ಅಯ್ಯೋ ಪಾಪ... ಹುಚ್ಚ ವೆಂಕಟ್ ಒಳ್ಳೆಯವ್ರು ಆದರೆ ಸ್ವಲ್ಪ ಸಹಾಯ ಬೇಕಿತ್ತು: ಕಿಚ್ಚ ಸುದೀಪ್

ಹುಚ್ಚ ವೆಂಕಟ್‌ಗೆ ಬರೀ ಬೈಯುವವರೇ ಇದ್ದಾರೆ...ಆದರೆ ಸುದೀಪ್ ಮಾತ್ರ ಪಾಪಾ ಅಂತಿದ್ದಾರೆ...ಯಾಕೆ ಗೊತ್ತಾ?

Max Sudeep talks about bigg boss Huccha ventak behaviour vcs

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌ ಸಿನಿಮಾ ರಾಜಾದ್ಯಂತ ಬಿಡುಗಡೆಯಾಗಿದೆ. ಸುಮಾರು ಎರುಡ ವರ್ಷಗಳ ನಂತರ ಸುದೀಪ್ ಸಿನಿಮಾ ತೆರೆ ಮೇಲೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳಿಗೆ ಬೇಸರ ಮಾಡಬಾರದು ಎಂದು ಸುದೀಪ್ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದಾರೆ ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಮ್ಯಾಕ್ಸ್‌ ಪ್ರೆಸ್‌ಮೀಟ್‌ನಲ್ಲಿ ಸಿನಿಮಾ ಬಗ್ಗೆ ಮಾತ್ರವಲ್ಲದೆ ತಾಯಿ,ತಂದೆ, ಮಗಳು, ಮಡದಿ ಮತ್ತು ಬಿಗ್ ಬಾಸ್‌ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನಿರೂಪಕ ಹುಚ್ಚ ವೆಂಕಟ್‌ ಬಗ್ಗೆ ಪ್ರಶ್ನಿಸಿದ್ದಾರೆ. 

ಬಿಗ್ ಬಾಸ್ ರಿಯಾಲಿಟಿ ಶೋ ಆರಂಭದಿಂದಲೂ ನಿರೂಪಣೆ ಮಾಡುತ್ತಿರುವುದು ಕಿಚ್ಚ ಸುದೀಪ್. ಸೀಸನ್ 3ರಲ್ಲಿ ಕನ್ನಡದ ಕಂದ ಫೈಟಿಂಗ್ ಆಂಡ್ ಫಯರಿಂಗ್ ಸ್ಟಾರ್ ಹುಚ್ಚ ವೆಂಕಟ್ ಸ್ಪರ್ಧಿಸಿದ್ದರು. ಆಗ ಮತ್ತೊಬ್ಬ ಸ್ಪರ್ಧಿ ಮೇಲೆ ಹಲ್ಲೆ ಮಾಡಿದರು ಎನ್ನುವ ಕಾರಣ ಹೊರ ಹಾಕಲಾಗಿತ್ತು. ಅಲ್ಲಿಗೆ ಸುಮ್ಮನಾಗದೆ ಸೀಸನ್ 4ರಲ್ಲಿ ಅವಕಾಶ ಕೊಟ್ಟರು, ಆಗ ಬೌನ್ಸರ್‌ಗಳ ಜೊತೆ ಎಂಟ್ರಿ ಕೊಟ್ಟರು. ಬಿಬಿ ಮನೆಯೊಳಗೆ ಹೋಗುತ್ತಿದ್ದಂತೆ ಹಲ್ಲೆ ಮಾಡಿಬಿಟ್ಟರು. ಮತ್ತೊಮ್ಮೆ ಹೊರ ಬಂದರು. ಅಲ್ಲಿಂದ ಹುಚ್ಚ ವೆಂಕಟ್‌ ಸರಿ ಇಲ್ಲ ಹಾಗೆ ಹೀಗೆ ಅನ್ನೋ ಆರೋಪಗಳು ಕೇಳಿ ಬರಲು ಶುರುವಾಗಿತ್ತು ಆದರೆ ಸುದೀಪ್ ಮಾತ್ರ ಗೌರವದಿಂದ ಮಾತನಾಡಿಸುತ್ತಿದ್ದರು. 

ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ; ವಿಧಾನಸೌಧ ಮುಂದೆ ಕಿರುಚಿ ಕೂಗಾಡಿದ ರೇಶ್ಮಾ ಆಂಟಿ ವಿಡಿಯೋ ವೈರಲ್

ಸುದೀಪ್ ಮಾತು: 

'ಅಯ್ಯೋ ಪಾಪ ಬಿಡಿ ಆ ವ್ಯಕ್ತಿಗೆ ಸ್ವಲ್ಪ ಸಮಸ್ಯೆ ಇತ್ತು. ಯಾರದ್ದೋ ಕಾರಿಗೆ ಹುಚ್ಚ ವೆಂಕಟ್ ಹಲ್ಲು ಹೊಡೆದಾಗ ಇಡೀ ಪ್ರಪಂಚ ಅವರಿಗೆ ಹಾಗೆ ಮಾಡಿ ಹೀಗೆ ಮಾಡಿ ಅಂತ ಹೇಳಿದ್ದರು. ಅವಾಗ ನಾನು ಏನು ಹೇಳಿದ್ದೆ? ಅವರು ನನ್ನನ್ನು ಸುದೀಪ್ ಎಂದು ಕರೆದಿದ್ದಾರೆ ಜೈಲಿಗೆ ಹಾಕಿ ಎನ್ನಬಹುದಿತ್ತು. ಆದರೆ ಅವರಿಗೆ ಸಹಾಯ ಬೇಕಿತ್ತು. ನಮ್ಮನೆಯವರು ಆದಾಗ ನಾವು ಏನ್ ಮಾಡ್ತೀವಿ ಹೊರಟ ಸ್ವಲ್ಪ ಆದರೆ ಒಳ್ಳೆಯವನು ಅಂತೀವಿ. ನಿಜ ಹೇಳಬೇಕು ಅಂದ್ರೆ ಹುಚ್ಚ ವೆಂಕಟ್ ತುಂಬಾ ಒಳ್ಳೆಯವರು..ಅವರಿಗೆ ಸಹಾಯ ಬೇಕಿತ್ತು ಅಷ್ಟೆನೇ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ.

ಸಮಂತಾ ಪ್ರೆಗ್ನೆನ್ಸಿ ಫೋಟೋ ವೈರಲ್; ನಾಗ ಚೈತನ್ಯಾ ಹೊಟ್ಟೆ ಉರಿಸೋ ಕೆಲಸ ನಡಿತಿದ್ಯಾ?

Latest Videos
Follow Us:
Download App:
  • android
  • ios