Asianet Suvarna News Asianet Suvarna News

ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಈ ಬಾರಿ ಜಾಕ್‌ಪಾಟ್, ಒಟ್ಟು 7 ಪ್ರಶಸ್ತಿ ಇನ್ಯಾರಿಗೆ ಬಂತು ಪ್ರಶಸ್ತಿ?

ಈ ಬಾರಿಯ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿದ್ದು, ನಿರೀಕ್ಷೆಯಂತೆ ಕಾಂತಾರ ಚಿತ್ರದ ನಟನೆಗಾಗಿ ರಿಷಭ್ ಶೆಟ್ಟಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

70th national film award announced hombale kantara rishabh shetty awarded best actor
Author
First Published Aug 16, 2024, 2:37 PM IST | Last Updated Aug 16, 2024, 3:12 PM IST

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕನ್ನಡದಲ್ಲಿ ಬೆಸ್ಯ್ ಆ್ಯಕ್ಟರ್ ಪ್ರಶಸ್ತಿ ಪಡೆದ 4ನೇ ಕಲಾವಿದರಾಗಿ ರಿಷಬ್ ಶೆಟ್ಟಿ ಹೊರಹೊಮ್ಮಿದ್ದು, ಹೊಂಬಾಳೆ ಅತ್ಯುತ್ತಮ ಚಿತ್ರಗಳನ್ನು ನೀಡುವ ಪ್ರೊಡಕ್ಷನ್ ಹೌಸ್ ಆಗಿ ಪರಗಣಿಸಲ್ಪಟ್ಟಿದೆ. ಚೋಮನದುಡಿ ಪಾತ್ರಕ್ಕಾಗಿ ವಾಸುದೇವ ರಾವ್, ತಬರನ ಕಥೆ ಚಿತ್ರಕ್ಕಾಗಿ ಚಾರು ಹಾಸನ್, ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ನಂತರ ಇದೀಗ ತುಳು ನಾಡಿದನ ದೈವರಾಧನೆಯನ್ನು ಬಿಂಬಿಸುವ ಹಾಗೂ ಕಾಡನ್ನು ರಕ್ಷಿಸಿ ಎನ್ನುವ ಸಂದೇಶ ಸಾರುವ ಕಾಂತಾರ ಚಿತ್ರದ ಅದ್ಭುತ ನಟನೆಗಾಗಿ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಇದುವರೆಗೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳು ಬಂದಾಗ ಮಾತ್ರ ಅಂಥದ್ದೊಂದು ಚಿತ್ರವಿದೆ ಎಂಬುವುದು ಕನ್ನಡ ಚಿತ್ರ ರಸಿಕರ ಗಮನಕ್ಕೆ ಬರುತ್ತಿತ್ತು. ಆದರೆ, ಈ ಸಾರಿ ಪ್ಯಾನ್ ಇಂಡಿಯಾದಲ್ಲಿ ಹೆಸರು ಮಾಡಿದ ಯಶ್ ನಟನೆಯ ಕೆಜಿಎಫ್-2 ಹಾಗೂ ಕಾಂತಾರ ಚಿತ್ರಗಳು ಎರಡೆರಡರು ಪ್ರಶಸ್ತಿಗಳು ಬಾಚಿ ಕೊಂಡಿರುವುದು ಮತ್ತೊಂದು ವಿಶೇಷ. ಕನ್ನಡಕ್ಕಲ್ಲದೇ ಮತ್ತೆ ಯಾವ ಯಾವ ಚಿತ್ರಗಳಿಗೆ ಪ್ರಶಸ್ತಿಗಳು ಬಂದಿವೆ, ಇಲ್ಲಿದೆ ಲಿಸ್ಟ್. 

ಕಾಂತಾರಗೆ ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಬೆಸ್ಟ್ ನಟ; ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ!

