ಬ್ಲಾಕ್‌ನಲ್ಲಿ ಟಿಕೆಟ್‌ ತಗೊಂಡು 'ಲವ್ ಮಾಕ್ಟೇಲ್ 2' ನೋಡಿದೆ: Darling Krishna

'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಅಂತ ತಿಳಿಯಲು ಥಿಯೇಟರ್‌ಗೆ ಹೋಗಿದ್ವಿ. ಚಿತ್ರಮಂದಿರ ಹೌಸ್‌ಫುಲ್‌ ಆಗಿತ್ತು. ಬೇರೆ ದಾರಿಯಿಲ್ಲದೇ ನನ್ನ ತಂದೆ ಹೂ ಮಾರುವವಳ ಬಳಿ ಬ್ಲ್ಯಾಕ್‌ನಲ್ಲಿ ಟಿಕೆಟ್‌ ತಂದುಕೊಟ್ಟರು’ ಎಂದು ಡಾರ್ಲಿಂಗ್‌ ಕೃಷ್ಣ ಹೇಳಿದ್ದಾರೆ.

Actor Darling Krishna starrer Love Mocktail 2 Film Team Organizes Success Meet gvd

'ಲವ್ ಮಾಕ್ಟೇಲ್ 2' (Love Mocktail 2) ಚಿತ್ರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಅಂತ ತಿಳಿಯಲು ಥಿಯೇಟರ್‌ಗೆ ಹೋಗಿದ್ವಿ. ಚಿತ್ರಮಂದಿರ ಹೌಸ್‌ಫುಲ್‌ ಆಗಿತ್ತು. ಬೇರೆ ದಾರಿಯಿಲ್ಲದೇ ನನ್ನ ತಂದೆ ಹೂ ಮಾರುವವಳ ಬಳಿ ಬ್ಲ್ಯಾಕ್‌ನಲ್ಲಿ ಟಿಕೆಟ್‌ ತಂದುಕೊಟ್ಟರು’ ಎಂದು ಡಾರ್ಲಿಂಗ್‌ ಕೃಷ್ಣ (Darling Krishna) ಹೇಳಿದ್ದಾರೆ. 'ಲವ್ ಮಾಕ್ಟೇಲ್ 2' ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ (Success Meet) ಮಾತನಾಡಿದ ಕೃಷ್ಣ, 'ಲವ್ ಮಾಕ್ಟೇಲ್ 2' ಚಿತ್ರ 7 ವಾರಗಳಲ್ಲಿ ಮಾಡಿದ ಗಳಿಕೆ 'ಲವ್ ಮಾಕ್ಟೇಲ್ 2' ಮೂರೇ ದಿನದಲ್ಲಿ ಮಾಡಿದೆ. 200ರಷ್ಟುಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೈಸೂರೊಂದರಲ್ಲೇ 46 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಕಂಡು ಖುಷಿಯಾಯ್ತು.

ಚಿತ್ರದ ಡಬ್ಬಿಂಗ್‌ ರೈಟ್ಸ್‌ ಕೊಡಲ್ಲ. ಬದಲಿಗೆ ರೀಮೇಕ್‌ ಹಕ್ಕು ನೀಡುತ್ತೀವಿ. ತೆಲುಗು ರೀಮೇಕ್‌ ರೆಡಿ ಇದೆ. ತಮಿಳು, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ ರೀಮೇಕ್‌ಗೆ ಬೇಡಿಕೆ ಬಂದಿದೆ’ ಅಂದರು. ನಿರ್ಮಾಪಕಿ, ನಟಿ ಮಿಲನಾ ನಾಗರಾಜ್‌ (Milana Nagaraj) ಮಾತನಾಡಿ, ‘ಚಿತ್ರ ಕರ್ನಾಟಕ ಮಾತ್ರವಲ್ಲ, ಪುಣೆ, ಗೋವಾ ಮೊದಲಾದೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ವಿದೇಶಗಳಿಂದಲೂ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಬರುತ್ತಿದೆ’ ಎಂದರು. ಮುಖ್ಯಪಾತ್ರದಲ್ಲಿ ನಟಿಸಿದ ರಾಚೆಲ್‌ ಡೇವಿಡ್‌, ಖುಷಿ, ಅಭಿಲಾಷ್‌, ರವಿ ಸೀತಾರಾಂ, ಛಾಯಾಗ್ರಾಹಕ ಶ್ರೀಕ್ರೇಜಿ ಮೈಂಡ್ಸ್‌, ಸಂಗೀತ ನಿರ್ದೇಶಕ ಅಭಯಂಕರ್‌ ಮತ್ತಿತರರು ಸಂತಸ ಹಂಚಿಕೊಂಡರು.

