ಮಧ್ಯರಾತ್ರಿಯಲ್ಲಿ ನಟಿ ನಯನತಾರಾ ಅಪಾರ್ಟ್‌ಮೆಂಟ್‌ನಲ್ಲಿ ಏನ್ ಮಾಡ್ತಿದ್ರು, ಗಲಾಟೆ ಯಾಕಾಯ್ತು?

ಖ್ಯಾತ ನಿರ್ಮಾಪಕ ಅನಂತನನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಂತೆ, ಚೆನ್ನೈನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ನಯನತಾರಾ ವಾಸಿವಾಗಿದ್ದ ನಡೆಯುತ್ತಿದ್ದ ಘಟನೆ ಬಗ್ಗೆ ಅವರು ಹೇಳಿದ್ದಾರೆ..

Actress Nayanthara quarrel with many people in her apartment gossip srb

ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಟಿ ನಯನತಾರಾ (Nayanthara), ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಬಳಿಕ ಅವರು ಸಿನಿಮಾ ಇಂಡಸ್ಟ್ರಿಗೆ ಬಂದು ಒಂದೊಂದೇ ಸಿನಿಮಾಗಳ ಮೂಲಕ ಬೆಳೆಯುತ್ತಾ ಹೋದರು. ಅವರ ಕಾಲದ ಎಲ್ಲಾ ಘಟಾನುಘಟಿ ಸ್ಟಾರ್ ಹೀರೋಗಳೊಂದಿಗೂ ತೆರೆ ಹಂಚಿಕೊಂಡಿರುವ ನಟಿ ನಯನತಾರಾ ಇಂದು ಬಾಲಿವುಡ್‌ ಸಿನಿಮಾ ಕೂಡ ಮಾಡಿರುವ ಸೌತ್ ಸೂಪರ್ ಸ್ಟಾರ್. ಸದ್ಯ ವಿಘ್ನೇಶ್ ಅವರೊಂದಿಗೆ ಮದುವೆಯಾಗಿದ್ದು, ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳನ್ನೂ ಪಡೆದಿದ್ದಾರೆ. 

ನಟಿ ನಯನತಾರಾ ಅವರು ಈಗಾಗಲೇ 75 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಮದುವೆ ಮಾಡಿಕೊಂಡಿದ್ದರೂ ನಟಿಯ ಬೇಡಿಕೆ ಸ್ವಲ್ಪವೂ ಕುಗ್ಗಿಲ್ಲ. ಕಳೆದ ವರ್ಷ ಬಾಲಿವುಡ್‌ ನಟ ಶಾರುಖ್ ಖಾನ್ ಜೋಡಿಯಾಗಿ ಪಠಾಣ್ ಚಿತ್ರದಲ್ಲಿ ನಟಿಸಿರುವ ನಯನತಾರಾಗೆ ಬಾಲಿವುಡ್‌ನಿಂದಲೂ ಆಫರ್‌ಗಳು ಬರುತ್ತಿವೆ. ಆದರೆ, ನಟಿ ನಯನತಾರಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಬ್ಯುಸಿ ಆಗಿದ್ದಾರೆ. ಇವೆಲ್ಲಕ್ಕೂ ಮೀರಿದ ಸಂಗತಿಯೊಂದಿದೆ. 

ಆ್ಯಂಕರ್ ಅನುಶ್ರೀ ಜತೆ ಉಪೇಂದ್ರ ; ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು ಕಾಶೀನಾಥ್!

ಅದೇನೆಂದರೆ, ಖ್ಯಾತ ನಿರ್ಮಾಪಕ ಅನಂತನನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಂತೆ, ಚೆನ್ನೈನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ನಯನತಾರಾ ವಾಸಿವಾಗಿದ್ದ ನಡೆಯುತ್ತಿದ್ದ ಘಟನೆ ಬಗ್ಗೆ ಅವರು ಹೇಳಿದ್ದಾರೆ. ತಮ್ಮ ಫ್ಯಾಮಿಲಿಯೊಂದಿಗೆ ಅಲ್ಲಿ ವಾಸವಿದ್ದ ನಟಿ ನಯನತಾರಾ, ಅಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದರಂತೆ. ಅಕ್ಕಪಕ್ಕದ ಮನೆಯವರು ನಟಿಯ ಗಲಾಟೆಗೆ ಬೇಸತ್ತು ಹೋಗಿದ್ದರಂತೆ. ರಾತ್ರಯಾದರೆ ಸಾಕು ನಯನತಾರಾ ಗಲಾಟೆ ಜಾಸ್ತಿ ಆಗುತ್ತಿತ್ತು ಎನ್ನಲಾಗಿದೆ. 

