ಸ್ಯಾಂಡಲ್‌ವುಡ್‌ ಮನೆ ಮಗಳು ಮೇಘನಾ ರಾಜ್‌ ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಮೊದಲ ಬಾರಿ ಪುತ್ರ ಚಿಂಟು ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಪುತ್ರನ ಕೈ ಬೆರಳುಗಳು ಮಾತ್ರ ಕಾಣಿಸುತ್ತಿದ್ದು, ಎಮೋಷನಲ್ ಕನೆಕ್ಷನ್ ಕಾಣಿಸುತ್ತದೆ.

ಮೇಘನಾ ರಾಜ್‌ ನೆಮ್ಮದಿ ಹಾಳು ಮಾಡುತ್ತಿದೆ ಆ ಒಂದು ವಿಷಯ? 

ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮಕೊಟ್ಟ ಮೇಘನಾ ರಾಜ್‌ ಇದೀಗ ಮೊದಲ ಹಬ್ಬದ ಸಂಭ್ರಮದಲ್ಲಿದ್ದಾರೆ. ಜೂನಿಯರ್ ಚಿರು ಹುಟ್ಟಿದ ದಿನವೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿದ್ದವು. ಮೇಘನಾ ಮಾತ್ರ ಇದುವರೆಗೂ ಯಾವ ಫೋಟೋವನ್ನೂ ಶೇರ್ ಮಾಡಿ ಕೊಂಡಿರಲಿಲ್ಲ. ತನ್ನ ಮಗನ ಬಗ್ಗೆ ಏನೇ ಶೇರ್ ಮಾಡಿಕೊಂಡರೂ ಸ್ಪೆಷಲ್ ಆಗಿ ಮಾಡಬೇಕು ಎಂಬುದು ಮೇಘನಾ ಪ್ಲಾನ್ ಅನ್ಸುತ್ತೆ. ಯಾಕಂದ್ರೆ ಈಗ ಅಪ್ಲೋಡ್ ಮಾಡುವ ಫೋಟೋ ತುಂಬಾನೇ ಡಿಫರೆಂಟ್ ಆಗಿದೆ. 

ಮೇಘನಾ ಪೋಸ್ಟ್‌:
'ಟೈಂ ಆಫ್ ಮಿರಾಕಲ್. ನನ್ನ ಪುಟಾಣಿ ಗಿಫ್ಟ್‌ ತನ್ನ ಬೆರಳಿಂದ ನನ್ನ ಕೈ ಹಿಡಿದಿದೆ. ನಿನಗೆ ಎಷ್ಟು ಥ್ಯಾಂಕ್ಸ್‌ ಹೇಳಿದರೂ ಸಾಲದು ಬೇಬಿ ಮಾ. ನೀನು ಕೊಟ್ಟ ಬೆಸ್ಟ್‌ ಗಿಫ್ಟ್‌ ಇದು. We Love You.ನಿನಗಾಗಿ ಕಾಯುತ್ತಿರುವೆವು' ಎಂದು ಮೇಘನಾ ರಾಜ್‌ ಬರೆದು ಕೊಂಡಿದ್ದಾರೆ.

ಸಿಹಿ ಸುದ್ದಿ: ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೇಘನಾ ರಾಜ್! 

ಮೇಘನಾ ರಾಜ್‌ ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ಬೇಬಿ ಮಾ ಎಂದೇ ಕರೆಯುತ್ತಿದ್ದರು. ಅವರಿಬ್ಬರ ಪ್ರೀತಿಯ ಸಂಕೇತವೇ ಸೆಲೆಬ್ರಿಟಿ ಕಿಡ್ ಚಿಂಟು. ಮೇಘನಾ ಹೀಗೆ ಪ್ರತಿ ಕ್ಷಣವನ್ನೂ ಸಂತೋಷವಾಗಿ ಕಳೆಯಬೇಕು ಎಂಬುದು ಅಭಿಮಾನಿಗಳು ಹಾಗೂ ಕಲಾ ಬಂಧುಗಳ ಆಸೆ

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)