Love Mocktail 2: ಜನರ ನಿರೀಕ್ಷೆ ತಲುಪೋದೇ ಸವಾಲು: ಡಾರ್ಲಿಂಗ್‌ ಕೃಷ್ಣ

ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ, ಸೂಸೈಡ್‌ ಯೋಚನೆ ಬರುತ್ತಿತ್ತು: 'ಸಾಮಾನ್ಯವಾಗಿ ನಾನು ಸಿನಿಮಾದಲ್ಲಿ ಆಳುವುದನ್ನು ಇಷ್ಟ ಪಡುವುದಿಲ್ಲ. ನಿಧಿಮಾ ಸತ್ತಾಗ ಕಣ್ಣಲ್ಲಿ ನೀರಿತ್ತು. ಆದರೆ ಅತ್ತಿರಲಿಲ್ಲ. ಈ ಲವ್ ಮಾಕ್ಟೆಲ್ ಸಿನಿಮಾ ಯಾಕೆ ಶುರು ಮಾಡಿದ್ದು, ಏನು ಸ್ಪೂರ್ತಿಯಾಗಿದ್ದು ಅಂದ್ರೆ ಮಿಲನಾ. ನಾವಿಬ್ರೂ 6-7 ವರ್ಷದಿಂದ ಲವ್ ಮಾಡ್ತಿದ್ವಿ. ತುಂಬಾ ಟ್ಯಾಲೆಂಟ್ ಇರುವ ಹುಡುಗಿಯನ್ನು ನಾನು ಮದುವೆ ಆಗ್ತಿದ್ದೀನಿ ಅಂತ ಗೊತ್ತಾಗುತ್ತಿದ್ದಂತೆ, ನನ್ನ ವೃತ್ತಿ ಜೀವನ ಹೇಗಿದೆ ಎಂದು ನೋಡಿದಾಗ ನಾನು ರೆಡ್ ಲೈಟ್‌ನಲ್ಲಿ ನಿಂತಿರುವುದು ಗೊತ್ತಾಗಿತ್ತು. 

ಮಿಲನಾಗೆ ಇರುವುದು ಒಂದೇ ethics. ಸಿನಿಮಾ ಇರಲಿ, ಜೀವನ ಇರಲಿ ಒಬ್ಬ ವ್ಯಕ್ತಿ ಸೋಲಲಿ, ಗೆಲ್ಲಲಿ ಒಂದು ಸಲ ಲವ್ ಮಾಡಿದ ಮೇಲೆ ಲೈಫ್‌ ಲಾಂಗ್ ಅವರ ಜೊತೆಯೇ ಇರ್ತೀನಿ ಅನ್ನೋದು. ಇದಕ್ಕೆ ನನ್ನ ಕಂಫರ್ಟ್ ಝೋನ್‌ನಿಂದ ಹೊರ ಬಂದು, ಅವಳಿಗೊಸ್ಕರ ಏನ್ ಆದ್ರೂ ಮಾಡಬೇಕು ಅಂತ ಲವ್ ಮಾಕ್ಟೇಲ್ ಶುರು ಮಾಡಿದ್ದು,' ಎಂದು ಕೃಷ್ಣ ಮಾತನಾಡಿದ್ದಾರೆ. 'ಸಿನಿಮಾ ಶುರು ಮಾಡಿದಾಗ ನಮ್ಮ ಬಳಿ ಹಣ ಇರಲಿಲ್ಲ. ನಮ್ಮ ತಂದೆಯಿಂದ 4-5 ಲಕ್ಷ ರೂ. ಸಾಲ ತೆಗೆದುಕೊಂಡೆ, ಮಿಲನಾ ಅವ್ರು ಸಣ್ಣ ಪುಟ್ಟ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದರು. 

Actor Darling Krishna starrer Love Mocktail 2 Film Team Organizes Success Meet gvd

