Basavashri Award: ಪುನೀತ್ ಕುಟುಂಬಕ್ಕೆ ಮುರಘ ಶ್ರೀ ಆಹ್ವಾನ

ಡಾ.ರಾಜ್​ಕುಮಾರ್ ಅವರ ಕುಟಂಬದ ಕುಡಿ ಪುನೀತ್ ತಂದೆಯಂತೆ ಶ್ರೇಷ್ಠ ಕಲಾವಿದ. ಅವರ ಅಗಲಿಕೆ ತುಂಬಲಾರದ ನಷ್ಟ. ಇಂತಹ ಸಂದರ್ಭದಲ್ಲಿ ಎಲ್ಲರೂ ಅವರ‌ ಪಾರ್ಥಿವ ಶರೀರ ದರ್ಶನ ಮಾಡಿ ಪುನೀತರಾಗಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.
 

murugha sri visits puneeth rajkumar house invites to basavasri award program gvd

ಬೆಂಗಳೂರು (ನ.10): ಇತ್ತೀಚೆಗಷ್ಟೇ ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಬಸವಶ್ರೀ (BasavaSri) ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಇದೀಗ ಮುರುಘಾ ಮಠದ ಶ್ರೀಗಳು ಸದಾಶಿವನಗರದ ಪುನೀತ್ ನಿವಾಸಕ್ಕೆ ತೆರಳಿ, ಕುಟುಂಬಸ್ಥರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಇದೇ ವೇಳೆ, ದೊಡ್ಮನೆ ಕುಟುಂಬಕ್ಕೆ ಶಿವಮೂರ್ತಿ ಮುರುಘಾ ಶರಣರು ಸಾಂತ್ವನ ಹೇಳಿದ್ದಾರೆ. 

ಡಾ.ರಾಜ್​ಕುಮಾರ್ (Dr.Rajkumar) ಅವರ ಕುಟಂಬದ ಕುಡಿ ಪುನೀತ್ ತಂದೆಯಂತೆ ಶ್ರೇಷ್ಠ ಕಲಾವಿದ. ಅವರ ಅಗಲಿಕೆ ತುಂಬಲಾರದ ನಷ್ಟ. ಇಂತಹ ಸಂದರ್ಭದಲ್ಲಿ ಎಲ್ಲರೂ ಅವರ‌ ಪಾರ್ಥಿವ ಶರೀರ ದರ್ಶನ ಮಾಡಿ ಪುನೀತರಾಗಿದ್ದಾರೆ. ನಾವು ಮುಂಬರುವ ಬಸವ ಜಯಂತಿಯಂದು 'ಬಸವಶ್ರೀ ಪ್ರಶಸ್ತಿ'ಯನ್ನು ಅಪ್ಪು ಅವರಿಗೆ ಪ್ರದಾನ ಮಾಡುತ್ತೇವೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ. ಇಡೀ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ ಎಂದು ಇದೇ ವೇಳೆ ಶ್ರೀಗಳು ತಿಳಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರನ್ನು ಬಸವಶ್ರೀ ಪ್ರಶಸ್ತಿಗೆ ಮುರುಘಾ ಮಠ ಆಯ್ಕೆ ಮಾಡಿತ್ತು. 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ (ಮರಣೋತ್ತರ) ಯನ್ನು ಪುನೀತ್ ರಾಜ್​ಕುಮಾರ್​ ಅವರಿಗೆ ನೀಡುವುದಾಗಿ ಮುರುಘಾ ಶರಣರು ಪ್ರಕಟಿಸಿದ್ದರು. ಬಾಲನಟನಾಗಿ, ನಾಯಕ ನಟನಾಗಿ ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸಮಾಜ ಸೇವೆ ಸಲ್ಲಿಸಿದ್ದಾರೆ. 

ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ ಎಂದ ನಟಿ ರಾಧಿಕಾ ಪಂಡಿತ್

ಇಂತಹ ಮೇರುನಟ ಇತ್ತೀಚೆಗೆ ಹೃದಯಾಘಾತದಿಂದ ನಮ್ಮನ್ನು ಅಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಅವರ ಕುಟುಂಬದವರಿಗೆ ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಥಮರ ಆಶೀರ್ವಾದ ಸದಾ ಇರಲಿ. ಮಾನವೀಯ ಮೌಲ್ಯಗಳನ್ನೊಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕ ವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದು ಮುರುಘಾ ಶರಣರು ಶ್ಲಾಘಿಸಿದ್ದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಮುಂದಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಅನುಭವ ಮಂಟಪದಲ್ಲಿ ವಿತರಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದರು. 

ಇನ್ನು, ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಪದ್ಮ ಪ್ರಶಸ್ತಿ  (Padma Award) ನೀಡಬೇಕು ಎಂಬ ಅಭಿಮಾನಿಗಳ ಒತ್ತಾಯ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮರಣೋತ್ತರ ‘ಪದ್ಮ ಶ್ರೀ’ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಾಗೂ ನಟ ಪುನೀತ್‌ ಅಕಾಲಿಕ ನಿಧನದ ಬೆನ್ನಲ್ಲೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸುವಂತೆ ಕೂಗು ಕೇಳಿಬಂದಿತ್ತು. ಆದರೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ ಸರ್ಕಾರ ಸುಮ್ಮನಾಗಿತ್ತು. ಇದೀಗ ರಾಜ್ಯಾದ್ಯಂತ ಕರ್ನಾಟಕ ರತ್ನ ಹಾಗೂ ಪದ್ಮ ಶ್ರೀ ಪ್ರಶಸ್ತಿಗೆ ಒತ್ತಾಯ ಜೋರಾಗುತ್ತಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

Sakrebailu Elephant Camp: ಮರಿಗೆ ಪುನೀತ್ ರಾಜ್‌ಕುಮಾರ್ ಹೆಸರು

ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕೆಂದು ಟ್ವಿಟ್ಟರ್‌ನಲ್ಲಿ (Twitter) ಮಂಗಳೂರು ಕಮಿಷನರ್ ಶಶಿಕುಮಾರ್ #PadmashreeForAppu ಎಂಬ ಅಭಿಯಾನ ಶುರು ಮಾಡಿದ್ದರು. ಈ ಅಭಿಯಾನವನ್ನು ಬೆಂಬಲಿಸಿ ಹಲವರಿಂದ ರೀ ಟ್ವೀಟ್ ಆಗಿ ಬೆಂಬಲ ಕೂಡಾ ಸಿಕ್ಕಿತ್ತು. ನಾಗರಿಕ ಸೇವೆಗಳ ಹಿನ್ನೆಲೆಯಲ್ಲಿ ಕೊಡ ಮಾಡುವ ಪದ್ಮ ಪ್ರಶಸ್ತಿಗೆ ಪುನೀತ್ ಅವರು ಅರ್ಹರು. ಯಾಕೆಂದರೆ ಅವರು ಕೂಡ ಸಾಕಷ್ಟು ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಐಪಿಎಸ್ ಅಧಿಕಾರಿ, ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದರು.

"

Latest Videos
Follow Us:
Download App:
  • android
  • ios