ಲವ್ ಆಂಡ್ ಮ್ಯಾರೇಜ್‌ ಬಗ್ಗೆ ಸತ್ಯ ಹಂಚಿಕೊಂಡ ನಟಿ ವಿದಿಶಾ ಶ್ರೀವಾಸ್ತವ. ಶಾನ್ವಿ ಅಕ್ಕನ ಕಥೆ ಇದು...

ನಲಿ ನಲಿಯುತ್ತಾ ಮತ್ತು ವಿರಾಟ್ ಸಿನಿಮಾದಲ್ಲಿ ನಟಿಸಿರುವ ವಿದಿಶಾ ಶ್ರೀವಾಸ್ತವ ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ವಿದಿಶಾ ಯಾರೆಂದು ಕನ್ಫ್ಯೂಸ್ ಆದವರಿಗೆ ಸಣ್ಣ ಸುಳಿವು ಬೇಕೆಂದರೆ, ನಟಿ ಶಾನ್ವಿ ಶ್ರೀವಾಸ್ತವ ಅವರ ಅಕ್ಕ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಲ್ಕು ವರ್ಷ ಕಳೆದರೂ ಎಲ್ಲಿಯೂ ಮದುವೆಯಾಗಿದೆ ಎಂದು ಹೇಳಿಕೊಂಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ವಿದಿಶಾ ಅಭಿಮಾನಿಗಳಿಗೆ ಸಣ್ಣ ಕ್ಲಾರಿಟಿ ಕೊಟ್ಟಿದ್ದಾರೆ.

2018ರಲ್ಲಿ ಕೋಲ್ ಮೈನಿಂಗ್ ಉದ್ಯಮಿ ಸಾಯಕ್ ಪಾಲ್‌ರನ್ನು ಜೊತೆ ವಿದಿಶಾ ಶ್ರೀವಾಸ್ತವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 'ನನ್ನ ಮದುವೆ ವಿಚಾರವನ್ನು ಎಂದೂ ಮುಚ್ಚಿಟ್ಟಿಲ್ಲ. ಮಾಧ್ಯಮಗಳಲ್ಲಿ ಮದುವೆ ಬಗ್ಗೆ ಮಾತನಾಡದಿರಲು ಕಾರಣ ಏನೆಂದರೆ ಸಾಯಕ್ ಚಿತ್ರರಂಗದವರಲ್ಲ. ಅವರು ಸಿಂಪಲ್ ಹುಡುಗ ಹೀಗಾಗಿ ಲೈಮ್‌ಲೈಟ್‌ ಇಷ್ಟವಾಗುವುದಿಲ್ಲ. ಅವರು ಮೂಲತಃ ಕೊಲ್ಕತಾದವರು, ನಮ್ಮದು ಲವ್ ಮ್ಯಾರೇಜ್. ಯಾಕೆ ಚಿತ್ರರಂಗದವರನ್ನು ಮದುವೆ ಆಗಿಲ್ಲ ಎನ್ನುವುದಕ್ಕೆ ಉತ್ತರವಿಲ್ಲ ಆದರೆ ಚಿತ್ರರಂಗದವರು ಬೇಡ ಎಂದು ಮೊದಲೇ ತೀರ್ಮಾನ ಮಾಡಿಕೊಂಡಿದ್ದೆ' ಎಂದು ವಿದಿಶಾ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ. 

