Asianet Suvarna News Asianet Suvarna News

ಕಗ್ಗತ್ತಲಿನಲಿ, ಸುರಂಗದಾಳದಲೂ ಮಿನುಗುವ ಬೆಳಕು ನೀನು: 7ನೇ ವಿವಾಹ ವಾರ್ಷಿಕೋತ್ಸವಕ್ಕೆ ಭಾವುಕ ಪೋಸ್ಟ್‌

ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ಅವರ ಏಳನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಟಿ ಭಾವುಕ ಪೋಸ್ಟ್‌ ಶೇರ್‌ ಮಾಡಿದ್ದಾರೆ. 
 

Meghana Raj shared an emotional post on the occasion of  seventh wedding anniversary suc
Author
First Published May 3, 2024, 1:19 PM IST

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ಬಹುಭಾಷಾ ನಟಿಯಾಗಿರುವ ಇವರು ಕೆಲವು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ನಾಟಕದ ನಂಟು ಹತ್ತಿತ್ತು.  ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ `ಕೃಷ್ಣಲೀಲೈ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದವರು. ಆದರೆ ದುರದೃಷ್ಟವಶಾತ್‌ ಅದು ತೆರೆ ಕಾಣಲಿಲ್ಲ. ನಂತರ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. 2010ರಲ್ಲಿ ಬಿಡುಗಡೆಗೊಂಡ ಯೋಗೇಶ್ ಚಿತ್ರ `ಪುಂಡ' ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಆದರೆ ಇವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟದ್ದು, ಹಾಗೂ ಇವರ ಚಿತ್ರ ರಂಗಕ್ಕೆ  ಬ್ರೇಕ್ ನೀಡಿದ್ದು ಮಾಲಿವುಡ್‌.  ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ' ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್',`ಆಟಗಾರ' ಮುಂತಾದ ಹಿಟ್ ಸಿನಿಮಾ ಕೊಟ್ಟಿದ್ದಾರೆ.

ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ  ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆದರು. ವರ್ಷಗಳ ಬಳಿಕ  ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ ಮೇಘನಾ ರಾಜ್‌.  ಸ್ನೇಹಿತ ಪನ್ನಗಾಭರಣ ಸ್ವತಃ ಮೇಘನಾಗಾಗಿ ತತ್ಸಮ ತದ್ಭವ ಸಿನಿಮಾ ನಿರ್ಮಾಣ ಮಾಡಿದರು. ಪ್ರಜ್ವಲ್‌ ದೇವರಾಜ್‌ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ಈಗ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸುತ್ತಿರುವ ಅಮರ್ಥ ಚಿತ್ರದಲ್ಲಿ ಅವರಿಗೆ ಜೋಡಿಯಾಗಿದ್ದಾರೆ. ವಿನಯ್ ಪ್ರೀತಂ ಮತ್ತು ಗುರು ಹೆಗ್ಡೆ ಈ ಚಿತ್ರದ ನಿರ್ದೇಶಕರು.

ಕ್ರೌರ್ಯ, ದೌರ್ಜನ್ಯದ ಪರಮಾವಧಿ ಎನ್ನಲಾದ 'ಅನಿಮಲ್‌' ಹೊಗಳಿದ ಮೇಘನಾ: ನಟಿ ಕೊಟ್ಟ ಕಾರಣ ಹೀಗಿದೆ...

ಮೇ 2 ಈ ಜೋಡಿ ಮದುವೆಯಾಗಿದ್ದು. ನಿನ್ನೆಗೆ 7 ಮುಗಿದಿದೆ. ಪತಿಯ ನೆನಪಿನಲ್ಲಿ  ಮದುವೆ ವಾರ್ಷಿಕೋತ್ಸವಕ್ಕೂ ವಿಶೇಷ ಪೋಸ್ಟ್‌ ಶೇರ್‌ ಮಾಡಿದ್ದಾರೆ ನಟಿ ಮೇಘನಾ. 2018ರ ಮೇ 2ರಂದು ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿತ್ತು. ಪತಿಯ ನೆನಪಿನಲ್ಲಿ ಈಗ ಆ ವಿವಾಹ ವಾರ್ಷಿಕೋತ್ಸವದ ನೆನಪಿನಲ್ಲಿ ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಮೇಘನಾ. ಮೇಣದ ಬತ್ತಿಯ ಬೆಳಕಲ್ಲಿ ಮೇಘನಾ ಮತ್ತು ಚಿರು ಕುಳಿತ ಭಂಗಿಯ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ,   ಭಾವುಕ ಕ್ಯಾಪ್ಷನ್‌ ನೀಡಿದ್ದಾರೆ.  

 ‘ನನ್ನ ಮಿಸ್ಟರ್‌ ರೈಟ್.‌ ಕರಾಳ ರಾತ್ರಿಯಲ್ಲೂ, ಸುರಂಗದಾಳದಲ್ಲೂ ಮಿನುಗುವ ಬೆಳಕು ನೀನು" ಎಂದು ಪೋಸ್ಟ್‌ ಮಾಡಿ, ಹ್ಯಾಪಿ ಆನಿವರ್ಸರಿ ಎಂದಿದ್ದಾರೆ.  ಇನ್ನು ಪುತ್ರ   ರಾಯನ್​ ಸರ್ಜಾ ಕುರಿತು ಹೇಳುವುದಾದರೆ, ಈತನಿಗೆ ಈಗ ಮೂರುವರೆ ವರ್ಷ. ಅಕ್ಟೋಬರ್​ 22ರ 2020ರಂದು ಹುಟ್ಟಿರುವ ರಾಯನ್​  ಸಕತ್​ ಚೂಟಿಯಾಗಿದ್ದಾನೆ. ಈತನ ಹಲವಾರು ವಿಡಿಯೋ ಮಾಡಿ ಮೇಘನಾ ಅದನ್ನು ಶೇರ್‌ ಮಾಡುತ್ತಿಲಿರುತ್ತಾರೆ.  

ಚಿರು ಪುತ್ರನ ಡ್ಯಾನ್ಸ್‌ಗೆ ಮನಸೋತ ನೆಟ್ಟಿಗರು: ಭವಿಷ್ಯದ ಸ್ಟಾರ್‌ ನಟ ಫಿಕ್ಸ್‌ ಎಂದ ಫ್ಯಾನ್ಸ್‌

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Latest Videos
Follow Us:
Download App:
  • android
  • ios