ಅಂದ್ರೆ ಅದರಿಂದ 10-15 ಸಾವಿರ ಬರುತ್ತಿತ್ತು. ಅವನ್ನು ಕೂಡಿಸಿ ಸಿನಿಮಾ ಮಾಡಿದ್ದು. ನಾವು ಒಂದು ದಿನ ಚಿತ್ರೀಕರಣಕ್ಕೆ 20-30 ಸಾವಿರ ಖರ್ಚು ಮಾಡುತ್ತಿದ್ವಿ. ಅದಕ್ಕೆ ಯಾವ ಅಸಿಸ್ಟೆಂಟ್ ಡೈರೆಕ್ಟರ್ ಇರಲಿಲ್ಲ. ಯಾವ ಮೇಕಪ್ ಆರ್ಟಿಸ್ಟ್‌  ಸಹ ಇರಲಿಲ್ಲ. ನಾವೇ ಎಲ್ಲಾ ಮಾಡಿಕೊಂಡಿರುವುದು. ಫೈಟ್ ಮಾಸ್ಟರ್‌ಗೆ ಸಂಭಾವನೆ ಕೊಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ನಾನೇ ಕಲಿತಿದ್ದ ಫೈಟ್‌ನ ಬಳಸಿಕೊಂಡು ಮಾಡಿದ್ದು. ಸಿನಿಮಾ ಚೆನ್ನಾಗಿ ಆಗಿತ್ತು. ಖಂಡಿತಾ ಗೆಲ್ಲುತ್ತೆ ಅಂತ ನಂಬಿಕೆ ಇತ್ತು ಆದರೆ...'ಎಂದು ಕೆಲವು ನಿಮಿಷಗಳ ಕಾಲ ಕೃಷ್ಣ ಮೌನವಾಗಿಬಿಟ್ಟರು.

Valentine's Day ಜೊತೆಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಕೃಷ್ಣ-ಮಿಲನಾ ಜೋಡಿ!

'ಮೊದಲ ವಾರ ಕಲೆಕ್ಷನ್ ಸರಿಯಾಗಿ ಆಗಲಿಲ್ಲ. ಕಾರಣ ನಮಗೆ ಸಿಕ್ಕ ಸ್ಕ್ರೀನ್‌ ಲೆಕ್ಕ.  ಎರಡನೇ ವಾರಕ್ಕೆ ಸ್ಕ್ರೀನ್ ಉಳಿಸಿಕೊಳ್ಳಲು ಆಗಲಿಲ್ಲ. ಆಗ ನಾನು 40 ಲಕ್ಷ ರೂ. ಸಾಲ ಮಾಡಿದ್ವಿ. ಮನೆಯಲ್ಲಿ ನಾನು ಒಬ್ಬನೇ ಇದ್ದೆ. ಮಿಲನಾ ಎಲ್ಲಿಯೋ ಹೋಗಿದ್ದರು. ಆಗ ನಾನು ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ. ನಾನು ದೇವರನ್ನೇ ಪ್ರಶ್ನಿಸುತ್ತಿದ್ದೆ. ಇದಕ್ಕಿಂತ ಏನ್ ಮಾಡ್ಲಿ ನಾನು? 2013ರಿಂದ ಸಿನಿಮಾ ಮಾಡ್ತೀನಿ. ಏನೂ ಆಗುತ್ತಿಲ್ಲ, ಅಂತ ಬೇಸರವಿತ್ತು. ಒಂದೆ ಕಡೆ ಲೈಫ್ ಮುಗಿಯಿತು ಬಿಡಪ್ಪ ಸಾಕು, ಸಿನಿಮಾ ಮಾಡೋದು ಬೇಡ ಅಂತ ಸೂಸೈಡ್ ಮಾಡಿಕೊಳ್ಳೋಣ ಅನ್ನೋ ತರ ಯೋಚನೆ ಬರುತ್ತಿತ್ತು. 

ಮತ್ತೊಂದು ಕಡೆ ಮಿಲನಾ ಮುಖ ನೆನಪು ಆಗುತ್ತಿತ್ತು. ಆ ಟೈಮಲ್ಲಿ ನಾನು ದೇವರಿಗೆ ಚಾಲೆಂಜ್ ಮಾಡಿದ್ದೆ, ಯಾರ್ ಗೆಲ್ತಾರೆ ನೋಡೋಣ. ಈ ಸಿನಿಮಾ ಗೆಲ್ಲಲಿಲ್ಲ ಅಂದ್ರೆ ನಾನು ಸಿನಿಮಾ ಮಾಡೋದೇ ಇಲ್ಲ. ಯಾರು ಕೆಲಸ ಕೊಡುವುದಿಲ್ಲ, ಎಂದು ತಲೆಗೆ ಬಂದಿತ್ತು. ಹಠ ಮಾಡಿ ಪ್ರತಿಯೊಂದೂ ಥಿಯೇಟರ್‌ಗೂ ಹೋಗಿ ಕೈ ಮುಗಿಯುತ್ತಿದ್ದೆ. ನಾನು ಆಗಲೇ ಫಸ್ಟ್‌ ಟೈಂ ಹೌಸ್‌ ಫುಲ್‌ ನೋಡಿದ್ದು,' ಎಂದು ಕೃಷ್ಣ ಮಾತನಾಡಿದ್ದಾರೆ. 

Latest Videos
Follow Us:
Download App:
  • android
  • ios