ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎನ್ನುವ ರಾಯನ್; ಮೇಘನಾ ಪುತ್ರನ ಕ್ಯೂಟ್ ವಿಡಿಯೋ ವೈರಲ್

ರಾಯನ್ ರಾಜ್ ಸರ್ಜಾ ಫೋಟೋ ಮತ್ತು ವಿಡಿಯೋ ಆಗಾಗ ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಮೇಘನಾ ಶೇರ್ ಮಾಡಿರುವ ಹೊಸ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೌದು ಮುದ್ದಾದ ರಾಯನ್ ಅಮ್ಮ ಎಂದು ಕರೆಯುತ್ತಿರುವ ವಿಡಿಯೋ ಇದಾಗಿದೆ. 

meghana Raj son Raayan raj sarja says appa video viral sgk

ಸ್ಯಾಂಡಲ್ ವುಡ್‌ ನಟಿ ಮೇಘನಾ ರಾಜ್(Meghana Raj) ಸದ್ಯ ಮುದ್ದಾದ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ(Raayan raj sarja) ಕೂಡ ಅಮ್ಮನ ಹಾಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ಮೇಘನಾ  ಪುತ್ರನ ವಿಡಿಯೋ ಅಥವಾ ಫೋಟೋ ಶೇರ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ರಾಯನ್ ರಾಜ್ ಸರ್ಜಾ ಫೋಟೋ ಮತ್ತು ವಿಡಿಯೋ ಆಗಾಗ ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಮೇಘನಾ ಶೇರ್ ಮಾಡಿರುವ ಹೊಸ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೌದು ಮುದ್ದಾದ ರಾಯನ್ ಅಮ್ಮ ಎಂದು ಕರೆಯುತ್ತಿರುವ ವಿಡಿಯೋ ಇದಾಗಿದೆ. 

ಮೇಘನಾ ಮಗನನ್ನು ಕೂರಿಸಿಕೊಂಡು ಅಮ್ಮಾ ಎಂದು ಹೇಳಿಕೊಡುತ್ತಾರೆ. ಮೊದಲ ಬಾರಿ ಅಮ್ಮ ಅಂತ ರಾಯನ್ ಕರೆಯುತ್ತಾನೆ. ಬಳಿಕ ಮತ್ತೊಮ್ಮೆ ಮೇಘನಾ ಅಮ್ಮ ಅಂತ ಹೇಳಿಕೊಡುತ್ತಾರೆ ಆದರೆ ರಾಯನ್ ಅಪ್ಪ ಎಂದು ಕರೆಯುತ್ತಾನೆ. ಈ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದೆ. ರಾಯನ್ ಮುದ್ದಾಗಿ ಮಾತನಾಡುವ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬಂದಿದೆ.

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

ಅಂದಹಾಗೆ ರಾಯನ್ ಅಮ್ಮ ಎನ್ನುವುದಕ್ಕಿಂತ ಮೊದಲು ಅಪ್ಪ ಎಂದು ಕರೆಯುತ್ತಾನೆ ಅಂತ ಮೇಘನಾ ಈ ಹಿಂದೆ ಬಹಿರಂಗ ಪಡಿಸಿದ್ದರು. ಮೇಘನಾ ಕಿರುತರೆಯ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಮೇಘನಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದರು. ಪತಿ ಚಿರು ನಿಧನದ ಬಳಿಕ ಮೇಘನಾ ಡಾನ್ಸ್ ಶೋ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. 'ಈ ಶೋ ಪ್ರಾರಂಭದಲ್ಲಿ ಮಗ  ರಾಯನ್ ಅಪ್ಪ ಅಂತ ಮಾತ್ರ ಕರೆಯುತ್ತಿದ್ದ ಇದೀಗ ಶೋ ಕೊನೆಯ ಹಂತಕ್ಕೆ ಬಂದಿದೆ ಮಗ ಅಮ್ಮ ಎಂದು ಕರೆಯುತ್ತಾನೆ' ಎಂದಿದ್ದರು. 

