ಫೆ.19ರಂದು ಬಿಡುಗಡೆಯಾಗುತ್ತಿರುವ ಪೊಗರು ಸಿನಿಮಾ ಸದ್ಯಕ್ಕೆ ಟಾಕ್‌ ಆಫ್‌ ದಿ ಟೌನ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂತರ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವುದು ಧ್ರುವ ಸರ್ಜಾ ಅಂದ್ರೆ ತಪ್ಪಾಗದು. ಕನ್ನಡಿಗರು ಹಾಗೂ ಅಭಿಮಾನಿಗಳ ಮೇಲೆ ಭರವಸೆ ಇಟ್ಟು ನಿರ್ಮಾಕರು ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಲಾಕ್‌ಡೌನ್‌ ನಂತರ ರಿಲೀಸ್‌ ಆಗುತ್ತಿರುವ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ಜೂನಿಯರ್ ಚಿರು ಸಾಥ್‌ ಕೊಟ್ಟು ಮತ್ತಷ್ಟು ಸ್ಪೆಷಲ್ ಆಗಿ ಪ್ರಚಾರ ಕಾರ್ಯಕ್ಕೆ ಕೈ ಜೊಡಿಸಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಪೊಗರು ಚಿತ್ರದ ರಿಲೀಸ್‌ ಡೇಟ್‌ ಹೊಂದಿರುವ ಮಾಸ್‌ ಫಿಲ್ಟರ್‌ ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗಲೇ ಅಭಿಮಾನಿಗಳು ಫಿಲ್ಟರ್‌ನೂ ಕೂಡ ವೈರಲ್ ಮಾಡಿದ್ದಾರೆ. ಇದೇ ಫಿಲ್ಟರ್ ಬಳಸಿ ಮೇಘನಾ ರಾಜ್‌ ಪುತ್ರನಿಂದ ವಿಡಿಯೋ ಮಾಡಿಸಿದ್ದಾರೆ. ಈ ಮೂಲಕ ಚಿಕ್ಕಪ್ಪ ಧ್ರುವ ಸರ್ಜಾಗೆ ಸಿಂಬಾ ಸಾಥ್‌ ನೀಡಿದ್ದಾನೆ.

ಮೂರುವರೆ ತಿಂಗಳ ಬಳಿಕ ಜೂನಿಯರ್ ಚಿರು ಮುಖ ದರ್ಶನ! 

'ನಮ್ಮ ಪುಟ್ಟ ಕಂದಮ್ಮ ಅವರ ಅಂಕಲ್‌ ಧ್ರುವ ಹೊಸ ಚಿತ್ರಕ್ಕೆ ವಿಶ್ ಮಾಡುತ್ತಿದ್ದಾನೆ. ಇಡೀ ವಾರ ರಿಲೀಸ್ ಆಗುತ್ತಿದೆ ಮಿಸ್ ಮಾಡಬೇಡಿ,' ಎಂದು ಮೇಘನಾ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಜೂನಿಯರ್ ನೀಲಿ ಟೀ-ಶರ್ಟ್‌ ಧರಿಸಿದ್ದಾನೆ. ನಟಿ ಸಂಯುಕ್ತಾ ಹೊರನಾಡ್, ನಿರ್ದೇಶಕ ಚೈತನ್ಯ ಸೇರಿದಂತೆ ಹಲವರು ವಿಡಿಯೋ ಕಾಮೆಂಟ್ ಮಾಡಿದ್ದಾರೆ. 

ಫೆ.14 ಸರ್ಜಾ ಕುಟುಂಬಕ್ಕೆ ಸ್ಪೆಷಲ್ ದಿನವಾಗಿತ್ತು. ಜೂನಿಯರ್ ಸಿ ಫೋಟೋ ರಿಲೀಸ್ ಹಾಗೂ ಪೊಗರು ಚಿತ್ರದ ಆಡಿಯೋ ಲಾಂಚ್‌ ಮಾಡಲಾಗಿತ್ತು.

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)