ಸಮಂತಾ ಪ್ರೆಗ್ನೆನ್ಸಿ ಫೋಟೋ ವೈರಲ್; ನಾಗ ಚೈತನ್ಯಾ ಹೊಟ್ಟೆ ಉರಿಸೋ ಕೆಲಸ ನಡಿತಿದ್ಯಾ?
AI ಬಳಸಿ ಸೃಷ್ಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಮಂತಾ ನಿಜಕ್ಕೂ ಪ್ರೆಗ್ನೆಂಟ್ ಅಂದುಕೊಂಡು ಬಿಟ್ರಾ?
ಟಾಲಿವುಡ್ ಎವರ್‌ಗ್ರೀನ್ ಬ್ಯೂಟಿ ಸಮಂತಾ ರುತ್ ಪ್ರಭು ಅತಿ ಹೆಚ್ಚು ಅಭಿಮಾನಿಗಳು ಪಡೆದಿರುವ ನಟಿ. ಹೀಗಾಗಿ ಸಮಂತಾಳಿಗೆ ಯಾರೇ ಮೋಸ ಮಾಡಿದ್ದರೂ ನೆಟ್ಟಿಗರು ಮೆಚ್ಚುವುದಿಲ್ಲ.
ಸದ್ಯ ಸಮಂತಾ ಬೇಬಿ ಬಂಪ್ ಜೊತೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಅಗುತ್ತಿದೆ. ಇದು ನಿಜನೋ ಸುಳ್ಳೋ ಅನ್ನೋ ಗೊಂದಲದಲ್ಲಿ ಇದ್ದಾರೆ ಅಭಿಮಾನಿಗಳು.
AI ಟೆಕ್ನಾಲಜಿ ಬಳಸಿಕೊಂಡು ಸಮಂತಾ ಗರ್ಭಿಣಿ ಆಗಿದ್ದಾಳೆ ಎಂದು ಕೆಲವು ಫೋಟೋ ಹರಡುತ್ತಿದ್ದಾರೆ. ಸಿಂಗಲ್ ಆಗಿರುವ ಸಮಂತಾ ಈ ಫೋಟೋಗಳನ್ನು ನೋಡಿದರೆ ಖಂಡಿತಾ ಶಾಕ್ ಆಗುತ್ತಾರೆ.
ಸಮಂತಾಳ ಬೇಬಿ ಬಂಪ್ ತೋರಿಸುವುದರ ಹಿಂದೆ ಇರುವ ಉದ್ದೇಶ ಏನು? ನೆಟ್ಟಿಗರು ಹೇಳುವ ಪ್ರಕಾರ ಇದು ಪಕ್ಕಾ ನಾಗ ಚೈತನ್ಯ ಹೊಟ್ಟೆ ಉರಿಸುವ ಕೆಲಸ ನಡೆಯುತ್ತಿದೆ ಅಂತಿದ್ದಾರೆ.
ಸದ್ಯ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿರುವ ಸಮಂತಾ ಮುಂದಿನ ಕೆಲಸಗಳ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮದುವೆ ಮಕ್ಕಳು ಅನ್ನೋ ಪ್ಲ್ಯಾನ್ ಪಕ್ಕಕ್ಕಿಟ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಈ ಹಿಂದೆ ಕರಣ್ ಜೋಹಾರ್ ನಡೆಸಿದ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ 'ನನ್ನ ಹಾರ್ಟ್ ಕ್ಲೋಸ್ ಆಗಿದೆ ಯಾರೂ ಎಂಟ್ರಿ ಕೊಡುವ ಪ್ರಯತ್ನ ಮಾಡಬೇಡಿ ಸುಮ್ಮನೆ ಯೂ ಟರ್ನ್ ತೆಗೆದುಕೊಳ್ಳಿ' ಎಂದಿದ್ದ ಮಾತುಗಳು ಈಗಲೂ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಸಮಂತಾ ತಂದೆಯನ್ನು ಕಳೆದುಕೊಂಡರು. ಸಮಂತಾ ಫ್ಯಾಮಿಲಿ ಸದ್ಯ ನೋವಿನಲ್ಲಿ ಇದ್ದಾರೆ. ಅಲ್ಲದೆ ನಾಗ ಚೈತನ್ಯಾ ಎರಡನೇ ಮದುವೆ ಮಾಡಿಕೊಂಡರು.