2028ರವರೆಗೂ ಯಶ್ ದೆಸೆ ಚೆನ್ನಾಗಿದೆ, ರಿಷಬ್ ಶೆಟ್ಟಿ ಕಾಂತಾರ 2 ಲಕ್ ಕೊಡುತ್ತಾ? ನಟ ನಾಗರಾಜ್ ಕೋಟೆ ನುಡಿದ ಭವಿಷ್ಯ

ಯಾರ ಸಮಯ ಚೆನ್ನಾಗಿದೆ? ಯಾರು ಎಷ್ಟು ಶ್ರಮಿಸಬೇಕು? ಯಾರಿಗೆ ಲಕ್ ಹೊಡೆಯಲಿದೆ ಎಂದು ನಾಗರಾಜ್‌ ಕೋಟೆ ನುಡಿದ ಭವಿಷ್ಯ ಕೇಳಿ.....
 

Nagaraj kote talks about kgf yash kantara rishab shetty bigg boss sudeep good times vcs

ಕನ್ನಡ ಚಿತ್ರರಂಗದ ಅದ್ಭುತ ನಟ ನಾಗರಾಜ್‌ ಕೋಟಿ ಅವರು ಜೋತಿಷ್ಯ ಶಾಸ್ತ್ರಿ ಕಲಿತಿದ್ದಾರೆ. ಸಾವಿರಾರೂ ಜನ ಸಾಮಾನ್ಯರಿಗೆ ಹಾಗೂ ನೂರಾರು ಸೆಲೆಬ್ರಿಟಿಗಳಿಗೆ ತಮ್ಮ ಸಮಯ ಹೇಗಿದೆ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಚಿತ್ರರಂಗವನ್ನು ರೂಲ್ ಮಾಡುತ್ತಿರುವ ಯಶ್, ಸುದೀಪ್ ಮತ್ತು ರಿಷಬ್ ಶೆಟ್ಟಿ ಭವಿಷ್ಯದ ಬಗ್ಗೆ ನುಡಿದಿದ್ದಾರೆ.

ಯಶ್:

'ಯಶ್ ಅವರದ್ದು ವೃಶ್ಚಿಕಾ ರಾಶಿ ಎಂದು ನನಗೆ ಗೊತ್ತಿದೆ. ಈಗ ಅವರಿಗೆ ಶುಕ್ರದೆಸೆ ನಡೆಯುತ್ತಿರುವ ಕಾರಣ 2028ವರೆಗೂ ಸಮಯ ತುಂಬಾ ಚೆನ್ನಾಗಿದೆ. ವೃಶ್ಚಿಕಾ ರಾಶಿ ಅವರಿಗೆ ಶುಕ್ರದೆಸೆ ಬಂದು ಬಿಟ್ಟರೆ ತುಂಬಾ ಚೆನ್ನಾಗಿ ಆಗುತ್ತಾರೆ' ಎಂದು ಕನ್ನಡ ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ನಾಗರಾಜ್ ಕೋಟೆ ಮಾತನಾಡಿದ್ದಾರೆ.

6 ತಿಂಗಳಾದ್ರೂ ಬ್ಯಾಗ್‌ನಲ್ಲಿ ಚಾಕೊಲೇಟ್ ಹಾಗೆ ಇರುತ್ತೆ; ಮಿಲನಾ ಹ್ಯಾಂಡ್‌ಬ್ಯಾಗ್‌ ಸೀಕ್ರೆಟ್‌ ರಿವೀಲ್ ಮಾಡಿದ ಅನುಶ್ರೀ!

ರಿಷಬ್ ಶೆಟ್ಟಿ:

'ರಿಷಬ್ ಶೆಟ್ಟಿ ಅವರ ತಂದೆನೇ astrologer ಎಂದು ನನಗೆ ಗೊತ್ತಾಗಿದೆ ಹೀಗಾಗಿ ಅವರಿಂದ ಮೊದಲು ಸಲಹೆ ಪಡೆದುಕೊಂಡು ಕೆಲಸ ಮಾಡುತ್ತಾರೆ ಅಲ್ಲದೆ ಅವರಿಗೆ ದೈವ ಪ್ರೇರಣೆ ಆಗಿರುತ್ತದೆ. ಇಷ್ಟು ದೊಡ್ಡ ಹಂತಕ್ಕೆ ಹೆಸರು ಮಾಡುವುದಕ್ಕೆ ಗ್ರಹಗಳ ಕೃಪೆ ಮತ್ತು ಸಂದರ್ಭದ ಕೃಪೆ ತುಂಬಾ ಮುಖ್ಯವಾಗುತ್ತದೆ. ರಿಷಬ್ ಅವರ ಒಳ್ಳೆ ದೆಸೆ ಕಾಂತಾರ 2 ಆಗುವವರೆಗೂ ಇದ್ಯಾ ಅಥವಾ ಅದಾದ ಮೇಲೂ ಇದ್ಯಾ ಎಂದು ನನಗೆ ಗೊತ್ತಿಲ್ಲ ಏಕೆಂದರೆ ಅವರ ರಾಶಿ ನಕ್ಷರ ನನಗೆ ಗೊತ್ತಿಲ್ಲ. 15 ವರ್ಷ ಸೈಕಲ್ ಹೊಡೆದಿರುತ್ತಾರೆ ಆದರೆ ಅವರ ಅದೃಷ್ಟದ ದೆಸೆ ಕಾಂತಾರ ಸಮಯದಲ್ಲಿ ಇತ್ತು' ಎಂದು ನಾಗರಾಜ್ ಕೋಟೆ ಹೇಳಿದ್ದಾರೆ.

ದರ್ಶನ್ ಹೆಸರಿನಲ್ಲಿ ಬಾರ್ ಓಪನ್; ಹರಿದು ಬಂತು ಸಾಲು ಸಾಲು ನೆಗೆಟಿವ್ ಕಾಮೆಂಟ್ಸ್!

ಸುದೀಪ್:

ಸುದೀಪ್ ತುಂಬಾ ಬುದ್ಧಿವಂತ, ಅವರ ರಾಶಿ ಗೊತ್ತಿಲ್ಲ ಹೀಗಾಗಿ ಮುಖ ನೋಡಿ ಹೇಳುತ್ತೀನಿ. ಸಿನಿಮಾಗಿಂತ ಮೀರಿದ ಜ್ಞಾನ ಅವರಿಗಿದೆ...ಸುದೀಪ್ ಅದ್ಭುತ ಜ್ಞಾನಿ ಆದರೆ ಏನೂ ತೋರಿಸಿಕೊಳ್ಳುವುದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಾತನಾಡುವುದನ್ನು ಅಷ್ಟೂ ಸ್ಕಿಟ್ ಕೊಡಲು ಆಗುವುದಿಲ್ಲ ಎಂದಿದ್ದಾರೆ ನಾಗರಾಜ್.

Latest Videos
Follow Us:
Download App:
  • android
  • ios