ರಾಜ್ಯದ ಮುಂದಿನ ಹಣಕಾಸು ಮಂತ್ರಿ ವಿಜಯ ಮಲ್ಯ ಆಗಬೇಕು ಎಂದಿದ್ದಾರೆ ನಟಿ ಮೇಘನಾ ರಾಜ್. ಅಷ್ಟಕ್ಕೂ ಅವರು ಹೀಗೆ ಹೇಳಿದ್ದು ಏಕೆ ನೋಡಿ. ಇಲ್ಲಿದೆ ವಿಡಿಯೋ...
ಸ್ಯಾಂಡಲ್ವುಡ್ ತಾರೆ ಮೇಘನಾ ರಾಜ್ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಮದುವೆ ನಂತರ ಲೈಫ್ ಫುಲ್ ಕಲರ್‌ಫುಲ್ ಅಂದುಕೊಳ್ಳುವಷ್ಟರಲ್ಲಿಯೇ ಬರಸಿಡಿಲು ಎರಗಿತ್ತು. ಗರ್ಭಿಣಿಯಾಗಿದ್ದಾಗಲೇ ಪತಿ ಚಿರಂಜೀವಿ ಸರ್ಜಾ ತೀರಿಕೊಂಡರು. ಗರ್ಭಿಣಿ ಆಗಿದ್ದ ಸಮಯದಿಂದ ಹಿಡಿದು ಇದುವರೆಗೂ ಮೇಘನಾ ರಾಜ್‌ಗೆ ಸಪೋರ್ಟ್ ಆಗಿ ನಿಂತಿರುವುದು ಫ್ಯಾಮಿಲಿ ಮತ್ತು ಸ್ನೇಹಿತರು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆದರು. ವರ್ಷಗಳ ಬಳಿಕ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ ಮೇಘನಾ ರಾಜ್. ಇದೀಗ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ.
ನಟಿ ಮೇಘನಾ ರಾಜ್ ಅವರು ಆರ್.ಜೆ. ಅಮಿತ್ ಅವರ ಜೊತೆಗಿನ ಷೋನಲ್ಲಿ ಕೆಲವೊಂದು ತಮಾಷೆಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಷ್ಟಕ್ಕೂ ಅಮಿತ್ ಅವರು, ನಾನು ಹೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರ ಕೊಡಬೇಕು ಎಂದಿದ್ದಾರೆ. ಆದ್ದರಿಂದ ಅವರು ಕೇಳಿದ ಪ್ರಶ್ನೆಗಳಿಗೆ ಮೇಘನಾ ಏನೇನೋ ತಮಾಷೆಯ ಉತ್ತರಗಳನ್ನು ಕೊಟ್ಟಿದ್ದಾರೆ. ನಿಮ್ಮ ಮನೆಯ ಮಕ್ಕಳಿಗೆ ಯಾವ ಲಾಲಿ ಹಾಡು ಹಾಡುವುದು ಎಂದು ಪ್ರಶ್ನಿಸಿದಾಗ, ಮೇಘನಾ ಅವರು, ಓಡ್ರೋ ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ ಅಂತ ಮಲಗಿಸ್ತೀವಿ ಎಂದಿದ್ದಾರೆ. ಬಳಿಕ ಕರ್ನಾಟಕದ ಮುಂದಿನ ಹಣಕಾಸು ಸಚಿವರು ಯಾರಾಗಿರಬೇಕು ಎಂದು ಕೇಳಿದಾಗ ಮೇಘನಾ ಅವರು, ವಿಜಯ ಮಲ್ಯ ಹೆಸರು ತೆಗೆದುಕೊಂಡಿದ್ದಾರೆ. ಮುಂದಿನ ಸೀಸನ್ ಆರ್ಸಿಬಿಯವರ ಟ್ಯಾಗ್ಲೈನ್ ಏನು ಆಗಿರುತ್ತದೆ ಎಂದು ಕೇಳಿದಾಗ ನಟಿ, ಅಮುಕು ಡುಮುಕು ಅಮಾಲ್ ಡುಮಾಲ್ ಎಂದಿದ್ದಾರೆ. ಮುಂದಿನ ಸೀಸನ್ ಫಾರ್ಮುಲಾ-1ನಲ್ಲಿ ಭಾರತದಿಂದ ಯಾರು ಪ್ರತಿನಿಧಿಸುತ್ತಾರೆ ಎನ್ನುವ ಪ್ರಶ್ನೆಗೆ ನಟಿ ಮೇಘನಾ ರಾಜ್ ಆಟೋ ಡ್ರೈವರ್ಸ್ ಎಂದಿದ್ದಾರೆ.
ಬೆಂಗಳೂರಿನಲ್ಲಿ ಯಾವ ಏರಿಯಾ ಟೂರಿಸ್ಟ್ ಸ್ಪಾಟ್ ಆಗಿ ಬದಲಾಗಬೇಕು ಎಂದು ನೆಟ್ಟಿಗರಿಗೆ ನಟಿ ಪ್ರಶ್ನಿಸಿದ್ದು, ಇದಕ್ಕೆ ಥರಹೇವಾರಿ ಕಮೆಂಟ್ಸ್ ಬಂದಿವೆ. ಇನ್ನು ನಟಿ ಕುರಿತು ಹೇಳುವುದಾದರೆ, ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ಬಹುಭಾಷಾ ನಟಿಯಾಗಿರುವ ಇವರು ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ನಾಟಕದ ನಂಟು ಹತ್ತಿತ್ತು. ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ `ಕೃಷ್ಣಲೀಲೈ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದವರು. ಆದರೆ ದುರದೃಷ್ಟವಶಾತ್ ಅದು ತೆರೆ ಕಾಣಲಿಲ್ಲ. ನಂತರ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು.
2010ರಲ್ಲಿ ಬಿಡುಗಡೆಗೊಂಡ ಯೋಗೇಶ್ ಚಿತ್ರ `ಪುಂಡ' ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಆದರೆ ಇವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟದ್ದು, ಹಾಗೂ ಇವರ ಚಿತ್ರ ರಂಗಕ್ಕೆ ಬ್ರೇಕ್ ನೀಡಿದ್ದು ಮಾಲಿವುಡ್. ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ' ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್',`ಆಟಗಾರ' ಮುಂತಾದ ಹಿಟ್ ಸಿನಿಮಾ ಕೊಟ್ಟಿದ್ದಾರೆ.
