Asianet Suvarna News Asianet Suvarna News

ಕೂತ್ಕೊಂಡು ಮಜಾ ನೋಡೋಕೆ ಕಾಯುತ್ತಿದ್ದರು; ಸರ್ಜಾ ಫ್ಯಾಮಿಲಿ ಜೊತೆ ಮನಸ್ತಾಪ ಬಗ್ಗೆ ಮೇಘನಾ ರಾಜ್ ಕ್ಲಾರಿಟಿ!

ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್‌ ಕುಟುಂಬದ ನಡುವೆ ಮನಸ್ತಾಪವಿದೆ? ಚಿರು ಅಗಲಿದೆ ಮೇಲೆ ಹರಿದಾಡುತ್ತಿದ್ದ ಮಾತುಗಳಿಗೆ ಸ್ಪಷ್ಟನೆ ಕೊಟ್ಟ ನಟಿ.... 

Meghana Raj clarifie about rumours about misunderstanding in Sarja and sundar raj family vcs
Author
First Published Jul 25, 2023, 11:27 AM IST

ಮಲಯಾಳಂ ಸಿನಿಮಾರಂಗದಲ್ಲಿ ಮಿಂಚಿ ಚಂದನವನಕ್ಕೆ ಕಾಲಿಟ್ಟ ಮೇಘನಾ ರಾಜ್‌ ತಮ್ಮ ಮುಂದಿನ ಸಿನಿಮಾ ತತ್ಸಮ ತದ್ಭವ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪುತ್ರ, ಫ್ಯಾಮಿಲಿ, ಲೈಫ್‌ಸ್ಟೈಲ್ ಮತ್ತು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತುಂಬಾ ದೊಡ್ಡ ಸುದ್ದಿಯಾಗಿದ್ದ ಫ್ಯಾಮಿಲಿ ವಿಚಾರದ ಬಗ್ಗೆನೂ ಸ್ಪಷ್ಟನೆ ಕೊಟ್ಟಿದ್ದಾರೆ. 

ಹೌದು! ಚಿರಂಜೀವಿ ಸರ್ಜಾ ಅಗಲಿದೆ ಮೇಲೆ ಮೇಘನಾ ರಾಜ್ ತವರು ಮನೆ ಸೇರಿಕೊಂಡಿದ್ದಾರೆ, ಅತ್ತೆ ಮಾವ ಜೊತೆ ಮಾತನಾಡುವುದಿಲ್ಲ, ಧ್ರುವ ಸರ್ಜಾ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಹೀಗಾಗಿ ಬೆಳ್ಳಿ ತೊಟ್ಟಿಲು ಬಳಲುತ್ತಿಲ್ಲ ಹಾಗೆ ಹೀಗೆ ಎಂದು ಸುದ್ದಿಯಾಗಿತ್ತು. ಈ ವಿಚಾರದ ಬಗ್ಗೆ ಇತ್ತೀಚಿಗೆ ನಡೆದ ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಧ್ರುವ ಸರ್ಜಾ ಇನ್ನೂ ಎಳಸು ಅಷ್ಟು ಶಕ್ತಿ ಇಲ್ಲ, ರಾಯನ್‌ಗೂ ಅವನಿಗೂ ವ್ಯತ್ಯಾಸವಿಲ್ಲ: ಮೇಘನಾ ರಾಜ್

