಪ್ರಶಸ್ತಿ!

ಪ್ರಾದೇಶಿಕ ಕಥೆಯಾದರೂ ಪ್ರಕೃತಿ ರಕ್ಷಣೆಗೆ ಆದ್ಯತೆ: ಕಾಂತಾರ ಸಿನಿಮಾ ಕರ್ನಾಟಕದ ಪ್ರಾದೇಶಿಕತೆಗೆ ಸೀಮಿತವಾದ ದೈವಕ್ಕೆ ಸಂಬಂಧಿಸಿದ ಸಿನಿಮಾವಾದರೂ ಇದರಲ್ಲಿ ಕಾಡಿನ ರಕ್ಷಣೆಗೆ ಆದ್ಯತೆ ನೀಡಿದ್ದರ ಉದ್ದೇಶದಿಂದ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿತ್ತು. ಕಾಡಂಚಿನ ಪ್ರದೇಶದಲ್ಲಿ ಇರುವ ಜನರು ಕಾಡಿನ ರಕ್ಷಣೆಗೆ ದೇವರ ಮಾರ್ಗದಲ್ಲಿ ರಕ್ಷಣೆಗೆ ಮುಂದಾಗಿರುವುದು ಇಲ್ಲಿ ಹೆಚ್ಚು ಗಮನಿಸುವಂತಹ ವಿಷಯವಾಗಿದೆ. ಇನ್ನು ಕಾಂತಾರ ಸಿನಿಮಾಗೆ ಈ ವರ್ಷದಲ್ಲಿ ಎರಡು ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಕಾಂತಾರ ಸಿನಿಮಾಗೆ ಅತ್ತುತ್ತಮ ಸಿನಿಮಾ ಪ್ರಶಸ್ತಿ ಹಾಗೂ ನಾಯಕ ನಟ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿಗಳು ಲಭಿಸಿವೆ.

ಜನಮನ್ನಣೆ ಪಡೆದ ಸಿನಿಮಾಗಳಿಗೆ ಪ್ರಶಸ್ತಿ: ಕನ್ನಡ ಚಿತ್ರರಂಗದಲ್ಲಿ ಈವರೆಗೆ ಕಡಿಮೆ ಬಜೆಟ್‌ನಲ್ಲಿ ಗ್ರಾಮೀಣ ಸೊಗಡಿನಲ್ಲಿ ತೆಗೆದ ಸಿನಿಮಾಗಳಿಗೆ ಮಾತ್ರ ಪ್ರಶಸ್ತಿ ಬರುತ್ತದೆ ಎಂಬ ನಂಬಿಕೆ ಇತ್ತು. ಇದಕ್ಕೆ ಉದಾಹರಣೆ ಎಂಬಂತೆ ಸಂಸ್ಕಾರ, ಘಟಶ್ರಾದ್ಧ,  ತಬರನ ಕಥೆ, ಚೋಮನ ದುಡಿ, ತಾಯಿ ಸಾಹೇಬ, ದ್ವೀಪ ಸೇರಿ ಈವರೆಗೆ ಒಟ್ಟು 6 ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಈಗ ಕಾಂತಾರ ಸಿನಿಮಾಕ್ಕೆ ರಾಷ್ಷ್ರೀಯ ಪ್ರಶಸ್ತಿ ಲಭ್ಯವಾದ ಬೆನ್ನಲ್ಲಿಯೇ ಕನ್ನಡದ 7 ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದಂತಾಗಿದೆ.

Latest Videos
Follow Us:
Download App:
  • android
  • ios