Asianet Suvarna News Asianet Suvarna News

ಕೊಲೆ ಪ್ರಕರಣ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ, ಬ್ಯಾನ್ ಆಗ್ತಾರಾ ನಟ ದರ್ಶನ್?

ಚಲನಚಿತ್ರವಾನಿಜ್ಯಮಂಡಳಿ ಪದಾಧಿಕಾರಿಗಳು ನಾಳೆ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತಿದ್ದಾರೆ. ದರ್ಶನ್ ಪರ ನಾವಿಲ್ಲ, ಅನ್ಯಾಯ ಯಾರಿಗೆ ಆಗಿದೆಯೋ ಅವರ ಪರ ಕನ್ನಡ ಚಿತ್ರರಂಗ ಇರುತ್ತದೆ..

Meeting held in Karnataka film chamber about actor Darshan involvement in RenukaSwamy murder case srb
Author
First Published Jun 13, 2024, 4:52 PM IST

ಕನ್ನಡದ ನಟ ದರ್ಶನ್ (Actor Darshan) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಹಿನ್ನೆಲೆಯಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (KFCC) ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದರ್ಶನ್ ಕುರಿತು ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಯಾವೆಲ್ಲಾ ಅಂಶಗಳ ಮೇಲೆ ಈಗ ನಡೆಯುವ ಸಭೆಯಲ್ಲಿ ಚರ್ಚೆ ಆಗಬಹುದು? ಈ ಬಗ್ಗೆ ಸಿಕ್ಕ ಮಾಹಿತಿ ಇಲ್ಲಿದೆ..

ದರ್ಶನ್‌ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕಾ? ಈ ಬಗ್ಗೆ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಮ್ಮೆ ಹಾಗೆ ಮಾಡಿದರೆ, ದರ್ಶನ್ ಜೊತೆ ಈಗಾಗಲೆ ಸಿನಿಮಾ ಮಾಡುತ್ತಿರುವ ನಿರ್ಮಾಪಕರ  ಪಾಡೇನು..? ಈ ಬಗ್ಗೆ ಖಂಡಿತ ಚರ್ಚೆ ಆಗಲಿದೆ. ದರ್ಶನ್​ ಜೊತೆ ಸಿನಿಮಾ ಮಾಡಲು ಈಗಾಗಲೆ ಅಡ್ವಾನ್ಸ್ ಹಣ ಕೊಟ್ಟಿರುವ ನಿರ್ಮಾಪಕರ ಕತೆಯೇನು..? ಈ ಸಂಗತಿ ಕೂಡ ಬಹು ಮುಖ್ಯವಾಗಿದ್ದು ಈ ಬಗ್ಗೆ ಚರ್ಚೆ ನಡೆಯಲಿದೆ. 

ಮಾಲಾಶ್ರೀ ಚಿತ್ರಕ್ಕೆ ರವಿಚಂದ್ರನ್‌ಗೆ ಸಹಾಯ ಮಾಡಿದ್ರು ನಟಿ ಖುಷ್ಬೂ; ಇದೇನಿದು ಜಾದೂ ಗುರೂ!

ಡೆವಿಲ್ ಸಿನಿಮಾ ಈಗಾಗಲೆ 80 ಪರ್ಸೆಂಟ್ ಚಿತ್ರೀಕರಣ ನಡೆದಿದೆ. 40 ಕೋಟಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ದರ್ಶನ್ ಸಂಭಾವನೆ 22 ಕೋಟಿ ಎನ್ನಲಾಗಿದೆ. ನಿರ್ಮಾಪಕಿ ಶೈಲಾಜಾ ನಾಗ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ದರ್ಶನ್ ಹೊಸ ನಿರ್ಮಾಪಕರುಗಳು ಈಗಾಗಲೆ ನಟ ದರ್ಶನ್​ಗೆ ಅಡ್ವಾನ್ಸ್ ಕೊಟ್ಟಿದ್ದಾರೆನ್ನಲಾಗಿದೆ.  ಆ ಚಿತ್ರಗಳ ಕತೆ ಏನು..?

ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?

ಚಲನಚಿತ್ರವಾನಿಜ್ಯಮಂಡಳಿ ಪದಾಧಿಕಾರಿಗಳು ನಾಳೆ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತಿದ್ದಾರೆ. ದರ್ಶನ್ ಪರ ನಾವಿಲ್ಲ, ಅನ್ಯಾಯ ಯಾರಿಗೆ ಆಗಿದೆಯೋ ಅವರ ಪರ ಕನ್ನಡ ಚಿತ್ರರಂಗ ಇರುತ್ತದೆ ಎಂಬುದನ್ನು ಧೃಢಪಡಿಸಲು ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಇದೀಗ ನಡೆಯುತ್ತಿರುವ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ದಯತೆ ದಟ್ಟವಾಗಿದೆ. 

ಮಧ್ಯರಾತ್ರಿಯಲ್ಲಿ ನಟಿ ನಯನತಾರಾ ಅಪಾರ್ಟ್‌ಮೆಂಟ್‌ನಲ್ಲಿ ಏನ್ ಮಾಡ್ತಿದ್ರು, ಗಲಾಟೆ ಯಾಕಾಯ್ತು?

ಸಿಕ್ಕ ಮಾಹಿತಿ ಪ್ರಕಾರ, ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದ ಪರ ಚಲನಚಿತ್ರ ವಾಣಿಜ್ಯ ಮಂಡಳಿ ನಿಲ್ಲಲಿದೆ. ಕೆಎಫ್​ಸಿಸಿ (Karnataka Film Chamber) ರೇಣುಕಾಸ್ವಾಮಿ ಕುಟಂಬದ ದುಃಖಕ್ಕೆ ಹೆಗಲು ನೀಡಲು ಮುಂದಾಗಿದೆ ಎನ್ನಲಾಗಿದೆ. ಕುಟುಂಬಕ್ಕೆ ಕೇವಲ ಸಮಾಧಾನ ಮಾಡದೇ ಹಣದ ಸಹಾಯವನ್ನೂ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳಲಿದೆ. 

Latest Videos
Follow Us:
Download App:
  • android
  • ios