ತೆಲುಗು ಬಿಗ್‌ಬಾಸ್‌ ನಲ್ಲಿ ಕನ್ನಡದ ಹವಾ

ತೆಲುಗಿನ ಮಾ ಟೀವಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ನಿರೂಪಣೆ ನಟ ನಾಗಾರ್ಜುನ ಅವರದ್ದು. ಚಿತ್ರೀಕರಣ ಕಾರಣಕ್ಕೆ ಕೆಲ ದಿನಗಳಿಂದ ನಿರೂಪಣೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದ್ದರು. ಈಗ ಬಿಗ್‌ಬಾಸ್‌ ಶೋ ಮರಳಿ ಬಂದ ನಾಗಾರ್ಜುನ ಅವರನ್ನು ಸ್ವಾಗತ ಮಾಡುವ ಅತಿಥಿ ನಿರೂಪಕರಾಗಿ ನಟ ಸುದೀಪ್‌ ಹಾಜರಿದ್ದರು. ತೆಲುಗಿನ ಬಿಗ್‌ಬಾಸ್‌ ಶೋ ವೇದಿಕೆ ಮೇಲೆ ಎಂಟ್ರಿ ಕೊಟ್ಟಸುದೀಪ್‌, ಕನ್ನಡದಲ್ಲೇ ಮಾತನಾಡಿದರು. ಶೋ ಸ್ಪರ್ಧಿಗಳನ್ನು ಕನ್ನಡದಲ್ಲೇ ಮಾತನಾಡಿಸಿದರು.

ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್..! 

ಮನ್ಮಥ ಮೆಚ್ಚಿದ ಫ್ಯಾಂಟಮ್‌

ಸುದೀಪ್‌ ಸ್ವಾಗತದಿಂದ ಶೋ ವೇದಿಕೆ ಮೇಲೆ ಬಂದ ನಾಗಾರ್ಜುನ, ‘ನಿರ್ದೇಶಕ ಅನೂಪ್‌ ಭಂಡಾರಿ ನನ್ನ ಭೇಟಿ ಮಾಡಿದರು. ಫ್ಯಾಂಟಮ್‌ ಚಿತ್ರದ ಕೆಲ ದೃಶ್ಯಗಳು, ಫೋಟೋಗಳನ್ನು ತೋರಿಸಿದರು. ನೀವು ಎಷ್ಟುಚೆನ್ನಾಗಿ ನಟಿಸಿದ್ದೀರಿ. ಕನ್ನಡ ಸಿನಿಮಾ ಗುಣಮಟ್ಟಹೆಚ್ಚಿಸುವ ಸಿನಿಮಾ ಇದು’ ಎಂದು ಅಕ್ಕಿನೇನಿ ನಾಗಾರ್ಜುನ ಮನಸಾರೆ ಮೆಚ್ಚಿಕೊಂಡರು. ಜತೆಗೆ ಲಾಕ್‌ಡೌನ್‌ ನಂತರ ತಮ್ಮ ಅನ್ನಪೂರ್ಣ ಸ್ಟುಡಿಯೋದಲ್ಲಿ ಶೂಟಿಂಗ್‌ ಮಾಡಿಕೊಂಡ ಮೊದಲ ಸಿನಿಮಾ ‘ಫ್ಯಾಂಟಮ್‌’. ಇದು ತಮಗೆ ನೆನಪಿನಲ್ಲಿ ಉಳಿಯುವ ಸಿನಿಮಾ ಎಂದಿದ್ದಾರೆ.

 

ಸುಮ್ಮನೆ ಪ್ಯಾನ್‌ ಇಂಡಿಯಾ ಅಲ್ಲ

ಬಜೆಟ್‌, ಮೇಕಿಂಗ್‌, ಕಲಾವಿದರ ಕಾರಣಕ್ಕೆ ಇದನ್ನು ನಾವು ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಮಾಡುತ್ತಿಲ್ಲ. ಈ ಚಿತ್ರದ ಕತೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ನಾವೂ ಕೂಡ ಎಲ್ಲರಿಗೂ ಕನೆಕ್ಟ್ ಆಗುವ ಕತೆ ಹೇಳಬೇಕು ಎಂದುಕೊಂಡ್ವಿ. ಆ ಕತೆಯೇ ಈಗ ನಮ್ಮ ‘ಫ್ಯಾಂಟಮ್‌’ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎನ್ನುತ್ತಾ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಕ್ಕೆ ತಮಗೆ ಧನ್ಯವಾದಗಳು ಎಂದಿದ್ದು ನಟ ಸುದೀಪ್‌.

ಕಿಚ್ಚ ಸುದೀಪ್‌ ಫೋಟೋ ಸಿಕ್ಕಾಪಟ್ಟೆ ವೈರಲ್; ಫ್ಯಾಂಟಮ್ ಲೋಕವಿದು! 

ತೆಲುಗಿನ ಬಿಗ್‌ಬಾಸ್‌ ವೇದಿಕೆಯಲ್ಲಿ ಕನ್ನಡದ ಸಿನಿಮಾ ಸುತ್ತ ಮಾತು ಹಾಗೂ ಸುದೀಪ್‌ ಕನ್ನಡ ನಿರೂಪಣೆ ಮಾತುಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುವೈರಲ್‌ ಆಗುತ್ತಿವೆ. ಜಾಕ್‌ ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಿರೂಪ್‌ ಭಂಡಾರಿ, ನೀತಾ ಅಶೋಕ್‌ ನಟಿಸಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ನಟಿಸುವ ಸಾಧ್ಯತೆಗಳು ಇವೆಯೇ ಎಂಬುದು ಸದ್ಯದ ಕುತೂಹಲ.