ಡಾ ರಾಜ್‌ ದಂಪತಿ ಮೊದಲ ಜಗಳದಲ್ಲಿ ಪಾರ್ವತಮ್ಮ ಹಸಿಮೆಣಸಿನಕಾಯಿ ಹಿಂಡ್ಕೊಂಡಿದ್ರು ಯಾಕೆ?

ಬಹಳಷ್ಟು ಬಾರಿ ನಟಿ ನಯನತಾರಾ ಮಧ್ಯರಾತ್ರಿಯಲ್ಲಿ ಎದ್ದು ಯಾವುದೋ ಕಾರಣಕ್ಕೆ ಫೋನಿನಲ್ಲಿ ಅಥವಾ ವ್ಯಕ್ತಿಗಳ ಜತೆ ಕೂಗಾಡುತ್ತಿದ್ದರಂತೆ. ಒಮ್ಮೆ ಆಟೋ ಡ್ರೈವರ್ ಒಬ್ಬರ ಬಳಿ 'ನೀವ್ಯಾಕೆ ಮಕ್ಕಳು ಆಟವಾಡುತ್ತಿರುವಾಗ ನಮ್ಮ ಅಪಾರ್ಟ್‌ಮೆಂಟ್ ಕಾರಿಡಾರ್‌ನಲ್ಲಿ ಅಷ್ಟು ವೇಗವಾಗಿ ವಾಹನ ಓಡಿಸುತ್ತೀರಿ' ಎಂದು ಕೂಗಾಡಿದ್ದರಂತೆ. ಇನ್ನೊಮ್ಮೆ ಡೆಲಿವರ್ ಬಾಯ್ ಜತೆ ಮಧ್ಯರಾತ್ರಿ ತಗಾದೆ ತೆಗೆದು ಕಿರಿಚುತ್ತಿದ್ದರಂತೆ. ಒಂದಲ್ಲ ಎರಡಲ್ಲ, ಹೇಳುತ್ತಾ ಹೋದರೆ ನಾರಾರು ಆಗುತ್ತದೆ. 

ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?

ನಯನತಾರಾ ವಿರುದ್ಧ ನಿರ್ಮಾಪಕರ ಸಂಗಕ್ಕೆ 50ಕ್ಕೂ ಹೆಚ್ಚು ದೂರುಗಳು ಬಂದಿವೆ. ಅದನ್ನೆಲ್ಲ ತುಂಬಾ ದಿನ ಸಹಿಸಲು ಸಾಧ್ಯವಾಗದ ಅಪಾರ್ಟ್‌ಮೆಂಟ್‌ನವರು ನಟಿಗೆ ಖಾಲಿ ಮಾಡಲು ಹೇಳಿದ್ದರಂತೆ. ಅದೇ ಕಾರಣವೋ ಎಂಬಂತೆ, ನಯನತಾರಾ ಅಪಾರ್ಟ್‌ಮೆಂಟ್ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಈಗ ಸ್ವಂತ ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಈಗ ಅವರ ಅಕ್ಕಪಕ್ಕದ ಮನೆಯವರ ಗತಿ ಏನೋ ಗೊತ್ತಿಲ್ಲ' ಎಂದಿದ್ದಾರೆ ಅನಂತನನ್. ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಪರ-ವಿರೋಧ ಎರಡೂ ರೀತಿಯ ಕಾಮೆಂಟ್‌ಗಳು ಬಂದಿವೆ. 

Latest Videos
Follow Us:
Download App:
  • android
  • ios