Asianet Suvarna News Asianet Suvarna News

ನಟಿ ಖುಷ್ಬೂ ರವಿಚಂದ್ರನ್‌ಗೆ ಯಾಕೆ ಹಣ ಕೊಟ್ರು? ಮಾಲಾಶ್ರೀಗೂ ಅದಕ್ಕೂ ಲಿಂಕ್ ಏನು?

ಅವರ ಹರಕೆಯಂತೆ ನಟ ರವಿಚಂದ್ರನ್ ನಿರ್ಮಾಣ ಹಾಗು ನಟನೆಯ ರಾಮಾಚಾರಿ ಚಿತ್ರವು ಸೂಪರ್ ಹಿಟ್ ಆಗಿ ರವಿಚಂದ್ರನ್ ಅವರಿಗೆ ಹಣದ ಹೊಳೆಯನ್ನೇ ಹರಿಸಿತ್ತು. ಮಾಡಿದ್ದ ಸಾಲವನ್ನೆಲ್ಲ ರಾಮಾಚಾರಿ ಚಿತ್ರದ ಮೂಲಕ ತೀರಿಸಿಕೊಂಡು ರವಿಚಂದ್ರನ್..

Actress Khushboo helps actor V Ravichandran for his Ramachari movie production srb
Author
First Published Jun 13, 2024, 3:57 PM IST

ನಟಿ ಖುಷ್ಬೂ ಯಾರಿಗೆ ಗೊತ್ತಿಲ್ಲ? ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸಿ ಖ್ಯಾತಿ ಹೊಂದಿದವರು. ಅಪಾರ ಚೆಲುವು ಹಾಗೂ ಅಮೋಘ ನಟನೆಯಿಂದ ಹಲವು ಪ್ರಶಸ್ತಿ ಸೇರದಂತೆ ಬಹಳಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ. ಇಂಥ ನಟಿ ಕನ್ನಡದಲ್ಲಿ ನಟ ರವಿಚಂದ್ರನ್ ಜತೆ 'ರಣಧೀರ' ಹಾಗು 'ಅಂಜದ ಗಂಡು'  ಚಿತ್ರದಲ್ಲಿ ನಟಿಸಿದ್ದಾರೆ. ನಟ ವಿಷ್ಣುವರ್ಧನ್ ಜೊತೆ 'ಜೀವನದಿ' ಹಾಗೂ ಅನಂತ್‌ನಾಗ್ ಜತೆ 'ಗಗನ' ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

ನಟಿ ಖುಷ್ಬೂ ಅವರು ಸುಂದರಂ ಜತೆ ಮದುವೆಯಾಗಿದ್ದು ಖುಷ್ಬೂ ಸುಂದರಂ ಎಂದೇ ಹೆಸರಾಗಿರುವವರು. ನಟಿಯಾಗಿ ಅವರು ಖುಷ್ಬೂ ಎಂಬ ಹೆಸರಿನಿಂದ ಖ್ಯಾತರಾಗಿದ್ದು, ಸದ್ಯ ರಾಜಕೀಯದಲ್ಲೂ ಅವರು ಸಕ್ರಿಯರಾಗಿದ್ದಾರೆ. ಇದೀಗ ನಟಿ ಸೋಷಿಯಲ್ ಮೀಡಿಯಾಗಳಲ್ಲಿ ಬೇರೊಂದು ವಿಷಯಕ್ಕೆ ವೈರಲ್ ಆಗುತ್ತಿದ್ದಾರೆ. ಅವರು ಕನ್ನಡದ ನಟ ರವಿಚಂದ್ರನ್ ಅವರಿಗೆ ಒಂದಾನೊಂದು ಕಾಲದಲ್ಲಿ ಸಹಾಯ ಮಾಡಿದ್ದರು ಎಂಬ ವಿಷಯ ಈ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ. 

ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?

