ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕರಾಗಿರುವ ಅರ್ಜುನ್ ಜನ್ಯ ಇದೀಗ ದುಬಾರಿ ಐಷಾರಾಮಿ ಕಾರು ಖರೀದಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅರ್ಜುನ್ ಜನ್ಯ ತಮ್ಮ ಕುಟುಂಬದ ಜೊತೆಗೆ ಸಂಭ್ರಮಿಸುತ್ತಿರುವ ಫೋಟೊ ವಿಡಿಯೋ ವೈರಲ್ ಆಗುತ್ತಿದೆ. 

ದುಬಾರಿ ಐಷಾರಾಮಿ ಕಾರು ಖರೀದಿಸಿದ ಅರ್ಜುನ್ ಜನ್ಯಾ

ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಮ್ಯಾಜಿಕಲ್ ಕಂಪೋಸರ್ ಆಗಿರುವ ಅಷ್ಟೇ ಅಲ್ಲ, ನಿರ್ದೇಶಕರಾಗಿಯೂ ಚಂದನವನದಲ್ಲಿ ಯಶಸ್ಸು ಕಂಡಿರುವ ಅರ್ಜುನ್ ಜನ್ಯ ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಜನ್ಯ ಖರೀದಿಸಿರುವ ಕಾರಿನ ಫೋಟೊ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ತಮ್ಮ ಪತ್ನಿ ಹಾಗೂ ಮಗಳ ಜೊತೆಗೆ ಕಾರಿಗೆ ಪೂಜೆ ಮಾಡಿ ಸಂಭ್ರಮಿಸಿದ್ದಾರೆ ಅರ್ಜುನ್ ಜನ್ಯ. ಇವರು ಖರೀದಿಸಿದ ಕಾರು ಯಾವುದು? ಅದರ ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ನಿಮಗಾಗಿ.

Add Asianetnews Kannada as a Preferred SourcegooglePreferred

ಬಲು ದುಬಾರಿ ಕಾರು

ಅರ್ಜುನ್ ಜನ್ಯಾ ಇಂಡಷ್ಟ್ರಿಗೆ ಕಾಲಿಟ್ಟಾಗ ಅವರ ಬಳಿ ಏನೂ ಇರಲಿಲ್ಲ. ಈಗ ಜನಪ್ರಿಯ ಸಂಗೀತ ನ್ರಿದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸ್ಟಾರ್ ನಟರು ಖರೀದಿಸುವಂತಹ ದುಬಾರಿ ಕಾರನ್ನು ಕೂಡ ಖರೀದಿಸಿ ಸಾಧಿಸಿ ತೋರಿಸಿದ್ದಾರೆ. ಅರ್ಜುನ್‌ ಜನ್ಯಾ ಖರೀದಿಸಿರುವ ಈ ಟೊಯೋಟಾ ವೆಲ್‌ಫೈಯರ್‌ ಕಾರು ತನ್ನ ಐಷಾರಾಮಿ ಸೌಲ್ಯಭ್ಯಗಳಿಗೆ ಹೆಸರುವಾಸಿಯಾಗಿದೆ. ಇದರ ಎಕ್ಸ್‌ ಶೋರೂಂ ಬೆಲೆ ಸುಮಾರು 1.2 ಕೋಟಿ ರೂಪಾಯಿಗಳಾಗಿದ್ದು, ಆನ್‌ ರೋಡ್‌ ಬೆಲೆ ಮತ್ತು ಇತರ ಕಸ್ಟಮೈಸೇಷನ್‌ಗಳನ್ನ ಸೇರಿಸಿದರೆ ಸುಮಾರು ಎರಡು ಕೋಟಿಯಷ್ಟಾಗುತ್ತದೆ. ಅಂದರೆ ಒಟ್ಟಲ್ಲಿ ಅರ್ಜುನ್ ಜನ್ಯ ಬರೋಬ್ಬರಿ 2 ಕೋಟಿ ನೀಡಿ ಆರು ಖರೀದಿ ಮಾಡಿದ್ದಾರೆ.