ಡಾನ್ಸಿಂಗ್ ವೇದಿಕೆಯಲ್ಲಿ ಚಿರು ಪುತ್ರ; ಮಗನ ಬಾಯಲ್ಲಿ ಅಮ್ಮ ಪದ ಕೇಳಿ ಸಂಭ್ರಮಿಸಿದ ಮೇಘನಾ

ಡಾನ್ಸ್ ಕಾರ್ಯಕ್ರಮಕ್ಕೆ ರಾಯನ್ ಎಂಟ್ರಿ ಕೊಟ್ಟಿದ್ದನು. ಡಾನ್ಸ್ ಶೋನಲ್ಲಿ ರಾಯನ್ ಅಮ್ಮ ಅಂತ ಕರೆಯುವ ಮೂಲಕ ಗಮನ ಸೆಳೆದಿದ್ದರು. ಪುತ್ರನ ಬಾಯಲ್ಲಿ ಅಮ್ಮ ಪದ ಕೇಳಿ ಮೇಘನಾ ಫುಲ್ ಖುಷ್ ಆಗಿದ್ದರು. ಮೇಘನಾ ಮತ್ತ ಪುತ್ರನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರಾಯನ್ ಮತ್ತೆ ಅಪ್ಪ ಎಂದು ಕರೆಯುತ್ತಿರುವ ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ. 

ಇತ್ತೀಚಿಗಷ್ಟೆ ಚಿರಂಜೀವಿ ಸರ್ಜಾ ಪುಣ್ಯತಿಥಿ ಮಾಡಲಾಗಿದೆ. ಚಿರು ಪುಣ್ಯತಿಥಿ ವೇಳೆ ರಾಯನ್ ರಾಜ್ ಸರ್ಜಾ ವಿಡಿಯೋಗಳು ವೈರಲ್ ಆಗಿತ್ತು. ಅಪ್ಪ ಎಲ್ಲಿ ಅಂತ ಕೇಳಿದ್ರೆ ರಾಯನ್ ಚಿರು ಫೋಟೋ ತೋರಿಸುತ್ತಿದ್ದ. ಅಪ್ಪನ ಫೋಟೋ ನೋಡಿ ರಾಯನ್ ತಂದೆ ಯಾರೆಂದು ಹೇಳುತ್ತಾನೆ. ಮೇಘನಾ ಗರ್ಭಿಣಿಯಾಗಿದ್ದಾಗ ಪತಿ ಚಿರುಸರ್ಜಾರನ್ನು ಕಳೆದುಕೊಂಡರು. ಪತಿಯ ಹಠಾತ್ ಅಗಲಿಕೆ ಮೇಘನಾಗೆ ಬರಸಿಡಿಲು ಬಡಿದಂತೆ ಆಗಿತ್ತು. ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ಮೇಘನಾ ಬಾಳಿಗೆ ರಾಯನ್ ರಾಜ್ ಸರ್ಜಾ ಸಂತೋಷ ಹೊತ್ತು ತಂದಿದ್ದಾರೆ. ರಾಯನ್ ಮೇಘನಾ ಬದುಕಿಗೆ ಬೆಳಕಾಗಿ ಬಂದಿದ್ದಾನೆ. 

ಮುತ್ತಜ್ಜಿ ಜೊತೆ ಹೂ ಹಿಡಿದು ಆಟವಾಡಿದ ರಾಯನ್ ರಾಜ್ ಸರ್ಜಾ!

ಮೇಘನಾ ಸದ್ಯ ಮತ್ತೆ ಬಣ್ಣದ ಲೋಕಕ್ಕೆ ವಾಪಾಸ್ ಆಗುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮೇಘನಾ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದಾರೆ. ಈಗಾಗಲೇ ಮೇಘನಾ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಚಿರುಪತ್ನಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.         

Latest Videos
Follow Us:
Download App:
  • android
  • ios