ಹೌದು, ನಟಿ ಖುಷ್ಬೂ ಸುಂದರಂ ಅವರು ನಟ ವಿ ರವಿಚಂದ್ರನ್ ಅವರಿಗೆ 35 ಲಕ್ಷ ಹಣದ ಸಹಾಯ ಮಾಡಿದ್ದರಂತೆ. ಅದೂ ಅಂತಿಂಥ ಸಮಯದಲ್ಲಿ ಅಲ್ಲ, ನಟ ರವಿಚಂದ್ರನ್ ಅವರು ಸೋತು ಸುಣ್ಣವಾಗಿದ್ದಾಗ. ಮಾಲಾಶ್ರೀ ಹಾಗೂ ರವಿಚಂದ್ರನ್ ಅಭಿನಯದ 'ರಾಮಾಚಾರಿ' ಚಿತ್ರದ ನಿರ್ಮಾಣಕ್ಕಾಗಿ ನಟ ರವಿಚಂದ್ರನ್ ಅವರಿಗೆ ನಟಿ ಖುಷ್ಬೂ 25 ಲಕ್ಷ ಹಣದ ಸಹಾಯ ಮಾಡಿ, 'ಮತ್ತೆ ಗೆದ್ದು ನಿಮ್ಮ ಕೆಲಸ ಮುಂದುವರಿಸುವಂತಾಗಲಿ' ಎಂದು ಹಾರೈಸಿದ್ದರಂತೆ. 

ಮಧ್ಯರಾತ್ರಿಯಲ್ಲಿ ನಟಿ ನಯನತಾರಾ ಅಪಾರ್ಟ್‌ಮೆಂಟ್‌ನಲ್ಲಿ ಏನ್ ಮಾಡ್ತಿದ್ರು, ಗಲಾಟೆ ಯಾಕಾಯ್ತು?

ಅವರ ಹರಕೆಯಂತೆ ನಟ ರವಿಚಂದ್ರನ್ ನಿರ್ಮಾಣ ಹಾಗು ನಟನೆಯ ರಾಮಾಚಾರಿ ಚಿತ್ರವು ಸೂಪರ್ ಹಿಟ್ ಆಗಿ ರವಿಚಂದ್ರನ್ ಅವರಿಗೆ ಹಣದ ಹೊಳೆಯನ್ನೇ ಹರಿಸಿತ್ತು. ಮಾಡಿದ್ದ ಸಾಲವನ್ನೆಲ್ಲ ರಾಮಾಚಾರಿ ಚಿತ್ರದ ಮೂಲಕ ತೀರಿಸಿಕೊಂಡು ರವಿಚಂದ್ರನ್ ಅವರು ಮತ್ತೆ ಸಿನಿಮಾ ಉದ್ಯಮದಲ್ಲಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಯವಷ್ಟರ ಮಟ್ಟಿಗೆ ರಾಮಾಚಾರಿ ಚಿತ್ರವು ಅಂದು ನಟ ರವಿಚಂದ್ರನ್ ಅವರ ಕೈ ಹಿಡಿದು ನಡೆಸಿತ್ತು. ಅಂದಹಾಗೆ, ಈ ಚಿತ್ರವು 1991ರಲ್ಲಿ ತೆರೆಗೆ ಬಂದಿತ್ತು. 

ಆ್ಯಂಕರ್ ಅನುಶ್ರೀ ಜತೆ ಉಪೇಂದ್ರ ; ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು ಕಾಶೀನಾಥ್!

ಒಟ್ಟಿನಲ್ಲಿ, ನಟಿ ಖುಷ್ಬೂ ಅಂದು ಮಾಡಿದ್ದ ಸಹಾಯ ನಟ ರವಿಚಂದ್ರನ್ ಅವರಿಗೆ ವರದಾನಯಾಯಿತು. ಅಂದಿನ 25 ಲಕ್ಷ ಇಂದು ಕೋಟಿ ರೂಪಾಯಿಗೆ ಸಮ. ಇಂದಿಗೂ ಕೂಡ ನಟ ರವಿಚಂದ್ರನ್ ಹಾಗು ನಟಿ ಖುಷ್ಬೂ ಅವರು ಒಳ್ಳೆಯ ಸ್ನೇಹಿತರಾಗಿಯೇ ಇದ್ದಾರಂತೆ. ಇಂದು ನಟ ರವಿಚಂದ್ರನ್ ಅವರು ನಟನೆ ಹಾಗು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರೆ ನಟಿ ಖುಷ್ಬೂ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. 

Latest Videos
Follow Us:
Download App:
  • android
  • ios