ಬೆಸ್ಟ್ ಫೀಚರ್ ಫಿಲ್ಮ್ಛ ಆಟ್ಟಮ್ (Best Feature Film – Aattam)
ಅತ್ಯುತ್ತಮ ನಟ - ರಿಷಭ ಶೆಟ್ಟಿ (Best Actor – Rishab Shetty)
ಅತ್ಯುತ್ತಮ ನಟಿಯರು- ನಿತ್ಯಾ ಮೆನನ ಮತ್ತು ಮಾನಸಿ ಪರೇಖ್ (Best Actress – Nithya Menen and Manasi Parekh)
ಅತ್ಯುತ್ತಮ ನಿರ್ದೇಶಕ- ಸೂರಜ್ ಬರ್ಜಾತ್ಯ (Best Director – Sooraj Barjatya)
ಅತ್ಯುತ್ತಮ ಪೋಷಕ ನಟಿ - ನೀನಾ ಗುಪ್ತಾ (Best Supporting Actress – Neena Gupta)
ಅತ್ಯುತ್ತಮ ಪೋಷಕ ನಟ (Best Supporting Actor – Pawan Malhotra)
ಅತ್ಯುತ್ತಮ ಮನೋರಂಜನಾ ಚಿತ್ರ- ಕಾಂತಾರ (Best Feature Film Providing Wholesome Entertainment – Kantara)
ಅತ್ಯುತ್ತಮ ಹೊಸ ಮುಖಗಳು- ಫೌಜಾ, ಪ್ರಮೋದ್ ಕುಮಾರ್ (Best Debut – Fouja, Pramod Kumar)
ಅತ್ಯುತ್ತಮ ತೆಲಗು ಚಿತ್ರ- ಕಾರ್ತಿಕೇಯ 2 (Best Telugu Film – Kartikeya 2)
ಅತ್ಯುತ್ತಮ ಚಿತ್ರ- ಪೊನ್ನಿಯನ್ ಸೆಲ್ವನ್ ಭಾಗ-1 (Best Tamil Film – Ponniyin Selvan – Part 1)
ಅತ್ಯುತ್ತಮ ಪಂಜಾಬಿ ಚಿತ್ರ-ಬಾಘಿ ದಿ ಧೀ(Best Punjabi Film – Baaghi Di Dhee) 
ಅತ್ಯುತ್ತಮ ಒಡಿಯಾ ಚಿತ್ರ - (Best Odia Film – Daman)
ಅತ್ಯುತ್ತಮ ಮಲಯಾಳಂ ಚಿತ್ರ- ಸೌದಿ ವೆಲಕ್ಕ ಸಿಸಿ .225/2009 (Best Malayalam Film – Saudi Velakka CC.225/2009)
ಅತ್ಯುತ್ತಮ ಮರಾಠಿ ಚಿತ್ರ-ವಾಲ್ವಿ (Best Marathi Film – Vaalvi)
ಅತ್ಯುತ್ತಮ ಕನ್ನಡ ಚಿತ್ರ-ಕೆಜಿಎಫ್ ಚಾಪ್ಟರ್ 2 (Best Kannada Film – KGF: Chapter 2)
ಅತ್ಯುತ್ತಮ ಹಿಂದಿ ಚಿತ್ರ-ಗುಲ್ಮೋಹರ್-(Best Hindi Film – Gulmohar)
ವಿಶೇಷ ಉಲ್ಲೇಖ- ಗುಲ್ಮೋಹರ್ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್ ಚಿತ್ರಕ್ಕಾಗಿ ಸಂಜಯ್ ಸಲೀಲ್ ಜೌಧರಿ (Special Mentions – Manoj Bajpayee in Gulmohar, and Sanjoy Salil Chowdhury for Kalikhan)
ಅತ್ಯುತ್ತಮ ಆ್ಯಕ್ಷನ್ ನಿರ್ದೇಶಕ- ಕೆಜಿಎಫ್-2: Best Action Direction – KGF: Chapter 2
ಅತ್ಯುತ್ತಮ ನೃತ್ಯ ನಿರ್ದೇಶನ- ತಿರುಚಿತ್ರಬಲಮ್ (Best Choreography – Tiruchitrabalam)
ಅತ್ಯುತ್ತಮ ಸಾಹಿತ್ಯ - ಪೌಜಾ (Best Lyrics – Fouja)
ಅತ್ಯುತ್ತಮ ಸಂಗೀತ ನಿರ್ದೇಶಕ- ಪ್ರೀತಮ್ (ಹಾಡು) ಎ.ಆರ್.ರೆಹಮಾನ್ (ಹಿನ್ನೆಲೆ ಸ್ಕೋರ್) (Best Music Director – Pritam (Songs), AR Rahman (Background Score))
ಅತ್ಯುತ್ತಮ ಪ್ರಸಾದನ: ಅಪರಾಜಿತೋ (Best Makeup – Aparajito)
ಅತ್ಯುತ್ತಮ ವಸ್ತ್ರ ವಿನ್ಯಾಸ- ಕಚ್ ಎಕ್ಸ್‌ಪ್ರೆಸ್ (Best Costumes – Kutchh Express)
ಅತ್ಯುತ್ತಮ ಪ್ರೊಡಕ್ಷನ್ ವಿನ್ಯಾಸ -ಅಪರಾಜಿತೋ (Best Production Design – Aparajito)
ಅತ್ಯುತ್ತಮ ಸಂಕಲನ- ಸುರೇಶ್ ಅರಸ್, ಮಧ್ಯಂತರ (Best Editing – Madhyantara)
ಅತ್ಯುತ್ತಮ ಧ್ವನಿ ಸಂಯೋಜನ್-ಪೊನ್ನಿಯಿನ್ ಸೆಲ್ವನ್-1 (Best Sound Design – Ponniyin Selvan – Part 1)
ಅತ್ಯುತ್ತಮ ಸಂಕಲನ-ಆಟ್ಟಮ್ (Best Screenplay – Aattam)
ಅತ್ಯುತ್ತಮ ಸಂಭಾಷಮೆ-ಗುಲ್ಮೋಹರ್ (Best Dialogues – Gulmohar)
ಬೆಸ್ಟ್ ಛಾಯಾಗ್ರಹಣ-ಪೊನ್ನಿಯಿನ್ ಸೆಲ್ವನ್-1 (Best Cinematography – Ponniyin Selvan – Part 1)
ಅತ್ಯುತ್ತಮ ಹಿನ್ನೆಲೆ ಗಾಯಕ ಸೌದಿ ವೆಲಕ್ಕ ಸಿಸಿ 225/2009 (Best Female Playback – Soudi Velakka CC.225/2009)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಬ್ರಹ್ಮಾಸ್ತ್ರ-ಶ್ರೇಯಾ ಗೋಷಾಲ್ (Best Female Playback – Brahmastra)

Latest Videos
Follow Us:
Download App:
  • android
  • ios