'ಸರ್ಜಾ ಕುಟುಂಬ ಮತ್ತು ರಾಜ್ ಕುಟುಂಬದ ನಡುವೆ ಮನಸ್ತಾಪ ಇದೆ ಅನ್ನೋದಕ್ಕೆ ನನ್ನ ಬಳಿ ಉತ್ತರವಿಲ್ಲ ಈ ವಿಚಾರವಾಗಿ ಯಾವತ್ತೂ ಕ್ಲಾರಿಫೈ ಮಾಡಿಲ್ಲ ಹಾಗೂ ಮಾಡುವ ಅಗತ್ಯವೂ ಬಂದಿಲ್ಲ...ನಿಜ ಹೇಳಬೇಕು ಅಂದ್ರೆ ಸ್ಪಷ್ಟನೆ ನೀಡಲೂ ಏನೂ ಇಲ್ಲ. ಎರಡು ಕುಟುಂಬಗಳು ತುಂಬಾ ದುಖಃದಲ್ಲಿದ್ದಾಗ ನಮಗೆ ಸಪೋರ್ಟಿವ್ ಅಗಿರುವ ಬದಲಾಗಿ ನಮ್ಮಳಿ ಎಂದು ಅಲ್ಲಿಂದ ಏನೋ ಕೊಂಕು ಮಾಡುವುದು ಅಥವಾ ಅಲ್ಲಿಂದ ಏನೋ ತಿಳಿದುಕೊಂಡು ಬಂದು ನಮ್ಮ ಬಳಿ ಕೊಂಕು ಮಾಡುವುದು ..ಹೀಗೆ ಇರದರಿಂದ ಮಜಾ ನೋಡುವುದಕ್ಕೆ ಬಹಳಷ್ಟು ಜನರು ಕಾಯುತ್ತಿದ್ದರು ಪಾಪ ಅವರಿಗೆ ಏನೂ ಸಿಗಲಿಲ್ಲ. ಬಹಳ ಸಲ ಹೇಳಿರುವ ನನ್ನ ಮತ್ತು ಧ್ರುವ ಸರ್ಜಾ ಬಾಂಡ್ ಹೇಗಿದೆ ಎಂದು ಕೂತು ಬಿಡಿಸಿ ಜನರಿಗೆ ಅರ್ಥ ಮಾಡಿಸುವ ಅಗತ್ಯವಿಲ್ಲ ..ಏನೋ ಹೇಳ್ಕೋಬೇಕು ಜನರ ತಲೆಗೆ ಹಾಕಬೇಕು ಅಂತ ಏನೂ ಇಲ್ಲ ಏಕೆಂದು ಇದು ನನ್ನ ಪರ್ಸನಲ್ ವಿಚಾರ ನನ್ನ ಫ್ಯಾಮಿಲಿ ವಿಚಾರ' ಎಂದು ಮೇಘನಾ ರಾಜ್ ಹೇಳಿದ್ದಾರೆ.

ಎರಡನೇ ಮದ್ವೆ ಬಗ್ಗೆ ಯಾರೂ ಬಂದು ಕೇಳಿಲ್ಲ; ತುಂಬಾ ಕ್ಲಿಯರ್ ಉತ್ತರ ಕೊಟ್ಟ ಮೇಘನಾ ರಾಜ್!

' ಪ್ರತಿ ದಿನ ನಾನು ಅಮ್ಮನ ಜೊತೆ ಹೀಗಿದ್ದೀನಿ ಮಾತನಾಡುತ್ತಿಲ್ಲ ಜಗಳ ಮಾಡುತ್ತಿರುವೆ ಖುಷಿಯಾಗಿರುವೆ ಅಂತ ಇನ್‌ಸ್ಟಾಗ್ರಾಂನಲ್ಲಿ ಹಾಕಬೇಕಾ? ನನ್ನ ತಂದೆ ತಾಯಿ ಜೊತೆ ಹೇಗಿರುವ ಅದೇ ರೀತಿ ಧ್ರುವ ನನಗೆ ತಮ್ಮ ...ನನ್ನ ತಮ್ಮನ ಜೊತೆ ಒಂದು ದಿನ ಜಗಳ ಮಾಡುತ್ತೀನಿ ಒಂದು ದಿನ ಸಿನಿಮಾ ನೋಡಲು ಹೋಗುತ್ತೀನಿ ಅಥವಾ ಮತ್ತೊಂದು ದಿನ ಅವನಿಗೆ ನನ್ನ ಮೇಲೆ ಏನೋ ಕಿರಿಕಿರಿ ಅನ್ಸುತ್ತೆ ಇದೆಲ್ಲಾ ಕಾಮನ್. ಆದರೆ ಇದನ್ನು ಗ್ಲೋರಿಫೈ ಮಾಡಿ ಇದರಿಂದ ಏನೋ ಪಡೆಯಬಹುದು ಅಂದುಕೊಂಡಿರುವ ಜನರಿಗೆ ಏನೂ ಸಿಕ್ಕಿಲ್ಲ. ಇವತ್ತಿಗೂ ಇನ್ನು ಮುಂದೆನೂ ನಾವು ಹೀಗಿದ್ದೀವಿ ನಮ್ಮ ಫ್ಯಾಮಿಲಿ ಹೀಗೆ ಎಂದು ಕ್ಯಾಮೆರಾ ಎದುರು ಹೇಳುವ ಅಗತ್ಯವಿಲ್ಲ ನಾನು ಹೇಗೆ ನಾವು ಹೇಗಿದ್ದೀವಿ ಎಂದು ನಮ್ಮ ತಂದೆ ತಾಯಿಗೆ ಗೊತ್ತು ನಮ್ಮ ಅತ್ತೆ ಮಾವ ಅವರಿಗೆ ಗೊತ್ತು ಅಷ್ಟೇ ನನಗೆ ಬೇಕಾಗಿರುವುದು. ಇಲ್ಲಿ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ' ಎಂದಿದ್ದಾರೆ ಮೇಘನಾ ರಾಜ್. 

Follow Us:
Download App:
  • android
  • ios