"ಹಾಯ್ ಫ್ರೆಂಡ್ಸ್" ರೀಲ್ಸ್‌ಗಳಿಂದ ಖ್ಯಾತಿ ಪಡೆದ ರೇಷ್ಮಾ ಆಂಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ನಂತರ ಅವರ ಜನಪ್ರಿಯತೆ ಹೆಚ್ಚಿದೆ. ಈಗ ವಿಧಾನಸೌಧದ ಮುಂದೆ ರಾತ್ರಿ ವೇಳೆ ವಿಡಿಯೋ ಮಾಡಿ, ಒಳಗೆ ಹೋಗಿ ಸಿದ್ದರಾಮಯ್ಯರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಜನರು ಕಾಮೆಂಟ್ ಮಾಡಿ ತಮ್ಮನ್ನು ಒಳಗೆ ಕಳುಹಿಸಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ಈ ವಿಡಿಯೋಗೆ ನಕಾರಾತ್ಮಕ ಪ್ರತಿಕ್ರಿಯೆಗಳು ಕೂಡ ಬಂದಿವೆ. ಕೆಲವರು ಅವರ ವರ್ತನೆಯನ್ನು ಟೀಕಿಸಿದ್ದಾರೆ.

ಹಾಯ್ ಫ್ರೆಂಡ್ಸ್ ಬಾಯ್ ಫ್ರೆಂಡ್ ಅಂತ ಕೂಗಿ ರೀಲ್ಸ್‌ ಮಾಡುವ ರೇಶ್ಮಾ ಆಂಟಿ ಇದೀಗ ಮತ್ತೆ ವೈರಲ್ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿಗಿಲಿ ರೀ-ಲೋಡೆಡ್ಡ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ರೇಶ್ಮಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇಷ್ಟು ದಿನ ದಿನದಲ್ಲಿ 10 ವಿಡಿಯೋ ಹಾಕಿಲ್ಲ ಅಂದ್ರೆ ರೇಷ್ಮಾ ಆಂಟಿಗೆ ಬೇಸರ ಆಗುತ್ತಿತ್ತು ಆದರೆ ಈಗ ಹಾಕಿಲ್ಲ ಅಂದ್ರೆ ಫಾಲೋವರ್ಸ್‌ಗೆ ಬೇಸರ ಆಗಲು ಶುರುವಾಗಿದೆ. ಅಷ್ಟರ ಮಟ್ಟಕ್ಕೆ ಕ್ರೇಜ್ ಹುಟ್ಟುಹಾಕಿರುವ ರೇಶ್ಮಾ ಆಂಟಿ ಇದೀಗ ಮತ್ತೊಂದು ವೈರಲ್ ವಿಡಿಯೋ ಮಾಡಿದ್ದಾರೆ ಅದುವೇ ವಿಧಾನಸೌಧದ ಮುಂದೆ. 

ಹೌದು! ರಾತ್ರಿ ವೇಳೆ ವಿಧಾನಸೌಧ ಮುಂದೆ ರೇಶ್ಮಾ ಆಂಟಿ ಜೋರಾಗಿ ಕಿರುಚಿ ಕೂಗಾಡಿದ್ದಾರೆ. 'ಹಾಯ್ ಫ್ರೆಂಡ್ಸ್‌ ನಾವು ಎಲ್ಲಿ ಬಂದಿದ್ದೀವಿ ಗೊತ್ತಾ?' ಎಂದು ಹೇಳುತ್ತಾ ವಿಧಾನಸೌಧ ಮುಖ್ಯ ಧ್ವಾರದ ಮುಂದೆ ನಿಂತುಕೊಳ್ಳುತ್ತಾರೆ. 'ಅಯ್ಯೋ ಗೇಟ್ ತೆಗೆಯಪ್ಪೋ...ಯಾರು ಇಲ್ವಾ ಯಾರೂ ಇಲ್ಲ. ನಾನು ಒಳಗಡೆ ಹೋಗಬೇಕು ಎಲ್ಲರನ್ನು ನೋಡಬೇಕು. ಚಿಕ್ಕ ಹುಡುಗಿಯಿಂದ ನನಗೆ ಈ ಆಸೆ ಇದೆ. 1ನೇ ಕ್ಲಾಸ್‌ನಿಂದ 10ನೇ ಕ್ಲಾಸ್‌ವರೆಗೂ ಬುಕ್‌ನಲ್ಲಿ ಹಾಕಿರುತ್ತಾರೆ ಅದೇ ವಿಧಾನಸೌಧ ಇದು. ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ...ಅವ್ರು ಒಳಗಡೆ ಕೂತಿರಬಹುದು. ನನ್ನನ್ನು ವಿಧಾನಸೌಧ ಒಳಗೆ ಕರ್ಕೊಂಡು ಹೋಗಲಿ ಎಂದು ಎಲ್ಲರೂ ಕಾಮೆಂಟ್ ಹಾಕಿ. ಜನರೇ ಪರಮಾತ್ಮ ಅವರೇ ನನ್ನನ್ನು ಒಳಗೆ ಕಳುಹಿಸಬೇಕು...ಈಗಲೇ ಒಳೆ ಹೋಗುತ್ತಿದ್ದೀನಿ ಅನ್ನೋ ಖುಷಿ ಇದೆ ಅದಿಕ್ಕೆ ಇಲ್ಲೇ ಫುಟ್‌ಪಾತ್‌ ಮೇಲೆ ಕುಳಿತುಕೊಂಡಿರುತ್ತೀನಿ' ಎಂದು ವಿಡಿಯೋದಲ್ಲಿ ರೇಶ್ಮಾ ಮಾತನಾಡಿದ್ದಾರೆ.

ಫಸ್ಟ್‌ ಸಿನಿಮಾದಲ್ಲಿ ಯಶ್‌ ಜೊತೆ ನಟಿಸಿದ ಐಶ್ವರ್ಯ; ರಮ್ಯಾ -ರಾಧಿಕಾ ಕೂಡ ಇದ್ದಾರೆ

'ಅಲ್ಲೇ ಪಕ್ಕದಲ್ಲಿ ನಿಮಾನ್ಸ್‌ ಆಸ್ಪತ್ರೆ ಇದೆ ಹೋಗು ತಾಯಿ, ಹುಚ್ಚು ಹುಚ್ಚಿ ತರ ವಿಧಾನಸೌಧ ಮುಂದೆ ಆಡುದ್ರೆ ತಗೋ ಬಂದು ಹೊಡಿತಾರೆ, ಕಾಮೆಂಟ್ ಹಾಕಿ ಹಾಕಿ ಗಿಚ್ಚಿ ಗಿಲಿಗಿಲಿಗೆ ಕಳ್ಸದ್ ಆಯ್ತು ಇನ್ನು ಕಾಮೆಂಟ್ ಹಾಕಿ ವಿಧಾನಸೌಧಕ್ಕೆ ಕಳುಸ್ತೀವಿ, ಯಾಕೆ ಅಕ್ಕ ಇಷ್ಟು ಓವರ್‌ ಆಗಿ ಆಡ್ತಿದ್ಯಾ ನಿಂಗೆ ಜಾಸ್ತಿ ಅನ್ಸಲ್ವಾ?' ಎಂದು ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್‌ಗಳು ಹರಿದಾಡುತ್ತಿದೆ. 

ದುಬಾರಿ ಕಾರು ಖರೀದಿಸಿದ ದಿವ್ಯಾ; ಅರವಿಂದ್‌ ಪಕ್ಕದಲ್ಲಿದ್ದರೂ 'ಬಘೀರ'ನೇ ಇಷ್ಟ

View post on Instagram