ಸ್ನೇಹಿತರ ಜೊತೆ ಪೊಗರು ನೈಟ್‌ ಶೋ ವೀಕ್ಷಿಸಿದ ಮೇಘನಾ ರಾಜ್!

ಸೀನ್‌ ಕಟ್ ಆಗುವ ಮುನ್ನ ಪೊಗರು ಸಿನಿಮಾ ವೀಕ್ಷಿಸಿದ ಮೇಘನಾ ರಾಜ್‌. ಯಾವ ಚಿತ್ರಮಂದಿರಲ್ಲಿ ಅಂತ ಗೊತ್ತಾ?

Meghana raj watches pogaru kannada film with friends in Bengaluru vcs

ಸ್ಯಾಂಡಲ್‌ವುಡ್‌ ಸುಂದರಿ ಮೇಘನಾ ರಾಜ್‌ ತಮ್ಮ ಆಪ್ತ ಸ್ನೇಹಿತರ ಜೊತೆ ಪೊಗರು ಸಿನಿಮಾ ವೀಕ್ಷಿಸಿದ್ದಾರೆ. ನಿರ್ದೇಶಕ ಪನ್ನಗಾಭರಣ ಕ್ಲಿಕ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಂದ ಬೇಬಿ ಚಿರು ಪೋಟೋ ಎಡಿಟ್; ಮೇಘನಾ ಫುಲ್ ಖುಷ್! 

ರಾಜ್ಯದ್ಯಾಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪೊಗರು ಸಿನಿಮಾ ಬಿಡುಗಡೆಯಾದ ಆರೇ ದಿನಗಳಲ್ಲಿ 45 ಕೋಟಿ ಬಾಕ್ಸ್ ಆಫೀಸ್‌ ಕಲೆಕ್ಷನ್ ಮುಟ್ಟಿದೆ. ಬ್ರಾಹ್ಮಣರ ಸಮುದಾಯದ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, 8 ನಿಮಿಷಗಳ ಕಾಲ ದೃಶ್ಯ ಕಟ್ ಮಾಡಲಾಗುತ್ತದೆ. ಧ್ರುವ ಸರ್ಜಾ ಅಭಿಮಾನಿಗಳು ಚಿತ್ರದ ಯಾವ ದೃಶ್ಯವೂ ಮಿಸ್ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಬ್ಯಾಕ್ ಟು ಬ್ಯಾಕ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. 

Meghana raj watches pogaru kannada film with friends in Bengaluru vcs

ಜೂನಿಯರ್ ಚಿರು ಆಗಮನದ ನಂತರ ಮೇಘನಾ ರಾಜ್‌ ವೀಕ್ಷಿಸಿದ ಮೊದಲ ಸಿನಿಮಾ ಪೊಗರು. ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ಗೆ ಫುಲ್ ಫಿದಾ ಆಗಿದ್ದಾರೆ. ಪಕ್ಕಾ ಮಾಸ್‌ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲದೆ ಚಿತ್ರಮಂದಿರಗಳಲ್ಲಿಯೂ ನೋಡಬೇಕೆಂದು ಬೆಂಗಳೂರಿನ ಶ್ರೀ ಮಹದೇಶ್ವರ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ.  'ಸಿನಿಮಾ ಹೀಗೆ ನೋಡಿದ ಬೆಸ್ಟ್ ಅನುಭವ. ಕಡಿಮೆ ಬೆಲೆಯಲ್ಲಿ ಆಹಾರ,' ಎಂದು ಬರೆದುಕೊಂಡಿದ್ದಾರೆ.

ಚಿಕ್ಕಪ್ಪ ಧ್ರುವ ಸರ್ಜಾ ಪೊಗರು ಚಿತ್ರಕ್ಕೆ ಜೂನಿಯರ್ ಚಿರು ಮಾಡಿರುವ ವಿಡಿಯೋ ವೈರಲ್!

ಇನ್‌ಸ್ಟಾಗ್ರಾಂ ಫಿಲ್ಟರ್ ಟ್ರೈ ಮಾಡುವ ಮೂಲಕ ಜೂನಿಯರ್ ಚಿರು ಕೂಡ ಚಿಕ್ಕಪ್ಪನ ಚಿತ್ರಕ್ಕೆ ಸಾಥ್‌ ನೀಡಿದ್ದಾನೆ. ಬೆಳಗಾವಿಯಲ್ಲಿ ಪೊಗರು ಸಿನಿಮಾ ಪ್ರಮೋಷನ್ ಮಾಡುವಾಗ ಜೂನಿಯರ್‌ ವಿಡಿಯೋ ರಿವೀಲ್ ಮಾಡಲಾಗಿತ್ತು. ಚಿರು ಹಾಗೂ ಧ್ರುವ ಪಡೆಯುವಷ್ಟೇ ಪ್ರೀತಿ ನಮ್ಮ ಜೂನಿಯರ್ ಸಿ ಪಡೆದುಕೊಂಡಿದ್ದಾನೆ. ಅಲ್ಲದೇ ತಂದೆ ಚಿರಂಜೀವಿ ಅಭಿನಯದ ರಾಜಮಾರ್ತಾಂಡ ಚಿತ್ರದ ಟೀಸರ್‌ ಕೂಡ ಬಿಡುಗಡೆ ಮಾಡುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲೇ ಬೇಬಿ ಸಿಗೆ ಚಿತ್ರರಂಗದ ಜೊತೆ ಒಡನಾಟ ಬೆಳದುಕೊಂಡಿದೆ. ಒಟ್ಟಿನಲ್ಲಿ ಮೇಘನಾ ರಾಜ್‌ ಮುಖದಲ್ಲಿ ಮಂದಹಾಸ ತರಿಸುತ್ತಿರುವ ಪ್ರತಿಯೊಬ್ಬರಿಗೆ ಧನ್ಯವಾದ ತಿಳಿಸುತ್ತಿದ್ದಾರೆ ಅಭಿಮಾನಿಗಳು.

Latest Videos
Follow Us:
Download App:
  • android
  • ios