ಚಾರ್ಲಿ, ವಿಕ್ರಾಂತ್ ರೋಣ, ಬೃಂದಾವನ ಸೇರಿದಂತೆ ಹಲವು ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟಿರುವ ನಟಿ ಮಿಲನಾ ನಾಗರಾಜ್​ ತಮಗೆ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಿರುವ ಅವಕಾಶಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

'ನಾನು ಇದಾಗಲೇ ಬೃಂದಾವನ, ಲವ್ ಬರ್ಡ್ಸ್, ಚಾರ್ಲಿ, ವಿಕ್ರಾಂತ್ ರೋಣ, ಜಾನಿ, ಲವ್ ಮಾಕ್ಟೇಲ್, ಮತ್ತೆ ಉದ್ಭವ, ಲವ್ ಮಾಕ್ಟೇಲ್ 2, ಓ, ಮಿಸ್ಟರ್ ಬ್ಯಾಚುಲರ್, ಕೌಸಲ್ಯಾ ಸುಪ್ರಜಾ ರಾಮ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಹಲವು ಬ್ಲಾಕ್​ಬಸ್ಟರ್​ ಕೂಡ ಆಗಿದೆ. ನಾನು ಮಾಡಿದ ಹಲವು ಚಿತ್ರಗಳು ನನಗೆ ಹೆಸರು ತಂದುಕೊಟ್ಟಿದೆ. ನನ್ನ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಹಲವಾರು ಅವಕಾಶಗಳು ನನಗೆ ಸಿಕ್ಕಿವು. ಆದರೆ ಇಂಟರೆಸ್ಟಿಂಗ್​ ವಿಷ್ಯ ಏನು ಗೊತ್ತಾ? ನಾನು ಇಂಡಸ್ಟ್ರಿಗೆ ಬಂದಾಗ, ನಾನು ಹೇಗೆ ನಟನೆ ಮಾಡಿದೆ ಎಂದು ಯಾರೂ ನೋಡಲಿಲ್ಲ, ನನ್ನಲ್ಲಿ ಏನು ಟ್ಯಾಲೆಂಟ್‌ ಇದೆ ಎನ್ನುವುದನ್ನೂ ಯಾರೂ ನೋಡಲಿಲ್ಲ. ನೋಡೋಕೆ ಚೆನ್ನಾಗಿದ್ದೇನೆ ಎಂದು ಅವಕಾಶ ಸಿಕ್ಕಿತು' ಎನ್ನುವ ಮೂಲಕ ಸ್ಯಾಂಡಲ್​ವುಡ್​ ಬ್ಯೂಟಿ ಮಿಲನಾ ನಾಗರಾಜ್​ ತಮಗೆ ಸಿನಿಮಾದಲ್ಲಿ ಸಿಕ್ಕ ಅವಕಾಶವನ್ನು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

 

ಸದ್ಯ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ದಂಪತಿ ಸೆಪ್ಟೆಂಬರ್‌ 5ರಂದು ಹೆಣ್ಣು ಮಗುವಿನ ಪೋಷಕರಾಗಿದ್ದು, ಮಗಳಿಗೆ ʻಪರಿʼ ಎಂದು ಹೆಸರು ಇಟ್ಟಿದ್ದಾರೆ. ಮಗಳು ʻಪರಿʼಗಾಗಿ ಮಿಲನಾ ನಾಗರಾಜ್‌ ಹೆಚ್ಚು ಸಮಯವನ್ನು ಮೀಸಲಿಟ್ಟು ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್‌ ಆಗಿರುವ ನಟಿ, ಮಗಳ ಫೊಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದರ ನಡುವೆಯೇ, ನಟಿ ರ್‍ಯಾಪಿಡ್‌ ರಶ್ಮಿ ಶೋನಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮಗೆ ಈ ಹಿಂದೆ ಸಿನಿಮಾದಲ್ಲಿ ನಟಿಸುವ ಅವಕಾಶ ಹೇಗೆ ಸಿಕ್ಕಿತು ಮತ್ತು ಈಗಿನವರಿಗೆ ಹೇಗೆ ಸಿಗುತ್ತಿದೆ ಎನ್ನುವ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಇದಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿದೆ. ಹಲವಾರು ಅವಕಾಶಗಳು ನನಗೆ ಸಿಕ್ಕಿವು. ಆದರೆ ಕುತೂಹಲ ಎಂದರೆ ನಾನು ಇಂಡಸ್ಟ್ರಿಗೆ ಬಂದಾಗ, ನಾನು ಹೇಗೆ ನಟನೆ ಮಾಡಿದೆ ಎಂದು ಯಾರೂ ನೋಡಲಿಲ್ಲ, ನನ್ನಲ್ಲಿ ಏನು ಟ್ಯಾಲೆಂಟ್‌ ಇದೆ ಎನ್ನುವುದನ್ನೂ ಯಾರೂ ನೋಡಲಿಲ್ಲ. ನೋಡೋಕೆ ಚೆನ್ನಾಗಿದ್ದೇನೆ ಎಂದು ಅವಕಾಶ ಸಿಕ್ಕಿತು ಎಂದು ಓಪನ್‌ ಆಗಿಯೇ ಹೇಳಿಕೊಂಡಿದ್ದಾರೆ.

ಆದರೆ ಇವತ್ತು ನಮ್ಮ ಸಿನಿಮಾಗೆ ಕಾಸ್ಟ್‌ ಮಾಡುವಾಗ, ಯಾರೋ ಚೆನ್ನಾಗಿ ಇದ್ದಾರೆ ಎಂದು ಕಾಸ್ಟ್‌ ಮಾಡಲ್ಲ. ಅವತ್ತಿನ ಟೈಮ್‌ನಲ್ಲಿ ನನಗೆ ಸಿನಿಮಾ ಅವಕಾಶ ಬಂತು. ಆದರೆ ಈಗ ಬೇರೆ ಬೇರೆ ವಿಷಯಗಳನ್ನು ನೋಡುತ್ತಾರೆ. ಸೋಷಿಯಲ್‌ ಮೀಡಿಯಾ ರೀಚ್‌ ನೋಡ್ತಾರೆ, ನಟನೆ ಎಲ್ಲವನ್ನೂ ನೋಡುತ್ತಾರೆ. ಸೆಟ್‌ನಲ್ಲಿ ಯಾರೂ ಏನೂ ಹೇಳಿಕೊಡುವುದಿಲ್ಲ. ನಾನು ಕ್ರಮೇಣ ಎಲ್ಲವನ್ನೂ ಕಲಿತೆ ಎಂದಿದ್ದಾರೆ ಮಿಲನಾ. ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು 1989ರ ಏಪ್ರಿಲ್ 25ರಂದು ಹಾಸನದಲ್ಲಿ ಜನಿಸಿದರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದ ಇವರು ರಾಜ್ಯಮಟ್ಟದ ಈಜುಗಾರ್ತಿ ಕೂಡ ಹೌದು. 2013ರಲ್ಲಿ ತೆರೆಕಂಡ `ನಮ್ ದುನಿಯಾ ನಮ್ಮ ಸ್ಟೈಲ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು.

 

View post on Instagram