ಅರ್ಜುನ್ ಜನ್ಯ ಸಕ್ಸಸ್ ಸ್ಟೋರಿ

ಅರ್ಜುನ್ ಜನ್ಯ ಜನಿಸಿದ್ದು 13ಮೇ ಬೆಂಗಳೂರಿನಲ್ಲಿ. ಇವರ ಮೂಲ ಹೆಸರು ಲೋಕೇಶ್ ಕುಮಾರ್. ಇವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ವಿ.ಮನೋಹರ್ ಮತ್ತು ಕೆ.ಕಲ್ಯಾಣ್ ಅವರಿಂದ ಕೀಬೋರ್ಡ್ ಕಲಿಯುತ್ತಿದ್ದರು. ಆರ್ಕೆಸ್ಟ್ರಾಗಳ ಜೊತೆ ಹೋಗುತ್ತಿದ್ದರು. ಇವರು ಎ.ಆರ್ ರೆಹಮಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದು. ಎ.ಆರ್ ರೆಹಮಾನ್ ಅವರ ಭೇಟಿಯ ನಂತರ ಇವರ ಜೀವನದಲ್ಲಿ ಎಲ್ಲವೂ ಬದಲಾಯ್ತು. ಅರ್ಜುನ್ ಜನ್ಯ 2006ರಲ್ಲಿ ‘ಆಟೋಗ್ರಾಫ್ ಪ್ಲೀಸ್’ ಸಿನಿಮಾಗೆ ಸಂಗೀತ ನಿರ್ದೇಶಕರಾಗುವ ಮೂಲಕ ಕರಿಯರ್ ಆರಂಭಿಸಿದರು. ಬಿರುಗಾಳಿ ಸಿನಿಮಾದ ಹಾಡುಗಳ ಮೂಲಕ ಯಶಸ್ಸು ಪಡೆದರು. ಬಳಿಕ ಸಂಚಾರಿ ಸಿನಿಮಾ ಹಾಡುಗಳು ಸಹ ಹಿಟ್ ಆದವು. ಬಳಿಕ ಇವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ್ದು ಸುದೀಪ್ ನಟಿಸಿರುವ ಕೆಂಪೇಗೌಡ ಸಿನಿಮಾ. ಈ ಸಿನಿಮಾ ಹಾಡುಗಳು ಎಷ್ಟು ಹಿಟ್ ಆಗಿದ್ದವೆಂದರೆ, ಸಂಗೀತ ನಿರ್ದೇಶನಕ್ಕಾಗಿ ಜನ್ಯಾ ಅವರಿಗೆ ಸಾಲು ಸಾಲು ಪ್ರಶಸ್ತಿಗಳು ಅರಸಿ ಬಂದವು. ಜೊತೆಗೆ ಅಲ್ಲಿಂದ ತಮ್ಮ ಹೆಸರನ್ನು ಅರ್ಜುನ್ ಜನ್ಯ ಎಂದು ಬದಲಾಯಿಸಿದರು. ನಂತರ ಅರ್ಜುನ್ ಜನ್ಯ ಹಿಂದಿರುಗಿ ನೋಡಿಯೇ ಇಲ್ಲ.

ಸಂಗೀತ ನಿರ್ದೇಶಕರಾಗಿ, ಕಂಪೋಸರ್ ಅಗಿ ಯಶಸ್ಸು ಪಡೆದ ಅರ್ಜುನ್ ಜನ್ಯ ಕಳೆದ ವರ್ಷ ನಿರ್ದೇಶನಕ್ಕೂ ಇಳಿದರು. ಡಾ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರುವ 45 ಸಿನಿಮಾ ನಿರ್ದೇಶನ ಮಾಡಿ ಯಶಸ್ವಿಯಾದರು. ಇದೀಗ ಅರ್ಜುನ್ ಜನ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.