ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಕಿಂಗ್ ಅರ್ಜುನ್ ಸರ್ಜಾ ಹಾಗೂ ಹಿರಿಯ ನಟ ರಾಜೇಶ್ ಪುತ್ರಿ ಆಶಾ ರಾಣಿ ಹಲವು ವರ್ಷಗಳ ಕಾಲ ಪ್ರೀತಿಸಿ, ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಹಾಗೂ ಮದುವೆ ಮಾಡಿಕೊಂಡವರು. ಈ ಜೋಡಿಯ ನಿಶ್ಚಿತಾರ್ಥ ಸಂಭ್ರಮದ ಫೋಟೋ ಶೇರ್ ಮಾಡಿಕೊಂಡ ಅನು ಪ್ರಭಾಕರ್‌ ಎಲ್ಲರಿಗೂ ಹಳೆಯ ಸುಮಧುರ ನೆನಪುಗಳು ಮರುಕಳಿಸುವಂತೆ ಮಾಡಿದ್ದಾರೆ.

ಅನು ಪೋಸ್ಟ್:
ಹಿರಿಯ ನಟಿ ಗಾಯಿತ್ರಿ ಪ್ರಭಾಕರ್ ಪುತ್ರಿ ಅನು ಪ್ರಭಾಕರ್ ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಅಂದಿನಿಂದಲೂ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನ ಜೊತೆಯೂ ಉತ್ತಮ ಭಾಂದವ್ಯ ಹೊಂದಿದ್ದಾರೆ. ಅವರ ಮನೆ ಮಗಳಂತೆ ಪ್ರತಿ ಅದ್ಭುತ ಕ್ಷಣಗಳಲ್ಲಿಯೂ ಭಾಗಿಯಾಗುತ್ತಾರೆ. ಹಾಗೆಯೇ ಅರ್ಜುನ್‌ ಹಾಗೂ ಆಶಾ ರಾಣಿ ನಿಶ್ಚಿತಾರ್ಥದ  ಫೋಟೋ ಶೇರ್ ಮಾಡಿಕೊಂಡ ಅನು, ಆಗಿನ್ನೂ ಪುಟ್ಟ ಹುಡುಗಿ.

'ನನ್ನ ಅಕ್ಕ ನಿವೇದಿತಾ ಹಾಗೂ ಭಾವ ಸರ್ಜುನ್ ಅವರ ನಿಶ್ಚಿತಾರ್ಥ ಫೋಟೋ. ಭಾವನ ತೊಡೆ ಮೇಲೆ ಚಿರು. ಅಕ್ಕನ ತೊಡೆ ಮೇಲೆ ನಾನು. ಬೆಲೆ ಕಟ್ಟಲಾಗದ ಫೋಟೋ. ಚಿರು ನೀನು ಎಲ್ಲಿದ್ದರೂ ಸಂತೋಷವಾಗಿ, ನೆಮ್ಮದಿಯಾಗಿರುವೆ ಎಂದು ಭಾವಿಸುವೆ,' ಎಂದು ಅನು ಪ್ರಭಾಕರ್  ಹಳೆಯ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.

ಮೇಘನಾ ರಾಜ್‌ ನೆಮ್ಮದಿ ಹಾಳು ಮಾಡುತ್ತಿದೆ ಆ ಒಂದು ವಿಷಯ? 

ಈ ಫೋಟೋವನ್ನು ಮೇಘನಾ ರಾಜ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು 'Thank You ಅನು ಪ್ರಭಾಕರ್‌ ಈ ಫೋಟೋ ಕಳುಹಿಸಿದ್ದಕ್ಕೆ. ಬೆಲೆ ಕಟ್ಟಲಾಗದ ಚಿತ್ರವಿದು,' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಚಿರು ನೋಡಿ ಅಭಿಮಾನಿಗಳು ಜೂನಿಯರ್ ಚಿರು ಹೀಗೆ ಇರುವುದು ಎಂದು ಕಾಮೆಂಟ್ ಮಾಡಿದ್ದಾರೆ.

ನನ್ನ ಮಗನ ಜೊತೆ ನಿಮ್ಮ ಮಗಳು ಸುರಕ್ಷಿತ; ಮೇಘನಾ ರಾಜ್ ಕೊಟ್ಟ ಮಾತು! 

ಈ ಫೋಟೋಗೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸಹ ರಿಯಾಕ್ಟ್ ಮಾಡಿದ್ದಾರೆ. ಕೆಲವರು ಅರ್ಜುನ್ ಸರ್ಜಾ ಪತ್ನಿ ನಿಮ್ಮ ಅಕ್ಕನೆಂದು ಗೊತ್ತಿರಲಿಲ್ಲವೆಂದೂ ಹೇಳಿದ್ದಾರೆ. ಆದರೆ, ಗಾಯತ್ರಿ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ವಾಯ್ಸ್ ಓವರ್ ಕಲಾವಿದೆಯಾಗಿ ಛಾಪು ಮೂಡಿಸಿದವರು. ಸಹಜವಾಗಿಯೇ ಹಿರಿಯ ಕಲಾವಿದರೊಂದಿಗೆ ಅವರು ಅತ್ಯುತ್ತಮ ಬಾಂಧವ್ಯ ಕಾಪಾಡಿಕೊಂಡವರು. ಹಾಗಾಗಿ ಅನು ಪ್ರಭಾಕರ್ ಸಹ ಹಿರಿಯ ಕಲಾವಿದರೊಂದಿಗೆ ಬೆಳೆದಿದ್ದು, ಆಶಾರಾಣಿ ಹಾಗೂ ಅರ್ಜುನ್ ಸರ್ಜಾ ಅವರನ್ನು ಅಕ್ಕಾ-ಭಾವನೆಂದೇ ಸಂಬೋಧಿಸಿದ್ದಾರೆ.