Asianet Suvarna News Asianet Suvarna News

'ರಾಬರ್ಟ್‌' ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾದ ಯುವನಟಿ ಐಶ್ಚರ್ಯ!

ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರದಲ್ಲಿ ನವ ನಟಿಯರ ದಂಡೇ ಇದ್ದಂತಿದೆ. ಈಗ ಮತ್ತೊಬ್ಬ ನಟಿ ದರ್ಶನ್‌ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಹೆಸರು: ಐಶ್ವರ್ಯ ಪ್ರಸಾದ್‌. ಐಶ್ವರ್ಯ ಪ್ರಸಾದ್‌ ಹುಟ್ಟುಹಬ್ಬದ ಪ್ರಯುಕ್ತ (ಜ.26) ಅವರು ತಮ್ಮ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಪ್ರಕಟಿಸಿದೆ. 

Mysore based model to act with Darshan in kannada movie robert
Author
Bangalore, First Published Jan 27, 2020, 8:45 AM IST
  • Facebook
  • Twitter
  • Whatsapp

ಈ ಬಗ್ಗೆ ಖುಷಿಯಾಗಿರುವ ಐಶ್ವರ್ಯ ಪ್ರಸಾದ್‌, ದೊಡ್ಡ ಸಿನಿಮಾ, ಸ್ಟಾರ್‌ ನಟನ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟಎನ್ನುತ್ತಾರೆ.

ರಾಬರ್ಟನಿಗೆ ಒಲಿದು ಬಂದ ಮೈಸೂರು ರಾಣಿ, ಯಾರಿವಳು?

‘ಚಿತ್ರದಲ್ಲಿ ದರ್ಶನ್‌ ಅವರದ್ದು ಎರಡ್ಮೂರು ಗೆಟಪ್‌ಗಳಲ್ಲಿ ಅವರ ಪಾತ್ರ ಸಾಗುತ್ತದೆ. ಒಂದು ಶೇಡ್‌ ಪಾತ್ರದಲ್ಲಿ ನಾನು ಅವರ ಜತೆ ಟ್ರಾವೆಲ್‌ ಮಾಡುತ್ತೇನೆ. ಬೆಂಗಳೂರು, ಹೈದಾರಬಾದ್‌, ವಾರಣಾಸಿಯಲ್ಲಿ 21 ದಿನ ನನ್ನ ಪಾತ್ರದ ಚಿತ್ರೀಕರಣ ಆಗಿದೆ. ಚಿತ್ರದ ಮೊದಲ ದೃಶ್ಯ ಹಾಗೂ ಕೊನೆಯ ದೃಶ್ಯ ಚಿತ್ರೀಕರಣ ಆಗಿದ್ದು ನನ್ನ ಪಾತ್ರದ ಜತೆಗೆಯೇ. ಚಿತ್ರದ ಸೆಕೆಂಡ್‌ ಲುಕ್‌ ಪೋಸ್ಟರ್‌ನಲ್ಲಿ ನಾನಿದ್ದೇನೆ. ಬೇರೆ ರೀತಿಯಲ್ಲೇ ಈ ಚಿತ್ರದಲ್ಲಿ ನನ್ನ ಕ್ಯಾರೆಕ್ಟರ್‌ ಅನ್ನು ನಿರ್ದೇಶಕರು ರೂಪಿಸಿದ್ದಾರೆ. ದರ್ಶನ್‌ ಹಿಂದೆ ಸುತ್ತಾಡುತ್ತ ಅವರನ್ನು ಇಂಪ್ರೆಸ್‌ ಮಾಡುವ ಪ್ರಯತ್ನ ಮಾಡುತ್ತೇನೆ. ಚಿತ್ರದ ಒಂದು ಹಾಡಿನಲ್ಲೂ ನಾನಿದ್ದೇನೆ. ಯಾಕೆ ನನ್ನ ಪಾತ್ರ ಅವರ ಜತೆ ಟ್ರಾವೆಲ್‌ ಆಗುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು’ ಎಂಬುದು ಐಶ್ವರ್ಯ ಪ್ರಸಾದ್‌ ಮಾತು.

'ರಾಬರ್ಟ್' ಚಿತ್ರ ಕುರಿತು ಕುತೂಹಲಕರಿ ಮಾಹಿತಿ ತಿಳಿಸಿದ ನಿರ್ದೇಶಕ!

ಐಶ್ವರ್ಯ ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಪರಿಚಯ ಆದವರು. ನಂತರ ‘ಪಡ್ಡೆಹುಲಿ’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡವರು. ಈಗ ‘ರಾಬರ್ಟ್‌’ ಚಿತ್ರದಲ್ಲಿ ನಟಿಸಿರುವ ಸಂಭ್ರಮದಲ್ಲಿ ಈ ವರ್ಷದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Follow Us:
Download App:
  • android
  • ios