'2013ರಲ್ಲಿ ಸೌತ್‌ ಚಿತ್ರರಂಗದಲ್ಲಿ ನಾನು ಬ್ಯುಸಿಯಾಗಿದ್ದೆ. ಕರ್ಪೋರೇಟ್‌ ಕೆಲಸ ಕೂಡ ಮಾಡುತ್ತಿದ್ದೆ. ಹೀಗಾಗಿ ನನ್ನ ಶೆಡ್ಯೂಲ್ ಹೆಕ್ಟಿಕ್ ಆಗಿತ್ತು ತುಂಬಾ ಪ್ರಯಾಣ ಮಾಡಬೇಕಿತ್ತು ಕೆಲವೊಂದು ಅವಕಾಶಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಹೀಗಾಗಿ ನಟನೆಯಿಂದ ಸಣ್ಣ ಬ್ರೇಕ್ ತೆಗೆದುಕೊಂಡೆ. ಐಟಿ ಕ್ಷೇತ್ರದಲ್ಲಿ ಎರಡು ಎರಡು ವರ್ಷ ಕೆಲಸ ಮಾಡಿದ ನಂತರ ಗುಡ್‌ ಬೈ ಹೇಳಿದೆ. ಈ ಸಮಯದಲ್ಲಿ ನಾನು ಸಾಯಕ್ ಪಾಲ್‌ರನ್ನು ಮೊದಲು ಮುಂಬೈನಲ್ಲಿ ಭೇಟಿ ಮಾಡಿದ್ದು. ನನಗೆ ಅವರ ಮೇಲೆ ಮೊದಲು ಕ್ರಶ್ ಆಗಿದ್ದು ಆದರೆ ಸಾಯಕ್ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನಾನು ಕೆಲಸ ಮುಗಿಸುವ 6 ತಿಂಗಳು ಮುನ್ನವಷ್ಟೆ ನನಗೆ ಮದುವೆಯಾಗಲು ಪ್ರಪೋಸ್ ಮಾಡಿದ್ದರು. ನನ್ನ ತಂದೆ ತಾಯಿ ಅವರನ್ನು ಒಪ್ಪಿಸಿ ಅನುಮತಿ ಪಡೆದುಕೊಳ್ಳಿ ಎಂದು ಹೇಳಿದೆ. ಈಗ ನಾವು ಮದುವೆಯಾಗಿ ಒಂದುವರೆ ವರ್ಷ ಆಗಿದೆ' ಎಂದು ವಿದಿಶಾ ಮಾತನಾಡಿದ್ದಾರೆ. 

ನಟಿ ಶಾನ್ವಿ ಬ್ಯಾಗ್‌ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ!

'ನಾನು ಅದೃಷ್ಟವಂತೆ ಕಾರ್ಪೋರೆಟ್ ಕೆಲಸ ಬಿಟ್ಟು ಆನ್‌ಸ್ಕ್ರೀನ್‌ ಜರ್ನಿ ಮತ್ತೆ ಶುರು ಮಾಡಲು ನನ್ನ ಪತಿ ಸಪೋರ್ಟ್ ಮಾಡಿದರು. ಪ್ರೀತಿಗಿಂತ ಮದುವೆ ಆದಮೇಲೆ ನಮ್ಮ ನಡುವೆ ಗೌರವ ಹೆಚ್ಚಾಗಿದೆ' ಎಂದಿದ್ದಾರೆ ವಿದಿಶಾ.

'ಮದುವೆಯಾಗಿ ಒಂದು ವರ್ಷ ನಾವು ಒಟ್ಟಿಗೆ ಜೀವನ ಮಾಡಿದೆವು. ಆದರೆ ಅವರಿಗೆ ಕೆಲಸ ಹೆಚ್ಚಾದ ಕಾರಣ ವಿದೇಶ ಪ್ರಯಾಣ ಮಾಡುತ್ತಲೇ ಇರಬೇಕು. ತಿಂಗಳಿನಲ್ಲಿ ನಾವು ಕೇವಲ 5 ದಿನಗಳು ಮಾತ್ರ ಒಟ್ಟಿಗೆ ಇರುತ್ತೀವಿ. ಲಾಂಗ್ ಡಿಸ್ಟೆನ್ಸ್‌ ಮದುವೆಯಲ್ಲಿ ನಾವು ನೂರಾರು ಸಮಸ್ಯೆಗಳನ್ನು ಎದುರಿಸುತ್ತೀವಿ. ದೊಡ್ಡ ಚಾಲೆಂಜ್‌ ಏನೆಂದರೆ ನಮಗೆ ಅಗತ್ಯವಿರುವ ಸಮಯದಲ್ಲಿ ನಮ್ಮ ಪಾರ್ಟನರ್‌ ನಮ್ಮ ಜೊತೆ ಇರುವುದಿಲ್ಲ. ನಮ್ಮ ನಡುವೆ ಮನಸ್ತಾಪ ಶುರುವಾಗುವುದು ನಾವು ಮನೆ ಬದಲಾಯಿಸುವ ವಿಚಾರದಲ್ಲಿ, ನಿಮ್ಮ ಊರು ಬಿಟ್ಟು ಮುಂಬೈಗೆ ಬಂದು ಮನೆ ಮಾಡಿಕೊಳ್ಳಿ ಎಂದಾಗ. ಆದರೆ ವೃತ್ತಿ ಜೀವನದಲ್ಲಿ ಅವರು ಕೂಡ ಬೆಳೆಯಬೇಕು. ನಮ್ಮ ಸಂಬಂಧ ಗಟ್ಟಿಯಾಗಿರುವುದಕ್ಕೆ ಕಾರಣವೇ ನಮ್ಮ ನಡುವೆ ಇರುವ ನಂಬಿಕೆ' ಎಂದು ವಿದಿಶಾ ಹೇಳಿದ್ದಾರೆ.